More

    ಬಸವೇಶ್ವರ ಸ್ವಾಮಿ ಮಹಾರಥೋತ್ಸವ ಇಂದು

    ಚಿತ್ರದುರ್ಗ: ತಾಲೂಕಿನ ಭೀಮಸಮುದ್ರ ಮಜುರೆ ಬಸವಾಪುರದ ಮಾವಿನಹಳ್ಳಿ ಶ್ರೀಗುರು ಬಸವೇಶ್ವರ ಸ್ವಾಮಿಯ ಕೆಂಡಾರ್ಚನೆ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು.

    ಸ್ವಾಮಿ ಸನ್ನಿಧಿಯಲ್ಲಿ ಬೆಳಗ್ಗೆ ಸಂಪ್ರದಾಯದಂತೆ ಪುಷ್ಪೋತ್ಸವ ಸೇವೆ ನೆರವೇರಿತು. ನಂತರ ವಿವಿಧ ಬಗೆಯ ಹೂಗಳಿಂದ ಪಲ್ಲಕ್ಕಿಯನ್ನು ಅಲಂಕರಿಸಿ, ಅದರೊಳಗೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮೂಲಕ ಕೆಂಡಾರ್ಚನೆ ನಡೆಯುವ ಸ್ಥಳಕ್ಕೆ ಕರೆತರಲಾಯಿತು. ಇದೇ ವೇಳೆ ಕಡೂರಿನ ಚನ್ನವೀರಪ್ಪ ಮತ್ತು ತಂಡದವರು ವೀರಭದ್ರ ಸ್ವಾಮಿಯ ಒಡಪುಗಳನ್ನು ಹೇಳಿ ಗಮನಸೆಳೆದರು.

    ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಸ್ವಾಮಿಯ ಭಕ್ತರು ಬಸವೇಶ್ವರ ಮಹಾರಾಜ್ ಕೀ ಜೈ, ವೀರಭದ್ರೇಶ್ವರ ಸ್ವಾಮಿ ಕೀ ಜೈ, ಹರಹರ ಮಹಾದೇವ್ ಎಂದು ಜಯಘೋಷ ಮೊಳಗಿಸಿದರು. ಸ್ವಾಮಿಯ ಪಲ್ಲಕ್ಕಿ ಹೊತ್ತ ಭಕ್ತರು ಕೆಂಡದ ಕುಂಡದಲ್ಲಿ ಸಾಗುವ ಮೂಲಕ ಸಂಪನ್ನಗೊಳಿಸಿದರು.

    ಮಾ. 19ರಂದು ಸ್ವಾಮಿಯ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಜೆ 5.30ಕ್ಕೆ ನಡೆಯಲಿದೆ. ಜಾತ್ರೆ ಅಂಗವಾಗಿ ಈಗಾಗಲೇ ಸ್ವಾಮಿಗೆ ಕಂಕಣಧಾರಣೆ, ಅಶ್ವೋತ್ಸವ, ವೃಷಭೋತ್ಸವ ಸೇರಿ ಇತರೆ ಪೂಜಾ ಕೈಂಕರ್ಯಗಳು ನೆರವೇರಿದ್ದು, 20ರಂದು ಸಂಜೆ 5ಕ್ಕೆ ಕಂಕಣ ವಿಸರ್ಜನೆ ಹಾಗೂ ಮಹಾಮಂಗಳಾರತಿ ಪೂಜೆಯೊಂದಿಗೆ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts