More

    ಬಿಎಸ್ಪಿ ಕಾರ್ಯಕರ್ತರಿಂದ ಮಾಯಾವತಿ ಹುಟ್ಟುಹಬ್ಬ ಆಚರಣೆ

    ಹುಣಸೂರು: ಬಹುಜನ ಸಮಾಜ ಪಾರ್ಟಿಯ ನಾಯಕಿ ಮಾಯಾವತಿ ಅವರ 67ನೇ ವರ್ಷದ ಹುಟ್ಟುಹಬ್ಬವನ್ನು ಪಕ್ಷದ ತಾಲೂಕು ಘಟಕದಿಂದ ಭಾನುವಾರ ಆಚರಿಸಲಾಯಿತು.

    ನಗರದ ಸಂವಿಧಾನದ ವೃತ್ತದಲ್ಲಿ ಕೇಕ್ ಕತ್ತರಿಸಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಹಂಚಲಾಯಿತು. ಈ ವೇಳೆ ಮಾತನಾಡಿದ ಪಕ್ಷದ ತಾಲೂಕು ಅಧ್ಯಕ್ಷ ಪ್ರಸನ್ನ ಸೋಮನಹಳ್ಳಿ, ಬಹುಜನರ ಆಶಾಕಿರಣವಾಗಿರುವ ಮಾಯಾವತಿ ಅವರು ಉತ್ತರಪ್ರದೇಶದಲ್ಲಿ ನೀಡಿದ ಬಹುಜನಪರ ಆಡಳಿತ ಇಂದಿಗೂ ಸ್ಮರಣೀಯ. ರಾಜ್ಯದಲ್ಲೂ ಬಿಎಸ್‌ಪಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಬಹುಜನರ ಪರವಾಗಿ ದುಡಿಯಲಿದೆ ಎಂದರು.

    ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ ಮಾತನಾಡಿ, ಕಾನ್ಶಿರಾಂ ಮಾರ್ಗದರ್ಶನದಲ್ಲಿ ಬೆಳೆದ ಮಾಯಾವತಿ ಉತ್ತರ ಪ್ರದೇಶದಲ್ಲಿ 4 ಬಾರಿ ಮುಖ್ಯಮಂತ್ರಿ ಆಗುವುದೆಂದರೆ ಸಾಮಾನ್ಯವಲ್ಲ. ಅವರು ಪ್ರಭಾವಿ ಮಹಿಳಾ ನಾಯಕಿಯಾಗಿದ್ದಾರೆ ಎಂದರು.

    ಡೀಡ್ ಸಂಸ್ಥೆ ಮುಖ್ಯಸ್ಥ ಡಾ.ಎಸ್.ಶ್ರೀಕಾಂತ್ ಮಾತನಾಡಿ, ರಾಷ್ಟ್ರೀಯ ಪಕ್ಷಗಳು ಎಸ್.ಟಿ. ಮೀಸಲು ಕ್ಷೇತ್ರದಲ್ಲಿ ಆದಿವಾಸಿಗಳಿಗೆ, ಮೂಲನಿವಾಸಿಗಳಿಗೆ ಅವಕಾಶ ಕೊಡದಿದ್ದ ಸಂದರ್ಭದಲ್ಲಿ ಬಿಎಸ್ಪಿ ಪಕ್ಷವು ಎಚ್.ಡಿ.ಕೋಟೆ ತಾಲೂಕಿನಲ್ಲಿ ಅವಕಾಶ ನೀಡಿ ಘನತೆ ಮೆರೆಯಿತು. ಈ ಬಾರಿಯೂ ಆದಿವಾಸಿ ಮುಖಂಡರಿಗೆ ಅವಕಾಶ ಕಲ್ಪಿಸಲು ಮುಂದಾಗುವ ಸಾಧ್ಯತೆಗಳಿವೆ ಎಂದರು.

    ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಭರತ್ ಕುಮಾರ್, ತಾಲೂಕು ಕಾರ್ಯದರ್ಶಿ ಚಂದ್ರೇಗೌಡ, ಹನುಮಯ್ಯ, ಬೈರಪ್ಪ, ಜವರಯ್ಯ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts