More

    ಬಿಎಸ್‍ವೈ ಗ್ರಾಮಾಂತರ ಕ್ಷೇತ್ರದ ಕಾಮಧೇನು

    ಹೊಳೆಹೊನ್ನೂರು: ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆಧುನಿಕ ಭಗೀರಥ ಇದ್ದಂತೆ. ಶಿವಮೊಗ್ಗ ಗ್ರಾಮಾಂತರದ ಪಾಲಿಗೆ ಕಾಮಧೇನು ಎಂದು ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್ ನಾಯ್ಕ್ ಬಣ್ಣಿಸಿದರು.
    ಆನವೇರಿಯಲ್ಲಿ 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ಗ್ರಾಮೀಣ ಕ್ಷೇತ್ರಕ್ಕೆ ಕೋಟ್ಯಂತರ ರೂ. ಅನುದಾರ ಲಭಿಸಿದ್ದು, ಕ್ಷೇತ್ರದ ಯಾವುದೇ ಹಳ್ಳಿಯೂ ಮೂಲ ಸೌಲಭ್ಯಗಳಿಂದ ವಂಚಿತವಾಗಿಲ್ಲ. ಬಾಕ್ಸ್ ಕಾಲುವೆ ಹಾಗೂ ಸಿಸಿ ರಸ್ತೆಯ ಸಮಸ್ಯೆ ಎಲ್ಲಿಯೂ ಇಲ್ಲ ಎಂದು ಹೇಳಿದರು.
    ಆನವೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಕಂದಾಯ ರಹಿತ ಗ್ರಾಮಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಜಯ ಸಂಕಲ್ಪ ಯಾತ್ರೆ ಎರಡು ದಿನಗಳ ಕಾಲ ಗ್ರಾಮಾಂತರದಲ್ಲಿ ಸಂಚರಿಸಲಿದೆ ಎಂದು ಹೇಳಿದರು.

    ಕೂಡ್ಲಿಗೆರೆಯ ಕಮ್ಮಾರಗಟ್ಟೆ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಈ ಭಾಗದಲ್ಲಿ 95 ಕೋಟಿ ರೂ. ವ್ಯಚ್ಚದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡಿದೆ. ಇಟ್ಟಿಗೆಹಳ್ಳಿಯಲ್ಲಿ 10 ಕೋಟಿ ರೂ. ವ್ಯಚ್ಚದಲ್ಲಿ ನೂತನ ಕೆರೆ ನಿರ್ಮಾಣವಾಗುತ್ತಿದೆ. ಸೈದರಕಲ್ಲಹಳ್ಳಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆಂದು 2 ಎಕರೆ ಮೀಸಲಿಡಲಾಗಿದೆ ಎಂದು ಹೇಳಿದರು.
    ಗ್ರಾಪಂ ಅಧ್ಯಕ್ಷೆ ಸುಜಾತ ಗಿರೀಶ್, ಉಪಾಧ್ಯಕ್ಷೆ ತೇಜಾವತಿ, ಮಂಡಲ ಅಧ್ಯಕ್ಷ ಡಿ.ಮಂಜುನಾಥ್, ಮುಖಂಡರಾದ ಷಡಾಕ್ಷರಪ್ಪ ಗೌಡ, ಜಗದೀಶಪ್ಪ ಗೌಡ, ನಟರಾಜಪ್ಪ ಗೌಡ, ಎಸ್.ಶ್ರೀನಿವಾಸ್, ಎಸ್.ಪಿ ದಿನೇಶ್, ಮಮತಾ, ತಿಪ್ಪೇಶ್, ಆರ್.ಶ್ರೀನಿವಾಸ್, ಸೈಯ್ಯದ್ ಸೀಮಾ, ಸೋಮಶೇಖರ್, ರಘುನಾಥ್, ಪರುಶುರಾಮ್, ಗಿರೀಶ್, ಪಣಿಯಾಚಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts