More

    ಬಾಗಿಲು ತೆರೆದ ಬಾರ್, ರೆಸ್ಟೋರೆಂಟ್

    ಹುಬ್ಬಳ್ಳಿ: ವೈನ್ ಶಾಪ್ ಹಾಗೂ ಎಂಎಸ್​ಐಎಲ್ ಮಳಿಗೆಗಳಿಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದ ಸರ್ಕಾರ, ಬಾರ್ ಆಂಡ್ ರೆಸ್ಟೋರೆಂಟ್, ಕ್ಲಬ್​ಗಳಿಗೂ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶನಿವಾರ 100ಕ್ಕೂ ಹೆಚ್ಚು ಬಾರ್​ಗಳು ಬಾಗಿಲು ತೆರೆದಿದ್ದವು.

    ದಾಸ್ತಾನು ಅವಧಿ ಮೀರುವ ನೆಪದಲ್ಲಿ ಶನಿವಾರದಿಂದ ಬಾರ್, ರೆಸ್ಟೋರೆಂಟ್, ಕ್ಲಬ್, ಲಾಡ್ಜ್​ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಕುಳಿತು ಮದ್ಯ ಸೇವಿಸುವಂತಿಲ್ಲ. ಪಾರ್ಸಲ್ ತೆಗೆದುಕೊಂಡು ಹೋಗಬೇಕು ಎಂಬ ಆದೇಶವನ್ನು ಪಾಲಿಸಲಾಯಿತು. ಎಂಎಸ್​ಐಎಲ್ ಹಾಗೂ ವೈನ್ ಶಾಪ್​ಗಳಲ್ಲಿ ಬಹುತೇಕ ಬ್ರ್ಯಾಂಡ್ ಮದ್ಯ ಖಾಲಿಯಾಗಿತ್ತು. ಆ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ಬಾರ್​ಗಳಲ್ಲಿ ಸಂಗ್ರಹವಿದೆ ಎಂದು ಬಾರ್​ಗಳಿಗೆ ಎಡತಾಕಿದ್ದರು.

    ಜಿಲ್ಲೆಯಲ್ಲಿ ಕಳೆದ ವಾರ ವೈನ್ ಶಾಪ್ ಹಾಗೂ ಎಂಎಸ್​ಐಎಲ್ ಸೇರಿ 94 ಮಳಿಗೆ ಆರಂಭಿಸಲಾಗಿತ್ತು. ಇದೀಗ ಬಾರ್​ಗಳನ್ನೂ ಆರಂಭಿಸಿದ್ದರಿಂದ ಆ ಸಂಖ್ಯೆ 201ಕ್ಕೆ ಏರಿದೆ. ಸೀಲ್​ಡೌನ್ ಪ್ರದೇಶದ 1 ಕಿ.ಮೀ. ವ್ಯಾಪ್ತಿಯ 67 ಮದ್ಯದಂಗಡಿಗಳಿಗೆ ಅನುಮತಿ ನೀಡಿಲ್ಲ ಎಂದು ಅಬಕಾರಿ ಇಲಾಖೆ ಉಪ ಅಧೀಕ್ಷಕ ಮಂಜುನಾಥ ಅರೆಗುಳಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts