More

    ಬಳಕೆಯಾಗದ ಗ್ರಾಮ ಪಂಚಾಯಿತಿ ನೀಡಿದ ಬಕೆಟ್‌ಗಳು ನಿಂತಲ್ಲಿ ನಿಂತ ವಾಹನ

    ಶ್ರೀಶೈಲ ಮಾಳಿ ಅರಟಾಳ, ಬೆಳಗಾವಿ: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಗಳಿಗೆ ಒಣ, ಹಸಿ ಕಸ ಹಾಕಲು ಹಾಗೂ ಅದನ್ನು ತೆಗೆದುಕೊಂಡು ಹೋಗಲು ವಾಹನ ವ್ಯವಸ್ಥೆ ಕಲ್ಪಿಸಿದೆ. ಆದರೆ, ವಾಹನ ಬಳಕೆಯಾಗದೆ ನಿಂತಲ್ಲಿ ತುಕ್ಕು ಹಿಡಿಯುತ್ತಿದೆ.
    ಅರಟಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಟಾಳ, ಬಾಡಗಿ, ಹಾಲಳ್ಳಿ ಸೇರಿ ಸುಮಾರು 2,400 ಕುಟುಂಬಗಳಿಗೆ ಹಸಿ ಹಾಗೂ ಒಣ ಕಸ ಹಾಕಲು ಎರಡು ಬೇರೆ ಬೇರೆ ಬಕೆಟ್ ಕೊಡಲಾಗಿದೆ. ಆದರೆ, ಜನರು ಮಾತ್ರ ಬಕೆಟ್‌ಗಳಲ್ಲಿ ಕಸ ಹಾಕುವುದನ್ನು ಬಿಟ್ಟು, ಅವುಗಳನ್ನು ಬೇರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ.
    ಸಾರ್ವಜನಿಕರು ಕಸವನ್ನು ಬೇರ್ಪಡಿಸುತ್ತಿಲ್ಲ ಹಾಗೂ ಗ್ರಾಪಂನಿಂದ ನೀಡಿದ ಬಕೆಟ್‌ಗಳಲ್ಲಿ ಕಸ ಹಾಕುತ್ತಿಲ್ಲ ಎಂಬ ಮಾಹಿತಿ ಅಧಿಕಾರಿಗಳಿಗೆ ಇದ್ದರೂ ಹಸಿ ಹಾಗೂ ಒಣ ಕಸ ಬೇರೆ ಬೇರೆ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿಲ್ಲ. ಇದರಿಂದ ಗ್ರಾಮಸ್ಥರು ಚರಂಡಿ ಹಾಗೂ ಖಾಲಿ ಜಾಗದಲ್ಲಿ ಕಸ ಎಸೆಯುತ್ತಿದ್ದಾರೆ.
    ಗ್ರಾಮಸ್ಥರಿಂದ ಸಂಗ್ರಹಿಸಿದ ಕಸ ಹಾಕಲು ಸಮೀಪದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಆದರೆ, ಘಟಕಕ್ಕೆ ಇಲ್ಲಿಯವರೆಗೆ ಉದ್ಘಾಟನಾ ಭಾಗ್ಯ ಕೂಡಿ ಬಂದಿಲ್ಲ. ಗ್ರಾಪಂನಿಂದ ಸಂಗ್ರಹವಾದ ಕಸ ತೆಗೆದುಕೊಂಡು ಹೋಗಲು 4 ತಿಂಗಳ ಹಿಂದೆ ಶಾಸಕರು ಕಸದ ವಾಹನ ಸಹ ನೀಡಿದ್ದಾರೆ. ಆದರೆ, ಕಸ ವಿಲೇವಾರಿ ಮಾಡಬೇಕಾದ ವಾಹನ ಗ್ರಾಪಂಗೆ ಬಂದ ಬಳಿಕ ಇಲ್ಲಿಯವರೆಗೆ ಒಂದು ದಿನ ಕೂಡ ಕಸ ವಿಲೇವಾರಿ ಮಾಡಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts