More

    ಬಲವರ್ಧನೆಗೆ ಪದಾಧಿಕಾರಿಗಳ ಆಯ್ಕೆ

    ಶಿರಸಿ: ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವ ಉಳಿಸಲು ಹಾಗೂ ಸಂಘಟನೆ ಬಲವರ್ಧನೆಗೆ ಪೂರಕವಾಗಿ ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ 1423 ಬೂತ್​ಗಳ ಸಮಿತಿ ರಚಿಸಿ ಅಧ್ಯಕ್ಷರ ಆಯ್ಕೆ ಆಗಿದೆ. ಆ ಮೂಲಕ ಬೂತ್, ಮಂಡಲಗಳ ರಚನೆ ಕೂಡ ಆಗಿದೆ. ಪ್ರಸ್ತುತ ಜಿಲ್ಲಾ ಘಟಕದ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು, ವಿಶೇಷ ಆಹ್ವಾನಿತರ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ನಾಗರಾಜ ನಾಯಕ ಬಾಸ್ಗೋಡ, ಉಮೇಶ ಭಾಗವತ, ಅಶೋಕ ಚಲವಾದಿ, ಉಮೇಶ ಹಳೇಬಂಕಾಪುರ, ನಯನಾ ನೀಲಾವರ್, ಭಾಗ್ಯ ಮೇಸ್ತಾ, ಕಲ್ಪನಾ ನಾಯ್ಕ, ರೇಖಾ ಅಂಡಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಎನ್.ಎಸ್.ಹೆಗಡೆ, ಗೋವಿಂದ ನಾಯ್ಕ, ಚಂದ್ರು ದೇವಾಡಿಗ, ಕಾರ್ಯದರ್ಶಿಗಳಾಗಿ ಆರತಿ ಗೌಡ, ಶಿವಾನಿ ಭಟ್ಕಳ, ಉಷಾ ಹೆಗಡೆ, ಪ್ರಶಾಂತ ನಾಯ್ಕ, ನಿತ್ಯಾನಂದ ಗಾಂವಕರ, ಕೃಷ್ಣಮೂರ್ತಿ ಮಡಿವಾಳ, ಗುರುಪ್ರಸಾದ ಹೆಗಡೆ, ಬಸವರಾಜ ಕಲಶೆಟ್ಟಿ, ಕೋಶಾಧ್ಯಕ್ಷರಾಗಿ ಶ್ರೀಕಾಂತ ನಾಯ್ಕ, ಕಾರ್ಯಾಲಯ ಕಾರ್ಯದರ್ಶಿಯಾಗಿ ಶ್ರೀರಾಮ ನಾಯ್ಕ ಆಯ್ಕೆ ಮಾಡಲಾಗಿದೆ ಎಂದರು.

    ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ರವಿ ನಾಯ್ಕ, ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಶಾಂತ ನಾಯಕ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ಶೋಭಾ ನಾಯ್ಕ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ಮಹೇಶ ಹೊಸಕೊಪ್ಪ, ಎಸ್.ಸಿ. ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ಉದಯ ಶೆಟ್ಟಿ, ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ಮಾಸ್ತಿ ಗೊಂಡ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ಅನೀಸ್ ತಹಶೀಲ್ದಾರ ನೇಮಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ವಿಶೇಷ ಆಹ್ವಾನಿತರಾಗಿ ಎಂ.ಜಿ.ಭಟ್ಟ, ಗಜಾನನ ಗುನಗ, ನಾಗರಾಜ ನಾಯಕ ತೊರ್ಕೆ, ಸುಧಾ ಗೌಡ, ಉಮೇಶ ನಾಯ್ಕ, ವೆಂಕಟ್ರಮಣ ಹೆಗಡೆ, ಕುಮಾರ ಮಾರ್ಕಾಡೆ, ಜಗದೀಶ ನಾಯಕ, ಮನೋಜ ಭಟ್, ಸುಧಾಕರ ರೆಡ್ಡಿ, ರಾಘವೇಂದ್ರ ಭಟ್ಟ, ಗಣಪತಿ ಮಾನಿಗದ್ದೆ, ಆರ್.ವಿ.ಹೆಗಡೆ, ಮಂಗೇಶ ದೇಶಪಾಂಡೆ, ಶ್ಯಾಮಿಲಿ ಪಾಠಣಕರ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಗೋವಿಂದ ನಾಯ್ಕ, ಎಂ.ಎಸ್.ಹೆಗಡೆ, ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ, ಪ್ರಮುಖರಾದ ಶ್ರೀರಾಮ ನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts