More

    ಬಸನಾಳ ಖಾತ್ರಿ ಗೋಕಟ್ಟೆ ವೀಕ್ಷಣೆ

    ಕಲಬುರಗಿ: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಾಲೂಕಿನ ಕವಲಗಾ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸನಾಳ ಗ್ರಾಮದಲ್ಲಿ ನಿರ್ಮಿಸಲಾಗಿರುವ ಗೋಕಟ್ಟಾ ಇನ್ನಿತರ ಕಾಮಗಾರಿಗಳನ್ನು ನರೇಗಾ ಯೋಜನೆ ರಾಜ್ಯ ಆಯುಕ್ತ ಅನಿರುದ್ಧ ಶ್ರವಣ ಭೇಟಿ ನೀಡಿದರು.
    ಜಿಪಂ ಸಿಇಒ ಡಾ.ರಾಜಾ, ಉದ್ಯೋಗ ಖಾತ್ರಿ ಉಸ್ತುವಾರಿಯಾಗಿರುವ ಜಿಪಂ ಎಎಸ್ ಮಹಾದೇವ ಅವರು ಗೋಕಟ್ಟೆ ಮತ್ತು ನರೇಗಾ ಕೆಲಸಗಳ ವಿವರ ನೀಡಿದರು.
    ಬಳಿಕ ಮಾತನಾಡಿದ ಆಯುಕ್ತ ಅನಿರುದ್ಧ, ಬಸನಾಳದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗೋಕಟ್ಟೆ ನಿರ್ಮಿ ಸಲಾಗಿದೆ. ಗ್ರಾಮದ ಜನ ಜಾನುವಾರುಗಳಿಗೆ ಮತ್ತು ಗ್ರಾಮದ ಬೋರವೆಲ್ಗಳಿಗೆ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ. ಕವಲಗಾ ಗ್ರಾಪಂನಲ್ಲಿ ಮಾದರಿಯಾಗಿ ಕೆಲಸ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾದ ಕೆಲಸಗಳು ಮಾಡಿ ರಾಜ್ಯದಲ್ಲಿ ಮಾದರಿ ಗ್ರಾಪಂಕ್ಕಾಗಿ ಪ್ರಯತ್ನಿಸಲು ತಿಳಿಸಿದರು. ಹೆಚ್ಚಿನ ಅನುದಾನ ಕೊಡಿಸುವ ಭರವಸೆ ನೀಡಿದರು.
    ಸಿಇಒ ಡಾ.ಪಿ.ರಾಜಾ, ಜಿಪಂ ಸಹಾಯಕ ಕಾರ್ಯದರ್ಶಿ  ಮಹಾದೇವ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಕವಲಗಾ ಗ್ರಾಪಂ ಅಧ್ಯಕ್ಷೆ ಅಯ್ಯಮ್ಮ ಸುಬೇದಾರ, ಮಾಳಪ್ಪ ಪೂಜಾರಿ, ಸಿದ್ದರಾಮ ಹಾವನೂರ, ಚಂದ್ರಕಾಂತ ಶಕಾಪುರ, ರಾಜಕುಮಾರ ರೆಡ್ಡಿ, ಮಾಲಾಶ್ರೀ, ಬಿಲ್ ಕಲೆಕ್ಟರ್ ಶಿವಾನಂದ ಇತರರಿದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts