More

    ಬಿಇಒ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ

    ನವಲಗುಂದ: ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಸೃಷ್ಟಿಸಿ ಹಣ ವಸೂಲಿಗೆ ಮುಂದಾದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಹುಬ್ಬಳ್ಳಿ ಸೈಬರ್ ಕ್ರೖೆಮ್ ಬ್ರ್ಯಾಂಚ್​ನಲ್ಲಿ ಶುಕ್ರವಾರ ದೂರು ದಾಖಲಾಗಿದೆ.

    ಬಿಇಒ ಗಿರೀಶ ಪದಕಿ ಅವರ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಕಲಿ ಫೇಸ್​ಬುಕ್ ಖಾತೆ ಮೂಲಕ ಫೋನ್ ಪೇ ಮತ್ತು ಗೂಗಲ್ ಪೇನಲ್ಲಿ ನನಗೆ ಹಣದ ಅಗತ್ಯವಿದ್ದು, ಸಹಾಯ ಮಾಡುವಂತೆ ಸಂದೇಶ ರವಾನಿಸುತ್ತಿದ್ದ. ಇದು ಬಿಇಒ ಗಿರೀಶ ಪದಕಿ ಸ್ನೇಹಿತರ ಜಾಲತಾಣ, ವಾಟ್ಸ್ ಆಪ್​ನಲ್ಲಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಈ ವಿಷಯ ತಿಳಿದ ಬಿಇಒ ಅವರು ಗಾಬರಿಯಾಗಿದ್ದಾರೆ. ಬಿಇಒ ಹೆಸರಿನಲ್ಲಿ ಫೇಸ್​ಬುಕ್ ಹ್ಯಾಕ್ ಮಾಡಿದ ಪ್ರಕರಣ ಶಿಕ್ಷಕ ವಲಯದಲ್ಲಿ ಭಾರಿ ಗೊಂದಲ ಮೂಡಿಸಿತ್ತು. ಅಕೌಂಟ್​ಗೆ ಬೇಗ ಹಣ ಕಳಿಸಿ ಎಂಬ ಸಂದೇಶ ಬಿಇಒ ಅವರನ್ನು ವಿಚಲಿತರಾಗುವಂತೆ ಮಾಡಿದೆ. ನಕಲಿ ಫೇಸ್​ಬುಕ್​ನಲ್ಲಿ ಬಂದಿರುವ ಸಂದೇಶದ ಬಗ್ಗೆ ಅಪಾರ್ಥ ಮಾಡಿಕೊಳ್ಳಬಾರದು ಎಂದು ದೂರಿನಲ್ಲಿ ತಿಳಿಸಲಾಗಿದೆ.

    8 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಹ್ಯಾಕರ್: ಫೇಸ್​ಬುಕ್ ಖಾತೆ ಹ್ಯಾಕ್ ಮಾಡಿದ ವ್ಯಕ್ತಿ ‘ನನಗೆ ಸಹಾಯ ಮಾಡಿ ಎಂದು ಸಂದೇಶ ರವಾನಿಸಿದ್ದ. ಅದಕ್ಕೆ ಉತ್ತರವಾಗಿ ಬಿಇಒ ಅವರ ಸ್ನೇಹಿತ ಏನು ಹೇಳಿ ಸರ್… ಎಂದು ಕೇಳಿದಾಗ ಹ್ಯಾಕ್ ಮಾಡಿದ ವ್ಯಕ್ತಿ ನನಗೆ ‘8,000 ರೂ. ಬೇಕು ಎಂದು ಸಂದೇಶ ಕಳಿಸಿದ. ಬಳಿಕ ಬಿಇಒ ಅವರ ಸ್ನೇಹಿತ ಓಕೆ ಸರ್ ಎಂದು ಸಂದೇಶ ಕಳಿಸಿದ್ದಾರೆ. ತದನಂತರ ತಮ್ಮ ಹತ್ತಿರ ಫೋನ್ ಪೇ ಅಥವಾ ಗೂಗಲ್ ಪೇ ಇದೇಯಾ? ಎಂದು ಕೇಳಿದಾಗ, ಇದೆ ಎಂದು ತನ್ನ ಮೊಬೈಲ್ ನಂಬರ್ ಕಳುಹಿಸಿ, ಹಣ ವರ್ಗಾವಣೆ ಮಾಡಲು ಹೇಳಿದ. ಇಷ್ಟಾದ ಬಳಿಕ ಬಿಇಒ ಅವರ ಸ್ನೇಹಿತರು ಫೇಸ್​ಬುಕ್ ಚಾಟ್ ನಂಬಲಿಲ್ಲ ನೇರವಾಗಿ ಬಿಇಒ ಗಿರೀಶ ಪದಕಿ ಅವರಿಗೆ ಕರೆ ಮಾಡಿದ್ದಾರೆ. ಸರ್ ಚೆನ್ನಾಗಿ ಇದ್ದೀರಾ ಎಂದು ಕೇಳಿದರು. ನಾನು ಚನ್ನಾಗಿ ಇದ್ದೇನೆ ಎಂದು ಉತ್ತರಿಸಿದೆ. ಆಗ ನಿಮಗೆ ಹಣದ ಅವಶ್ಯಕತೆ ಇದೇಯಾ ಸರ್ ಎಂದು ಕೇಳಿದರು. ಆಗ ನಾನು ಇಲ್ಲವಲ್ಲ ಎಂದು ಉತ್ತರಿಸಿದೆ. ಆದರೆ, ನಿಮ್ಮ ಫೇಸ್​ಬುಕ್ ಹಣ ಕಳಿಸಿ ಎಂಬ ಸುದ್ದಿಗಳು ಹರಿದಾಡುತ್ತಿವೆ ಎಂದು ಸ್ನೇಹಿತರು ತಿಳಿಸಿದರು. ಆಗ ನಾನು ಗಾಬರಿಗೊಂಡೆ. ಬಳಿಕ ಹೀಗೆ ಹತ್ತಾರು ಕರೆಗಳು ಬಂದವು. ತದನಂತರ ನಾನು ಸೈಬರ್ ಕ್ರೖೆಮ್ೆ ದೂರು ನೀಡಿದ್ದೇನೆ ಎಂದು ಬಿಇಒ ಗಿರೀಶ ಪದಕಿ ತಿಳಿಸಿದರು.

    ಯಾರಾದರೂ ನಿಮ್ಮ ಫೇಸ್​ಬುಕ್ ಖಾತೆ ಮೂಲಕ ದುಡ್ಡು ಕೇಳುತ್ತಿದ್ದರೆ ಯಾರೂ ಏಕಾಏಕಿ ಯಾವುದೇ ಕಾರಣಕ್ಕೂ ದುಡ್ಡನ್ನು ವರ್ಗಾವಣೆ ಮಾಡಬೇಡಿ. ತಕ್ಷಣ ತಮಗೆ ಹಣ ಕೇಳುವ ವ್ಯಕ್ತಿಯ ಪರಿಚಯ ಇದ್ದರೂ ಕೂಡ ನೇರವಾಗಿ ಸಂರ್ಪಸಿ ವಿಚಾರಿಸಿ, ಬಳಿಕ ವ್ಯವಹರಿಸಿ.
    | ಗಿರೀಶ ಪದಕಿ ನವಲಗುಂದ ಬಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts