More

    ಬಸವತತ್ತ್ವದಲ್ಲಿದೆ ಎಲ್ಲ ಧರ್ಮಗಳ ಸಾರ

    ಅಥಣಿ: ಜಗತ್ತಿನ ಎಲ್ಲ ಧರ್ಮಗಳ ಸಾರ ಬಸವತತ್ತ್ವದಲ್ಲಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು. ಪಟ್ಟಣದ ಗಚ್ಚಿನಮಠದ ಸಭಾಂಗಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವ ಮತ್ತು ಸಹಸ್ರ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜೀವನ ದರ್ಶನ ಪ್ರವಚನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, 12ನೇ ಶತಮಾನದ ಬಸವಾದಿ ಶಿವಶರಣರಂತೆ ನುಡಿದಂತೆ ನಡೆದು ತೋರಿಸಿದವರು ಅಥಣಿ ಗಚ್ಚಿನಮಠದ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳು. ಸಮಾನತೆ ಮತ್ತು ಮಾನವೀಯ ಮೌಲ್ಯ ಅರಿಯುವುದೇ ಜೀವನದ ಉದ್ದೇಶ. ಶರಣರ ಒಳ್ಳೆಯ ವಿಚಾರ, ಚಿಂತನೆಗಳು ಬದುಕಿಗೆ ಪ್ರೇರಕವಾಗಿವೆ ಎಂದರು.

    ಬೀದರನ ಪ್ರವಚನಕಾರ್ತಿ ಡಾ. ಅನ್ನಪೂರ್ಣಾತಾಯಿ ಮಾತನಾಡಿ, ಬದುಕಿನಲ್ಲಿ ನಾವು ನೆಮ್ಮದಿ, ಸಂತೋಷ ಹೊಂದಬೇಕು, ಪರೋಪಕಾರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಗಚ್ಚಿನಮಠವು ಅತ್ಯಂತ ಜಾಗತ ಮತ್ತು ಪವಿತ್ರ ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಸೇವೆ ಸಲ್ಲಿಸುವುದು ನಮ್ಮ ಪುಣ್ಯ ಎಂದರು.

    ತೆಲಸಂಗದ ವೀರೇಶ್ವರ ದೇವರು ಮಾತನಾಡಿದರು. ಸಂಜು ಪಾರ್ಥನಹಳ್ಳಿ, ಸುಷ್ಮಾ ನಂದಗಾಂವ ವಚನಸಂಗೀತ ನಡೆಸಿಕೊಟ್ಟರು. ಪ್ರಕಾಶ ಮಹಾಜನ,ಮಹಾದೇವ ಹೊನ್ನಳ್ಳಿ, ಈರಣ್ಣಗೌಡ ಪಾಟೀಲ,ಶಿವಪುತ್ರ ಯಾದವಾಡ, ರಾಜು ಬಿಳ್ಳೂರ, ಸೋಮು ವಾಂಗಿ, ಸುನಂದಾ ಅಳಿಮಟ್ಟಿ, ರಾಜಶೇಖರ ಪತ್ತಾರ, ಶ್ರೀಶೈಲ ಪಾಟೀಲ, ಶೇಖರ ಮಗದುಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts