More

    ಬಸವೇಶ್ವರ ದೇವಸ್ಥಾನ ಬಸವ ಪೀಠವಾಗಲಿ

    ಬಸವಕಲ್ಯಾಣ: ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನವನ್ನು ಬಸವ ಪೀಠ ಎಂದು ಬದಲಾಯಿಸುವಂತೆ ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಸಲಹೆ ನೀಡಿದ್ದಾರೆ.

    ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಮತ್ತು ವಿಶ್ವಸ್ಥ ಸಮಿತಿಯಿಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಶೂನ್ಯ ಸಂಪಾದನೆ ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಹಿರಿಯರು ಹಿಂದೆ ಒಳ್ಳೆಯ ಭಾವನೆಯಿಂದ ದೇವಸ್ಥಾನ ಎಂದು ಮಾಡಿದ್ದಾರೆ. ಬಸವಣ್ಣ ಹೃದಯದ ಮಹಾ ಮಂಗಳಮೂತರ್ಿ. ಬಸವಣ್ಣನನ್ನು ಈಶ್ವರ, ದೊಡ್ಡವನ್ನಾಗಿಸಿ ದೂರ ಮಾಡಿದ್ದೇವೆ. ಬಸವಣ್ಣ ನಮ್ಮ ಹೃದಯದ ಬೆಳಕು. ಬಸವ ಪೀಠ ಮಾಡಿದರೆ ಎಲ್ಲರಿಗೂ ಆಸರೆ, ರಕ್ಷಣೆ ಸಿಗುವಂಥ ತಾಣದ ಭಾವ ಮೂಡಲಿದೆ ಎಂದರು.

    ಬಸವ ಪೀಠಕ್ಕೆ ಶರಣಾದವರೆಲ್ಲರೂ ಕಾಯಕ ನಿಷ್ಠರಾಗಬೇಕು. ಇನ್ನೊಬ್ಬರ ಹಸಿವು ಗಮನಿಸುವ ಮಾತೃಹೃದಯಿಗಳಾಗಬೇಕು. ಬಸವಣ್ಣನ ಪೀಠಕ್ಕೆ ಬಾಗಿಲಿಲ್ಲ. 24 ಗಂಟೆ ಯಾರೇ ಬಂದು ರಕ್ಷಿಸು ಅಂತ ಕೇಳಿಕೊಂಡರೆ ಅವರ ಹೃದಯದಲ್ಲಿ ಕಾಯಕ, ದಾಸೋಹ ಪ್ರಜ್ಞೆ ಜಾಗೃತಗೊಳಿಸಿ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುವಂಥ ವ್ಯಕ್ತಿಯನ್ನಾಗಿ ಪರಿವತರ್ಿಸುತ್ತಾನೆ. ಇದು ಸತ್ಯವಾದ ಮಾತು ಎಂದು ಪ್ರತಿಪಾದಿಸಿದರು.

    ಉದ್ಘಾಟನೆ ನೆರವೇರಿಸಿದ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ಶ್ರೇಷ್ಠ ದಾರ್ಶನಿಕ ಬಸವಣ್ಣನವರನ್ನು ಕೇವಲ ಬ್ಯಾನರ್, ಕಟೌಟ್ಗಳಲ್ಲಿ ನಿಲ್ಲಿಸುವ ಸಿನಿಕತೆ ನಮ್ಮೆಲ್ಲರಲ್ಲಿ ಬೆಳೆಯುತ್ತಿದೆ. ಜಾತ್ಯತೀತ, ಧಮರ್ಾತೀತ ವಿಶ್ವಪ್ರಜ್ಞೆ ಜತೆಗೆ ಬಸವಪ್ರಜ್ಞೆ ಜಾಗೃತವಾಗಬೇಕಾಗಿದೆ. ಬಸವಕಲ್ಯಾಣದಲ್ಲಿ ಶರಣ ಸಿದ್ಧಾಂತದ ತಲಸ್ಪಶರ್ಿ ಅಧ್ಯಯನದ ಅಗತ್ಯವಿದೆ ಎಂದರು.

    ನೇತೃತ್ವ ವಹಿಸಿದ್ದ ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಸ್ವಾತಂತ್ರೃದ ಪರಿಕಲ್ಪನೆಯನ್ನು ಮೊಟ್ಟಮೊದಲು ಪರಿಚಯಿಸದವರು ಬಸವಾದಿ ಶರಣರು. ನಂತರ ಪಾಶ್ಚಾತ್ಯ ತತ್ವಜ್ಞಾನಿಗಳು ಇದನ್ನು ವ್ಯಾಖ್ಯಾನಿಸಿದರು. ಸಮಾಜದಿಂದ ಗುಲಾಮಗಿರಿ ಜಾಯಮಾನ ಹೋಗಲಾಡಿಸಿದ್ದು ಬಸವಾದಿ ಶರಣರು. ಅವರ ತತ್ವ ಮನುಷ್ಯನ ಸ್ವತಂತ್ರ ಅಸ್ತಿತ್ವದ ಬಗೆಗಿನ ಚಿಂತನೆಯಾಗಿದೆ ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ಅಧ್ಯಕ್ಷ ಅನೀಲಕುಮಾರ ರಗಟೆ ಮಾತನಾಡಿದರು. ತಮಿಳುನಾಡು ತೆಂಕನಕೋಟೆಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬೀದರ್ ಬಸವ ಸೇವಾ ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕ್ರಪ್ಪ ಹೊನ್ನಾ, ಬಿಡಿಪಿಸಿ ಕಾರ್ಯದಶರ್ಿ ರೇವಣಪ್ಪ ರಾಯವಾಡೆ, ಸಹ ಕಾರ್ಯದಶರ್ಿ ಬಸವರಾಜ ಬಾಲಿಕಿಲೆ, ಕೋಶಾಧ್ಯಕ್ಷ ಸುಭಾಷ ಹೊಳಕುಂದೆ, ನಿದರ್ೇಶಕರಾದ ಮಲ್ಲಿಕಾಜರ್ುನ ಕುರಕೋಟೆ, ಬಸವರಾಜ ತೊಂಡಾರೆ, ಜಗನ್ನಾಥ ಖೂಬಾ, ಬಸವರಾಜ ಕೊರಕೆ, ಕಾಶಪ್ಪ ಸಕ್ಕರಬಾವಿ ಇದ್ದರು.

    ಬಿಡಿಪಿಸಿ ಉಪಾಧ್ಯಕ್ಷ ಅಶೋಕಕುಮಾರ ನಾಗರಾಳೆ ಸ್ವಾಗತಿಸಿದರು. ಜ್ಯೋತಿ ತೂಗಾಂವೆ ನಿರೂಪಣೆ ಮಾಡಿದರು. ರಂಜನಾ ಭೂಶೆಟ್ಟಿ ಮತ್ತು ರಾಮಚಂದ್ರ ಕಲ್ಲಹಿಪ್ಪಗರ್ಿ ವಚನ ಸಂಗೀತ ನಡೆಸಿಕೊಟ್ಟರು. ಶ್ರೀ ಬಸವೇಶ್ವರ ಕನ್ನಡ ಪ್ರೌಢಶಾಲೆ ಮಕ್ಕಳ ವಚನ ನೃತ್ಯ ಗಮನ ಸೆಳೆಯಿತು.

    ಬಸವ ಪ್ರಜ್ಞೆ ಹೃದಯದಲ್ಲಿ ಬೆಳಗಲಿ: ಕಲ್ಯಾಣವೆಂದರೆ ಒಂದು ಊರು, ತಾಲೂಕು, ಜಿಲ್ಲೆ ಅನ್ನುವಂತಿಲ್ಲ. ಸಕಲರ ಹಿತ, ಸಕಲ ಜೀವರಾಶಿಗೆ ಲೇಸು ಬಯಸುವುದೇ ಕಲ್ಯಾಣ. ಜೀವಾವಳಿಗೆ ಲೇಸು ಬಯಸುವ ಸಂಕಲ್ಪ ಶಕ್ತಿ. ಇದುವೇ ಕಲ್ಯಾಣ. ಬಸವಪ್ರಜ್ಞೆ ಯಾವತ್ತೂ ನಮ್ಮೆಲ್ಲರ ಹೃದಯದ ಜ್ಯೋತಿಯಾಗಿ, ನಂದಾದೀಪವಾಗಿ ಬೆಳಗಲಿ ಎಂದು ಶ್ರೀ ಶಿವರುದ್ರ ಸ್ವಾಮೀಜಿ ಸದಾಶಯ ವ್ಯಕ್ತಪಡಿಸಿದರು. ಕಾಯಕ ಪ್ರಜ್ಞೆಯಿಂದ ಕೆಲಸ ಮಾಡಿ ಜಗತ್ತಿಗೆ ಬೆಳಕು ತೋರಿದ, ಕಾಯಕ ಪ್ರಜ್ಞೆಯಿಂದ ಮಹಾ ಸಾಧನೆ ಮಾಡಿದ ಸದ್ದು-ಗದ್ದಲವಿಲ್ಲದ ಚಿಂತನೆಯ ದೀಪಗಳಾಗಿದ್ದವರು ಮತ್ತು ಸ್ವಾಭಿಮಾನ, ಸ್ವಾಯತ್ತತೆಯ ದೀಪ ಹಚ್ಚಿದ್ದು ಬಸವಾದಿ ಶರಣರು. ಕಲ್ಯಾಣದಲ್ಲಿ ಹಿಂದೆಂದಿಗಿಂತಲೂ ಶರಣ ಪ್ರಜ್ಞೆ ಇಂದು ಅಗತ್ಯವಾಗಿದೆ ಎಂದರು.

    ಪ್ರತಿಕ್ಷಣ ಬಸವ ಪ್ರಜ್ಞೆ ಜಾಗೃತವಾಗಬೇಕು. ಜ್ಞಾನಕ್ಕಿಂತ ಅರಿವು ಎತ್ತರದ್ದು. ಬಸವಣ್ಣನನ್ನು ಅಂತರಂಗದಲ್ಲಿ ಅರಿಯಬೇಕು. ಅರಿವು ಆಚರಣೆಗೆ ಒಳಗಾಗದೆ ಬಸವತತ್ವ ಬಹಿಮರ್ುಖ ಪೂಜೆಯಾಗಬಾರದು. ಸತ್ಯಕ್ಕ, ಲಕ್ಕಮ್ಮರಂತೆ ಆದರ್ಶರಾಗಬೇಕು. ಬಸವಣ್ಣನವರ ಚೈತನ್ಯ ಪ್ರತಿಯೊಬ್ಬರಲ್ಲಿ ಜೀವ ಪ್ರಜ್ಞೆಯಾಗಿ ಪ್ರವಹಿಸಬೇಕು, ವಿಶ್ವಪ್ರಜ್ಞೆ ಜಾಗೃತವಾಗಬೇಕು.

    | ಅರವಿಂದ ಜತ್ತಿ, ಅಧ್ಯಕ್ಷ, ಬಸವ ಸಮಿತಿ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts