More

    ಬದುಕಿನ ಸನ್ಮಾರ್ಗ ತೋರಿದ ಶರಣರು

    ಪಂಚನಹಳ್ಳಿ: ಎಲ್ಲ ಕಾಲಘಟ್ಟದ ಶರಣರು ಜನರ ಒಳಿತಿಗಾಗಿ ಸಂದೇಶಗಳನ್ನು ನೀಡುವುದರ ಜತೆಗೆ ಉತ್ತಮ ಬದುಕಿಗೆ ಸನ್ಮಾರ್ಗವನ್ನೂ ತೋರಿದ್ದಾರೆ. ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗಲಿದೆ ಎಂದು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.

    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಯಳನಡು ಮಹಾಸಂಸ್ಥಾನ ಜು.29ರಿಂದ ಆ.26ರವರೆಗೆ ತಾಲೂಕಿನಾದ್ಯಂತ ಹಮ್ಮಿಕೊಂಡಿರುವ ಶ್ರಾವಣ ಸಂಜೆ ಶರಣ ಸಂದೇಶ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸೋಮವಾರ ಶೆಟ್ಟಿಹಳ್ಳಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

    ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ದುರಾದೃಷ್ಟಕರ. ಇಂದಿನ ಅನಿಶ್ಚಿತತೆಯ ಕಾಲಘಟ್ಟದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕಿನಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮದ ಮೂಲಕ ಶರಣರ ಸಂದೇಶಗಳನ್ನು ಬಿತ್ತರಿಸಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.

    ಯಗಟಿಪುರ ಪ್ರಸನ್ನ ಮಾತನಾಡಿ, ತಾಲೂಕಿನ ಆಯ್ದ ಸ್ಥಳಗಳಲ್ಲಿ ಒಂದು ತಿಂಗಳು ಕಾಲ ಶ್ರಾವಣ ಸಂಜೆಯನ್ನು ಆಯೋಜಿಸಲಾಗಿದೆ. ಇದಕ್ಕೆ ಬೆನ್ನೆಲುಬಾಗಿ ಯಳನಡು ಮಹಾಸಂಸ್ಥಾನ ನಿಂತಿದೆ. ಸಮಾಜದಲ್ಲಿನ ತಲ್ಲಣಗಳು ದೂರವಾಗಿ ಕಲ್ಯಾಣ ರಾಜ್ಯವಾಗಲಿ ಎನ್ನುವುದು ಶರಣ ಸಾಹಿತ್ಯ ಪರಿಷತ್ತಿನ ಮೂಲ ಆಶಯ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts