More

    ಬೇಲೂರಲ್ಲಿ ಸಂಭ್ರಮದ ಅಶ್ವಾರೋಹಣೋತ್ಸವ

    ಬೇಲೂರು: ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣದಲ್ಲಿ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಅಶ್ವಾರೋಹಣೋತ್ಸವ, ಮೊಲದ ಬೇಟೆ ಹಾಗೂ ಓಲೆ ತೊಡಿಸುವ ಕಾರ್ಯ ಸೋಮವಾರ ಸಂಜೆ ನೆರವೇರಿತು.

    ದೇಗುಲ ಆವರಣದಿಂದ ದೇವರ ಅಶ್ವಾರೋಹಣೋತ್ಸವ 2 ಕಿಲೋಮೀಟರ್ ದೂರದ ನೆಹರೂನಗರಕ್ಕೆ ಮಂಗಳವಾದ್ಯ, ದೇಗುಲದ ಆಡಳಿತ ಮಂಡಳಿ ಸದಸ್ಯರೊಂದಿಗೆ ಮೆರವಣಿಗೆಯಲ್ಲಿ ತೆರಳಿತು. ಬಳಿಕ ಹಳೇಬೀಡು ರಸ್ತೆಯಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಪ್ರದಾಯದಂತೆ, ಕಾಡಿನಿಂದ ಮೊಲ ಹಿಡಿದು ತಂದು ಅದನ್ನು ದೇವರ ಮೊಲವೆಂದು ಪರಿಗಣಿಸಿ ಪೂಜೆ ನೆರವೇರಿಸಿದ ನಂತರ ಮೊಲದ ಮೂಗಿಗೆ ಚಿನ್ನದ ಮುರ (ಚಿನ್ನದ ಮೂಗುತಿ)ಚುಚ್ಚಿ ದೇವರ ಮೂರ್ತಿಗೆ ಸ್ಪರ್ಶಿಸಿ ಕಾಡಿಗೆ ಬಿಡುತ್ತಾರೆ.

    ಪಟೇಲರ ಸಂಪ್ರದಾಯ: ಮೊಲ ಬಿಡುವ ಪದ್ಧತಿ ಈ ಹಿಂದಿನಿಂದಲು ಇದ್ದು, ಸಮೀಪದ ದೊಡ್ಡಬೇಡಗೆರೆ ಪಟೇಲರ ವಂಶಸ್ಥ, ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಕುಟುಂಬ ಕಾಡಿನಿಂದ ಮೊಲ ಹಿಡಿದು ತರುವ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿದೆ.

    ಪೂಜಾ ಕಾರ್ಯವನ್ನು ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್, ಶ್ರೀನಿವಾಸ ಪ್ರಿಯ ಭಟ್ ಇತರರು ನೆರವೇರಿಸಿದರು. ಶಾಸಕ ಎಚ್.ಕೆ.ಸುರೇಶ್ ಹಾಗೂ ಪತ್ನಿ, ದೇಗುಲದ ಇಒ ಯೋಗೇಶ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಇತರರಿದ್ದರು.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts