More

    ಬಿಎಸ್​ವೈ ಬಡಾವಣೆ ನಿವೇಶನಕ್ಕೆ ನೋಂದಣಿ ಆರಂಭ

    ಬೀದರ್: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮ ದಿನದ ನಿಮಿತ್ತ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಇಲ್ಲಿನ ಬಿ.ಎಸ್.ಯಡಿಯೂರಪ್ಪ ಬಡಾವಣೆಯಲ್ಲಿನ ನಿವೇಶನ ಹಂಚಿಕೆಗೆ ಶನಿವಾರದಿಂದ ನೋಂದಣಿ ಆರಂಭವಾಗಲಿದೆ.

    ನಗರದ ಹೊರವಲಯದ ಗೋರನಳ್ಳಿ ಸವರ್ೆ ನಂ. 21/1ಪಿಯಲ್ಲಿ 95 ನಿವೇಶನ ಹಾಗೂ ಸವರ್ೆ ನಂ. 22/2ರಲ್ಲಿ 93 ಸೇರಿ ಒಟ್ಟು 188 ಪ್ಲಾಟ್ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ನನೆಗುದಿಗೆ ಬಿದ್ದ್ದಿದ್ದ ಯಡಿಯೂರಪ್ಪ ಬಡಾವಣೆ ಕೆಲಸವನ್ನು ಬಿಡಿಎ ಅಧ್ಯಕ್ಷ ಬಾಬು ವಾಲಿ ಮತ್ತು ಆಯುಕ್ತ ಅಭಯಕುಮಾರ ವಿಶೇಷ ಕಾಳಜಿ ವಹಿಸಿ ತೀವ್ರಗತಿಯಲ್ಲಿ ಪೂರ್ಣಗೊಳಿಸಿ ಇದೀಗ ಸಾರ್ವಜನಿಕರಿಗೆ ನಿವೇಶನ ಹಂಚಿಕೆಗೆ ಮುಂದಾಗಿದ್ದಾರೆ.

    ಲೇಔಟ್ ಮಹಾದ್ವಾರ ಕಾರ್ಯ ಪೂರ್ಣಗೊಂಡಿದೆ. ಲೈಟಿಂಗ್, ಸಿಸಿ ರಸ್ತೆ, ಚರಂಡಿ ಇತರ ಮೂಲಸೌಕರ್ಯಗಳು ಕಲ್ಪಿಸುವ ಕೆಲಸ ಶೀಘ್ರ ಪ್ರಾರಂಭವಾಗಲಿವೆ. ಕಮ್ಮಿ ದರದಲ್ಲಿ ನಿವೇಶನ ಸಿಗಲಿದ್ದು, ಆಸಕ್ತರು ನೌಬಾದ್ ಹತ್ತಿರದ ಬಿಡಿಎ ಕಚೇರಿಗೆ ಭೇಟಿ ನೀಡಿ ನಿವೇಶನಕ್ಕೆ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ ತಿಳಿಸಿದ್ದಾರೆ.

    ನಾನು ಅಧಿಕಾರ ವಹಿಸಿಕೊಂಡ ಬಳಿಕ ಗೋರನಳ್ಳಿ ಸಮೀಪ 34 ಎಕರೆಯಲ್ಲಿ ಯಡಿಯೂರಪ್ಪ ಹೆಸರಿನಲ್ಲಿ ಲೇಔಟ್ ನಿಮರ್ಿಸಿರುವೆ. 1988ರಲ್ಲಿ ಸ್ಥಾಪನೆಯಾದ ಬಿಡಿಎದಿಂದ ಈವರೆಗೆ ಎರಡು ಲೇಔಟ್ ನಿಮರ್ಿಸಲಾಗಿತ್ತು. ಮೂರನೇ ಲೇಔಟ್ ಇದಾಗಿದೆ. ಮೊದಲ ಹಂತವಾಗಿ 188 ನಿವೇಶನ ಹಂಚಿಕೆ ಮಾಡುತ್ತಿದ್ದು, ಬರುವ ದಿನಗಳಲ್ಲಿ ಎರಡು ಸವರ್ೆ ನಂಬರ್ನಲ್ಲಿರುವ ಇನ್ನುಳಿದ ನಿವೇಶನಗಳನ್ನೂ ಹಂಚಲಾಗುತ್ತದೆ ಎಂದು ಹೇಳಿದ್ದಾರೆ.

    ಬಿಜೆಪಿಯನ್ನು ದಕ್ಷಿಣ ಭಾರತದಲ್ಲೇ ಮೊದಲ ಬಾರಿ ಅಧಿಕಾರಕ್ಕೆ ತಂದ ಶ್ರೇಯ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಸಿಎಂ ಆಗಿ ರೈತರ ಜತೆಗೆ ಎಲ್ಲ ಜಾತಿ, ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ದಣಿವರಿಯದ ಹೋರಾಟ, ರೈತ ಪರ ವಿಶೇಷ ಕಾಳಜಿಯನ್ನು ಹೊಂದಿದ್ದಾರೆ. ಬರುವ ದಿನಗಳಲ್ಲಿ ಅವರು ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿ 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರುತ್ತಾರೆಂದು ವಾಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts