More

    ಬಿಆರ್‌ಸಿ ಕಟ್ಟಡ ಅನೈತಿಕ ಚಟುವಟಿಕೆ ತಾಣ

    ಹಿರೇಬಾಗೇವಾಡಿ: ಒಂದು ಕಾಲದಲ್ಲಿ ಶಿಕ್ಷಕರ ತರಬೇತಿ ಕೇಂದ್ರವಾಗಿದ್ದ ಇಲ್ಲಿನ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿಆರ್‌ಸಿ) ಕಟ್ಟಡ ಬಳಕೆ ಇಲ್ಲದೇ, ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

    ಬೆಳಗಾವಿ ತಾಲೂಕಿನ ಎಲ್ಲ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ್ದ ಕಟ್ಟಡ ಈಗ ಅನಾಥವಾಗಿ ಪಾಳು ಬಿದ್ದಿದೆ. ಕಟ್ಟಡ ಬಳಕೆ ಇಲ್ಲದೇ ಅದರ ಬಾಗಿಲು, ಕಿಟಕಿ, ಗಾಜುಗಳೆಲ್ಲ ಒಡೆದು ಹೋಗಿದ್ದು, ಸರಳವಾಗಿ ಕಟ್ಟಡದ ಒಳಗೆ ಹೋಗುವಂತಾಗಿದೆ. ಇದರಿಂದ ಕಟ್ಟದಲ್ಲಿ ಅನೇಕ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.

    ಕಟ್ಟಡ ದುರುಸ್ತಿಗೊಳಿಸಿ, ಸರ್ಕಾರಿ ಗಂಡು ಮಕ್ಕಳ ಶಾಲೆಯ ಉಪಯೋಗಕ್ಕಾಗಿ ನೀಡಿದರೆ ಇದನ್ನು ವ್ಯವಸ್ಥಿತವಾಗಿ ಉಳಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.

    ಬೆಳಗಾವಿ ತಾಲೂಕಿನ ಎಲ್ಲ ಶಾಲೆಗಳ ಶಿಕ್ಷಕರ ಅನುಕೂಲದ ದಷ್ಟಿಯಿಂದ ಇಲ್ಲಿಯ ಬಿಆರ್‌ಸಿ ಕಾರ್ಯಾಲಯವನ್ನು ಬೆಳಗಾವಿಗೆ ಸ್ಥಳಾಂತರಿಸಲಾಗಿದೆ. ಉಪಯೋಗವಿಲ್ಲದೆ ಹಾಳಾಗುತ್ತಿರುವ ಈ ಕಟ್ಟಡವನ್ನು ಪುನಶ್ಚೇತನಗೊಳಿಸಿ ಶಾಲೆಯ ಉಪಯೋಗಕ್ಕೆ ನೀಡುವ ವ್ಯವಸ್ಥೆ ಮಾಡಲಾಗುವುದು.
    | ರುದ್ರಗೌಡ ಜುಟ್ಟನವರ, ಬಿಇಒ, ಬೆಳಗಾವಿ ಗ್ರಾಮೀಣ

    | ಮನೋಹರ ಕಮ್ಮಾರ ಹಿರೇಬಾಗೇವಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts