More

    ಬಹು ಆಯ್ಕೆ ಅವಕಾಶದ ಎನ್ಇಪಿ

    ಕಲಬುರಗಿ: ಬದಲಾಗುತ್ತಿರುವ ಔದ್ಯೋಗಿಕ ಪರಿಸರಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರೂಪಿಸಲಾಗಿದ್ದು, ವಿಜ್ಞಾನ, ಮಾನವಿಕ, ಕಲಾ ವಿಭಾಗ ಸೇರಿ ಶೈಕ್ಷಣಿಕ ಕ್ಷೇತ್ರದ ಯಾವುದಾದರೂ ವಿಷಯ ಆಯ್ಕೆ ಮಾಡಿಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದು ಎನ್ಇಪಿ ಕರಡು ಸಮಿತಿ ಅಧ್ಯಕ್ಷ, ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಹೇಳಿದರು.

    ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತ ಸಂದೇಶ ಹಾಗೂ ಸಂವಾದದಲ್ಲಿ ಮಾತನಾಡಿದ ಅವರು, ಈ ನೀತಿಯಲ್ಲಿ ಕೌಶಲ ಮತ್ತು ಸಂಶೋಧನೆಗೆ ಒತ್ತು ನೀಡಲಾಗಿದೆ. ಅಧ್ಯಯನ ಯಾವುದೇ ಸಂದರ್ಭದಲ್ಲಿ ಕಲಿಕೆಯನ್ನು ವಾರ್ಷಿಕವಾಗಿ ಮೊಟಕುಗೊಳಿಸಿ ಕೆಲಸಕ್ಕೆ ಸೇರಿಕೊಳ್ಳಬಹುದು. ಮತ್ತೆ ಶಿಕ್ಷಣವನ್ನು ಅಲ್ಲಿಂದ ಮುಂದುವರಿಸುವ ಅವಕಾಶವಿದೆ ಎಂದರು.

    ದೇಶದಲ್ಲಿ 50 ವರ್ಷದಲ್ಲಿ 220 ಭಾಷೆಗಳು ಅವಸಾನಗೊಂಡಿದ್ದು, ಅವುಗಳನ್ನು ಉಳಿಸಿ ಬೆಳೆಸಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು. ಸಕರ್ಾರ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು. ಭಾರತಕ್ಕೆ ವಿದೇಶದಿಂದ ಅಗತ್ಯ ಜ್ಞಾನ ಬರಬೇಕು. ವಿಶ್ವದ ಎಲ್ಲಿಯೇ ಜ್ಞಾನ ದೊರೆತರೆ ಅದನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
    ವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಪ್ರಾಸ್ತಾವಿಕ ಮಾತನಾಡಿ, ವಿವಿ ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿದ್ದು, ಪದವಿ ಕೋರ್ಸ್​ ಆರಂಭಿಸಲಾಗಿದೆ ಎಂದು ತಿಳಿಸಿದರು.

    ಕುಲಸಚಿವ ಡಾ.ಶರಣಬಸಪ್ಪ ಕೋಟೆಪ್ಪಗೋಳ ಸ್ವಾಗತಿಸಿದರು. ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಲಕ್ಷ್ಮೀಶಂಕರ ಜೋಶಿ ಮತ್ತು ತಂಡದವರು ನಾಡಗೀತೆ ಹಾಗೂ ರಾಷ್ಟ್ರಗೀತೆ ಪ್ರಸ್ತುತಪಡಿಸಿದರು.

    ನಂತರ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಡಾ.ಕಸ್ತೂರಿ ರಂಗನ್ ಸಂವಾದ ನಡೆಸಿದರು. ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಎಚ್.ಟಿ. ಪೋತೆ ಅತಿಥಿಗಳ ಪರಿಚಯ ಮಾಡಿದರು. ವಿತ್ತಾಧಿಕಾರಿ ಪ್ರೊ.ಎನ್.ಬಿ. ನಡುವಿನಮನಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts