More

    ಬರ ಪರಿಸ್ಥಿತಿ ಹಾಗೂ ಮುಂಗಾರಿನ ಸಿದ್ಧತೆಗೆ ಕ್ರಮ/ಡಿ.ಸಿ ಅಕ್ರಂ ಪಾಷ

    ವಿಜಯವಾಣಿ ಸುದ್ದಿಜಲ ಕೋಲಾರ
    ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಬರ ಪರಿಹಾರದಡಿಯಲ್ಲಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ೪೯೨ ಕೊಳವೆ ಬಾವಿಗಳಿಗೆ ಅನುಮೋದನೆ ನೀಡಲಾಗಿತ್ತು. ಅದರಲ್ಲಿ ಈವರೆಗೆ ೩೦೫ ಪೂರ್ಣಗೊಂಡಿದ್ದು, ೧೮೭ ಬಾಕಿ ಇವೆ. ಎಲ್ಲಾಕಡೆ ಇತ್ತೀಚೆಗೆ ಮಳೆಯಾಗುತ್ತಿದ್ದು, ಬೋರ್ ವೆಲ್ ಕೊರೆಯಿಸುವುದು ಸೇರಿದಂತೆ ಯಾವುದೇ ಕೆಲಸವನ್ನು ಮಾಡಬಾರದೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ನಿರ್ವಹಣೆ ಹಾಗು ಮುಂಗಾರು-ಪೂರ್ವ ಮುಂಗಾರಿನ ಸಿದ್ದತೆ ಸಂಬAಧ ಕೈಗೊಂಡ ಕ್ರಮದ ಬಗ್ಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿ ಬೋರವೆಲ್ ದುರಸ್ಥಿಗಾಗಿ ಅನುದಾನವನ್ನು ಮಂಜೂರಾತಿ ಮಾಡಲಾಗಿದ್ದು ದುರಸ್ಥಿ ಪೂರ್ಣಗೊಳಿಸದ ೧೮೭ ಬೋರವೆಲ್‌ಗೆ ನೀಡಿದ ಹಣವನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದರು.

    ಬೋರ್ ವೆಲ್ ದುರಸ್ತಿ ಕುರಿತು ವರದಿ ನೀಡಲು ತಾಲೂಕಾವಾರು ನೋಡಲ್ ಅಧಿಕಾರಿಳನ್ನು ನೇಮಿಸಿದ್ದು, ಅವರಿಂದ ವರದಿ ಬಂದ ಮೇಲೆ ಮಿಕ್ಕ ಹಣವನ್ನು ಮಂಜೂರು ಮಾಡಲಾಗುವುದು ಎಂದರು. ಸರ್ಕಾರಿ ಹಾಗೂ ಖಾಸಗಿ ಬೋರ್ ವೆಲ್ ಗಳ ಉಸ್ತುವಾರಿ ಆಯಾ ತಾಲೂಕಿನ ಕಾರ್ಯ ನಿರ್ವಹಣಾಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ ಹಾಗೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಿದರು. .ಕೋಲಾರ ಜಿಲ್ಲೆಯ ಒಟ್ಟು ೫೦,೩೫ ಅರ್ಹ ರೈತರುಗಳಿಗೆ ಹತ್ತು ಕಂತುಗಳಲ್ಲಿ ರೂ ೨೩.೯೩ ಕೋಟಿ ಬೆಳೆ ಪರಿಹಾರವನ್ನು ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ವಿತರಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    ಮುಂಗಾರು ಋತುವಿನಲ್ಲಿ ಜಿಲ್ಲೆಯಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧಾರದ ಮೇರೆಗೆ ಪ್ರುಟ್ಸ್ ಐಡಿ ಹೊಂದಿರುವ ಪಹಣಿ ಜೋಡಣೆಯಾಗಿರುವ ರೈತರುಗಳಿಗೆ ನೇರ ಹಣ ಸಂದಾಯದ ಎನ್ ಡಿ ಆರ್ ಎಫ್ ಮೂಲಕ ಎಸ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ ಬೆಳೆ ಹಾನಿ ಪರಿಹಾರವನ್ನು ವಿತರಿಸಲಾಗಿರುತ್ತದೆ.

    ಬಂಗಾರಪೇಟೆ ತಾಲ್ಲೂಕಿನ ೧೯೮೩೯ ರೈತರಿಗೆ ೫೬೩೯೩೨೭೭ ಹಣವನ್ನು, ಕೋಲಾರ-೧೩೧೬೮ ರೈತರಿಗೆ ೫೬೬೯೯೮೫೭ ಹಣವನ್ನು, ಕೆಜಿ ಎಫ್-೨೯೧೬ ರೈತರಿಗೆ, ೧೩೩೫೪೭೩೬, ಹಣ. ಮಾಲೂರು-೧೦೭೮೫ ರೈತರುಗೆ ೫೫೮೫೯೦೬೨ ಹಣವನ್ನು, ಮುಳಬಾಗಿಲು-೫೫೧೨ ರೈತರಿಗೆ ೨೬೯೯೬೩೮೮, ಹಣ. ಶ್ರೀನಿವಾಸಪುರ-೭೧೩೨ ರೈತರಿಗೆ ೩೦೦೧೬೨೧೬ ಹಣವನ್ನು ತಾಲೂಕುವಾರು ಖಾರಿಫ್ ಬರ ೨೦೨೩-೨೪ನೇ ಸಾಲಿನ ಇನ್‌ಪುಟ್ ಸಬ್ಸಿಡಿ ಪಾವತಿಸಲಾಗಿದೆ.

    ಆಧಾರ್ ಕಾರ್ಡ್ ಮುಸ್ ಮ್ಯಾಚ್, ಆಧಾರ್ ಕಾರ್ಡ್ ಗೆ ಮ್ಯಾಪ್ ಆಗದೇ ಇರುವ, ನಿಷ್ಕ್ರಿಯವಾಗಿರುವ, ಅಮಾನ್ಯ ರುಜುವಾತು ಖಾತೆ ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದ ೧೪೩೮ ಜನರಿಗೆ ಬರ ಪರಿಹಾರವನ್ನು ವಿತರಿಸಲಾಗಿರುವುದಿಲ್ಲ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಈವರೆಗೆ ೧೧೩೫೪೫ ಟನ್ ಮೇವು ಲಭ್ಯವಿದೆ. ಜಿಲ್ಲೆಗೆ ೧೩೨೮೦ ಮಿನಿ ಮೇವಿನ ಕಿಟ್ ಗಳನ್ನು ಖರೀದಿಸಿ, ೬೫೦೦ ಅರ್ಹ ರೈತರಿಗೆ ವಿತರಿಸಲಾಗಿದೆ. ಇನ್ನೂ ೨೦,೦೦೦ ಮಿನಿ ಮೇವಿನ ಕಿಟ್ ಗಳ ಖರೀದಿಗೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಜಂಟಿ ನಿರ್ದೇಶಕಿ ಸುಮಾ, ತೋಟಗಾರಿಕಾ ಉಪನಿರ್ದೇಶಕರಾದ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸನ್ ಹಾಗೂ ಎಲ್ಲಾ ತಾಲ್ಲೂಕಿನ ತಹಶೀಲ್ದಾರರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಭಯೋತ್ವಾದನೆ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

    ಚಿತ್ರ.೨೧ ಕೆ.ಎಲ್.ಆರ್. ೦೨ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ನಿರ್ವಹಣೆ ಹಾಗು ಮುಂಗಾರು-ಪೂರ್ವ ಮುಂಗಾರಿನ ಸಿದ್ದತೆ ಸಂಬAಧ ಕೈಗೊಂಡ ಕ್ರಮದ ಬಗ್ಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ, ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಇದ್ದರು.

    ಬರ ಪರಿಸ್ಥಿತಿ ಹಾಗೂ ಮುಂಗಾರಿನ ಸಿದ್ಧತೆಗೆ ಕ್ರಮ/ಡಿ.ಸಿ ಅಕ್ರಂ ಪಾಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts