More

    ಬದುಕಿನ ನೀತಿಯಿಂದ ಶ್ರೇಷ್ಠ ವ್ಯಕ್ತಿತ್ವ

     ಚಿಕ್ಕಮಗಳೂರು: ಜಾತಿಯಿಂದ ಶ್ರೇಷ್ಠರಾಗಲು ಸಾಧ್ಯವಿಲ್ಲ, ಬದುಕಿದ ರೀತಿ ಮತ್ತು ನೀತಿಯಿಂದ ದೊಡ್ಡವರಾಗಬಹುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ ಬುಧವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮಡಿವಾಳ ಮಾಚಿದೇವರ ಬದುಕು ನಿಸ್ವಾರ್ಥ ಮತ್ತು ಸಮಾಜದ ಹಿತಕ್ಕಾಗಿತ್ತು. ಕಾಯಕಕ್ಕೆ ಗೌರವ ತಂದುಕೊಡುವ, ಭಗವತ್ ಪ್ರೇಮದ ಬದುಕಾಗಿದ್ದರಿಂದ ಅವರನ್ನು ನಾವೆಲ್ಲ ಆರಾಧಿಸುತ್ತಿದ್ದೇವೆ. ಉತ್ತಮ ಚಿಂತನೆ ಮತ್ತು ಬದುಕಿನ ಮೂಲಕ ಹರ ಸ್ವರೂಪ ಸೇರಿದವರು ಮಡಿವಾಳ ಮಾಚಿದೇವರು ಎಂದು ಬಣ್ಣಿಸಿದರು.

    ಬುದ್ಧ, ಬಸವಣ್ಣ, ಪುಲೆ, ನಾರಾಯಣಗುರು, ಕನಕದಾಸ, ಸಂತ ಶಿಶುನಾಳ ಷರೀಫ್, ಅಂಬೇಡ್ಕರ್ ಆದರ್ಶದ ವ್ಯಕ್ತಿತ್ವ ಹೊಂದಿದ್ದರಿಂದ ಆರಾಧಿಸಲಾಗುತ್ತಿದೆ. ಸ್ವಾರ್ಥಿಗಳನ್ನು ಕುಟುಂಬವೂ ಮರೆಯುತ್ತದೆ. ನಿಸ್ವಾರ್ಥಿಗಳನ್ನು ಸಮಾಜ ಶತಮಾನಗಳ ಕಾಲ ಗುರುತಿಸುತ್ತದೆ ಎಂದು ಹೇಳಿದರು.

    ಭಗವಂತನನ್ನು ಒಲಿಸುವವನೇ ಶ್ರೇಷ್ಠ. ಭಕ್ತಿಯಿಂದ ಕಾಯಕ ಮಾಡಿದರೆ ನಾವೇ ಭಗವಂತರಾಗುತ್ತೇವೆ. ನರನೇ ಹರನಾಗುವ ಅವಕಾಶ ಇರುವಂಥ ಭೂಮಿ ಭಾರತ. ಆ ಕಾರಣದಿಂದಲೇ ಇದನ್ನು ಪುಣ್ಯ ಭೂಮಿ ಎನ್ನುವುದು ಎಂದರು.

    ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಎಎಸ್ಪಿ ಕೃಷ್ಣಮೂರ್ತಿ, ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಎಚ್.ಆರ್.ಪಾಂಡುರಂಗ, ಗ್ರೇಡ್-2 ತಹಸೀಲ್ದಾರ್ ಶಾರದಾ, ಮಡಿವಾಳ ಸಮಾಜದ ಮುಖಂಡರಾದ ರಾಮಚಂದ್ರ, ಜಯರಾಂ, ಹೇಮಂತ್, ನವೀನ್​ಕುಮಾರ್, ರಮೇಶ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts