More

    ಬಹಿರಂಗ ಪ್ರಚಾರಕ್ಕೆ ತೆರೆ ಇನ್ನುಂದೆ ಅಂತರ0ಗ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು. ಕೊನೆಯ ದಿನ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಯಕರು ಗುಲ್ಬರ್ಗ ಕ್ಷೇತ್ರದ ಎಲ್ಲಡೆ ಬಿರುಸಿನ ಪ್ರಚಾರ ಕೈಗೊಂಡರು. ಮೇ ೭ ರಂದು ಮತದಾನ ಜರುಗಲಿದೆ.
    ಮತದಾನಕ್ಕೂ ಮೊದಲು ೪೮ ಗಂಟೆಗಳು ಮೊದಲೇ ಬಹಿರಂಗ ಪ್ರಚಾರ ಮುಕ್ತಾಯಗೊಳಿಸಬೇಕು ಎಂಬ ನಿಯಮದಂತೆ ಅಬ್ಬರ ಪ್ರಚಾರ ಮುಗಿಯಿತು. ಬಹಿರಂಗ ಮುಗಿದ ಬೆನ್ನಲ್ಲಿಯೇ ಅಭ್ಯರ್ಥಿಗಳು, ಆಯಾ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಅಂತರ0ಗಕ್ಕೆ ಮೊರೆ ಹೋಗಲಿದ್ದಾರೆ. ಕೆಲವರು ಕತಲ್ ರಾತ್ರಿಗೂ ಸೈ ಎನ್ನಬಹುದು.
    ಕೊನೆಯ ದಿನವಾದ ಭಾನುವಾರ ಅಭ್ಯರ್ಥಿಗಳು ಸೇರಿದಂತೆ ಆಯಾ ಪಕ್ಷಗಳ ಮುಖಂಡರು,ಸಚಿವರು, ಶಾಸಕರ ಸುದ್ದಿಗೋಷ್ಠಿಗಳು ಸರಣಿಯಾಗಿ ನಡೆದವು. ಅಲ್ಲದೆ ಆ ಅಭ್ಯರ್ಥಿಗೆ ಬೆಂಬಲ, ಇಂತಹ ಅಭ್ಯರ್ಥಿಗೆ ಬೆಂಬಲ ನೀಡುತ್ತಿz್ದೆÃವೆ ಎಂದು ಮಾದಿಗ, ಕುರುಬ, ಬೀದಿ ವ್ಯಾಪಾರಿಗಳ ಸಂಘ, ಕನ್ನಡಪರ ಸಂಘಟನೆಗಳು, ವಿವಿಧ ಸಮುದಾಯಗಳ ಸಂಘಟನೆಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರಮುಖರು ಸುದ್ದಿಗೋಷ್ಠಿಗಳನ್ನು ನಡೆಸಿ ಬೆಂಬಲ ಘೋಷಣೆ ಮಾಡಿದರು.
    ರಾಜ್ಯದಲ್ಲಿ ಎರಡನೇ ಹಂತದಲ್ಲಿ ಬೀದರ್,ಕಲಬುರಗಿ,ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ೧೪ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಗುಲ್ಬರ್ಗ ಲೋಕಸಭಾ ಕ್ಷೇತ್ರದ ಮತದಾನವು ಮಂಗಳವಾರ ಬೆಳಿಗ್ಗೆ ೭ ರಿಂದ ಸಾಯಂಕಾಲ ೬ ಗಂಟೆ ವರೆಗೂ ಮತದಾನ ನಡೆಯಲಿದ್ದು, ಅದಕ್ಕಾಗಿ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳಲಾಗುತ್ತಿದೆ ಎಂದು ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts