More

    ಬಾಂಬೆಯಲ್ಲಿ ದುಡಿದು ಉದ್ಯಮಿಯಾಗಿದ್ದೇನೆ

    ಕೆ.ಆರ್.ಪೇಟೆ: ಬಾಂಬೆಗೆ 200 ರೂ. ತೆಗೆದುಕೊಂಡು ಹೋಗಿ ಉದ್ಯಮದಲ್ಲಿ ದುಡಿದು ಮೇಲೆ ಬಂದಿದ್ದೇನೆ. ಜನ ಸೇವೆ ಮಾಡಲು ಕೆ.ಆರ್.ಪೇಟೆಗೆ ಬಂದಿದ್ದೇನೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.


    ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ತಾಲೂಕು ಸವಿತಾ ಸಮಾಜ, ಮಂಗಳವಾದ್ಯ ಕಲಾವಿದರ ಸಂಘ, ತಾಲೂಕು ಹಡಪದ ಅಪ್ಪಣ್ಣ ಸವಿತಾ ಸಮಾಜ ಸಂಘ, ಪಟ್ಟಣ ಸವಿತಾ ಸಮಾಜ ಸಂಘಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ 3ನೇ ವಷರ್ದ ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿ, ಪುರಂದರದಾಸರು ಮತ್ತು ಭಕ್ತ ಕನಕದಾಸರ ಆರಾಧನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.


    ಬಾಂಬೆಯಿಂದ ಮತ್ತೆ ಕರ್ನಾಟಕಕ್ಕೆ ಬರಲು, ನಾನು ನಿಮ್ಮೊಂದಿಗೆ ಇರಲು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕಾರಣ. ಶ್ರೀಗಳ ಆಶೀರ್ವಾದದಿಂದ ಮೇಲೆ ಬಂದಿದ್ದೇನೆ. ನನ್ನ ಹೆಸರಿನಲ್ಲಿ ಮೊಟ್ಟೆ ಹೊಡೆದವರೇ ನನ್ನನ್ನು ಶಾಸಕನನ್ನಾಗಿ ಮಾಡಿದರು, ಮೂರು ಬಾರಿ ಶಾಸಕನಾಗಿ, ಸಚಿವನಾಗಿ ಮಾಡಿದರು. ನನಗೆ ಅಭಿವೃದ್ಧಿ ಬಿಟ್ಟರೆ ಬೇರೆ ಏನು ಗೊತ್ತಿಲ್ಲ ಎಂದು ಹೇಳಿದರು.


    ನಾರಾಯಣಗೌಡ ಸೋತರೆ ಬಾಂಬೆಗೆ ಹೋಗುತ್ತಾನೆ ಅಂತಾರೆ. ನನಗೆ ಬಾಂಬೆಗೆ ಹೋಗುವ ಶಾರ್ಟ್‌ಕಟ್ ಸಾಕಷ್ಟು ಗೊತ್ತಿದೆ. ಆದರೆ, ಕೆ.ಆರ್.ಪೇಟೆಯಲ್ಲೇ ಇರುತ್ತೇನೆ. ‘ನಾನೂ ಸತ್ತರೂ ಕೆ.ಆರ್.ಪೇಟೆಯಲ್ಲೇ ಮಣ್ಣಾಗುತ್ತೇನೆ.’ ನನ್ನನ್ನು ಎಲ್ಲಿ ಮಣ್ಣು ಮಾಡಬೇಕು ಎಂದು ಹೀಗಾಗಲೇ ಹೇಳಿದ್ದೇನೆ. ಅಂತ್ಯಸಂಸ್ಕಾರಕ್ಕೆ ಮೊದಲೇ ಜಾಗ ಮೀಸಲು ಮಾಡಿ ಹೋಗುತ್ತೇನೆ. ನಾನು ಯಾರಿಗೂ ಮೋಸ ಮಾಡಿಲ್ಲ. ಕೆ.ಆರ್.ಪೇಟೆ ಅಭಿವೃದ್ಧಿಗೆ ಮುಂದೆಯೂ ಶ್ರಮಿಸುತ್ತೇನೆ ಎಂದರು.
    ಕೈ ಮುಗಿದ ಸಚಿವ: ಕಾಂಗ್ರೆಸ್ ಸೇರ್ಪಡೆ ಏಕೆ ಬೇಕು ಎಂಬ ಮಾಧ್ಯಮದವರ ಪ್ರಶ್ನೆಗೆ ಕೈ ಮುಗಿದ ಸಚಿವ, ಅಂಥ ಸಂದರ್ಭ ಬಂದರೆ ನಾನೇ ಹೇಳುತ್ತೇನೆ. ಚರ್ಚೆ ಬೇಡ ದಮ್ಮಯ್ಯ. ನಿನ್ನೆ ಗಲಾಟೆ ಮಾಡಿದವರು ಯಾರು ಅಂಥ ಗೊತ್ತಿಲ್ಲ. ಅವರು ಗಲಾಟೆ ಮಾಡಿಕೊಳ್ಳಲಿ. ನಾನೇನಾದರೂ ಅವರ ಬಳಿ ಹೋಗಿದ್ನಾ? ಅಂಥ ಕೊಚ್ಚೆ ಗುಂಡಿಗೆ ನಾನು ಟಿಪ್ಪಣಿ ಮಾಡಲು ಹೋಗಲ್ಲ. ಅವರು ಏನೋ ಗಲಾಟೆ ಮಾಡಿಕೊಂಡಿದ್ದಾರೆ. ಅದಕ್ಕೂ, ನನಗೂ ಸಂಬಂಧವಿಲ್ಲ. ನಾನು ಅವರ ಮನೆ ಹತ್ತಿರ ಹೋಗಿಲ್ಲ, ಅವರನ್ನು ಏನೂ ಕೇಳಿಲ್ಲ ಎಂದು ಕಾಂಗ್ರೆಸ್ ಸೇರ್ಪಡೆ ವಿರೋಧಿಸಿದ್ದವರಿಗೆ ಸಚಿವ ಟಾಂಗ್ ನೀಡಿದರು.
    ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಮಾತನಾಡಿದರು. ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲೂಕು ಮಂಗಳವಾದ್ಯ ಕಲಾ ಸಂಘದ ಅಧ್ಯಕ್ಷ ಮೋದೂರು ಶೇಖರ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್, ಹಾಸನ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್, ಕೆ.ಆರ್.ಪೇಟೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸಂತೇಬಾಚಹಳ್ಳಿ ಮಂಜುನಾಥ್, ಕಲಾಸಂಘ ಉಪಾಧ್ಯಕ್ಷ ನಿಂಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts