More

    ಬಡಾವಣೆ ಸೂರಿಗೆ ಶುಲ್ಕ ಬರೆ

    ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಮೂಲ ಸೌಕರ್ಯ ಹೊಂದಿರದ
    ಬಡಾವಣೆಗಳಲ್ಲಿ ಸೂರು ಕಟ್ಟಿಕೊಳ್ಳಬೇಕು ಎನ್ನುವವರು ಸಾವಿರಾರೂ ಶುಲ್ಕ ತೆರಬೇಕಿದೆ.

    ಹೌದು. ಮಹಾನಗರ ಪಾಲಿಕೆ ತನ್ನ 2022-23ನೇ ಸಾಲಿನ ಬಜೆಟ್‌ನಲ್ಲಿ ಉಲ್ಲೇಖಿಸಿದಂತೆ ಅಭಿವೃದ್ಧಿ ಹೊಂದಿರದ ಬಡಾವಣೆಗಳಲ್ಲಿ ಕಟ್ಟಡ ಪರವಾನಗಿ ಅಭಿವೃದ್ಧಿ ಶುಲ್ಕವನ್ನು ಆಗಸ್ಟ್ 1ರಿಂದಲೇ ಪ್ರತಿ ಚದರ ಮೀಟರ್‌ಗೆ 480 ರೂ.ರಿಂದ 640 ರೂ. ಏರಿಕೆ ಮಾಡಿದೆ. ಅಲ್ಲದೆ, ಬುಡಾದಿಂದ ಅಭಿವೃದ್ಧಿ ಹೊಂದಿರುವ ಮತ್ತು ಪ್ರಾರಂಭಿಕ ಪ್ರಮಾಣ ಪತ್ರ (ಸಿ.ಸಿ) ಪಡೆದಿರುವ ಬಡಾವಣೆಗಳಿಗೆ ಯಾವುದೇ ರೀತಿಯ ಅಭಿವೃದ್ಧಿ ಶುಲ್ಕ ಇಲ್ಲದೆ ಕಟ್ಟಡಕ್ಕೆ ಮಂಜೂರಾತಿ ಪಡೆದುಕೊಳ್ಳಬಹುದು.

    ಮಹಾನಗರ ಪಾಲಿಕೆ 20013-14ನೇ ಸಾಲಿನ ಅವಧಿಯಲ್ಲಿ ಅಭಿವೃದ್ಧಿ ಶುಲ್ಕ ಏರಿಸಿತ್ತು. ನಂತರ ದಿನಗಳಲ್ಲಿ ತಾಂತ್ರಿಕ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದಾಗಿ ಅಭಿವೃದ್ಧಿ ಶುಲ್ಕ ಏರಿಕೆ ಮಾಡಿರಲಿಲ್ಲ. ಇದೀಗ ಸಮಗ್ರ ಅಭಿವೃದ್ಧಿ ಪಡಿಸುವುದು ಮತ್ತು ಸ್ಥಳೀಯ ನಾಗರಿಕರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಪಾಲಿಕೆ ಒಂಭತ್ತು ವರ್ಷದ ಬಳಿಕ ಪ್ರತಿ ಚ.ಮೀ.ಗ 480 ರೂ. ಇತ್ತು. ಇದೀಗ ಅದು 640 ರೂ.ಗೆ ಅಭಿವೃದ್ಧಿ ಶುಲ್ಕದಲ್ಲಿ ಏರಿಕೆ ಮಾಡಿದೆ.

    ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ಅಭಿವೃದ್ಧಿ ಬಡಾವಣೆಗಳಿದ್ದರೆ ಅಲ್ಲಿ ಯಾವುದೇ ತರಹದ ಅಭಿವೃದ್ಧಿ ಶುಲ್ಕ ವಿಧಿಸುತ್ತಿಲ್ಲ. ಬುಡಾದಿಂದ ಸಿಸಿ ಪ್ರಮಾಣ ಪತ್ರ ಪಡೆದುಕೊಂಡಿದ್ದರೆ ಅಭಿವೃದ್ಧಿ ಶುಲ್ಕ ಇಲ್ಲದೆ ಕಟ್ಟಡ ಪರವಾನಗಿ ನೀಡಲಾಗುತ್ತಿದೆ. ಆಯಾ ನಿವೇಶನ ಮತ್ತು ಕಟ್ಟಡ ವಿಸ್ತೀರ್ಣ ಆಧಾರದ ಮೇಲೆ ಅಭಿವೃದ್ಧಿ ಶುಲ್ಕ ವಿಧಿಸಲಾಗುತ್ತಿದೆ. ಪಾಲಿಕೆಗೆ ಹೆಚ್ಚಿನ ಆದಾಯದ ಬರಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ನಿರ್ಮಾಣಕ್ಕಿಂತ ಕಟ್ಟಡ ಶುಲ್ಕ ಹೆಚ್ಚಳ: ಅಭಿವೃದ್ಧಿ ಹೊಂದಿರದ ಬಡಾವಣೆಗಳಲ್ಲಿ ನಿವೇಶನಕ್ಕಿಂತ ಕಡಿಮೆ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಿದರೂ ನಿವೇಶನ ಆಧಾರದ ಮೇಲೆ ಅಭಿವೃದ್ಧಿ ಕರ ಪಾವತಿಸಬೇಕಿದೆ. ಇದರಿಂದ ಕಟ್ಟಡ ನಿರ್ಮಾಣ ವೆಚ್ಚಕ್ಕಿಂತ ಹೆಚ್ಚು ಶುಲ್ಕ ಸರ್ಕಾರಕ್ಕೆ ಪಾವತಿಸಬೇಕಾಗಿದೆ. ಪಾಲಿಕೆ ನಗರ ಯೋಜನೆ ವಿಭಾಗದ ಕಟ್ಟಡ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ (ಸಿ.ಸಿ), ಸ್ವಾಧೀನನಾನುಭ ಪ್ರಮಾಣಪತ್ರ (ಒ.ಸಿ) ನೀಡುವಾಗ ನಿವೇಶನಕ್ಕೆ ಮತ್ತು ಕಟ್ಟಡಕ್ಕೆ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಳ್ಳುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts