More

    ಬಡವರ ಸಮಸ್ಯೆಗಳಿಗೆ ಸ್ಪಂದಿಸಿ

    ವಿಜಯವಾಣಿ ಸುದ್ದಿಜಾಲ ದಾಂಡೇಲಿ: ನಗರದ ಎಲ್ಲ ವಾರ್ಡ್​ಗಳ ನಗರಸಭೆ ಸದಸ್ಯರು ಪೌರಾಯುಕ್ತರ ಸಹಕಾರದೊಂದಿಗೆ ಲೌಕ್​ಡೌನ್ ಅವಧಿಯಲ್ಲಿ ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

    ನಗರಸಭೆಯ ಸಭಾಂಗಣದಲ್ಲಿ ಜರುಗಿದ ಅಧಿಕಾರಿಗಳ ಸಭೆಯ ನಡೆಸಿ ಮಾತನಾಡಿದ ಅವರು, ಮುಂದಿನ ವಾರ ಇನ್ನೂ ಹತ್ತು ಸಾವಿರ ಮಾಸ್ಕ್​ಗಳನ್ನು ವಾರ್ಡ್​ಗಳಲ್ಲಿ ವಿತರಿಸಲು ನೀಡಲಾಗುವುದು. ಅತಿ ಅವಶ್ಯವಿರುವ ಕಡು ಬಡವರಿಗೆ ಈ ಮಾಸ್ಕ್​ಗಳನ್ನು ವಿತರಿಸಬೇಕು ಎಂದು ಸಲಹೆ ನೀಡಿದರು.

    ದಾಂಡೇಲಿ ನಗರಕ್ಕೆ ಯಾವುದೇ 24 ಗಂಟೆ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ವಿವಿಧ ವಾರ್ಡ್​ಗಳ ಸದಸ್ಯರು ಹಾಗೂ ಸಮಾಜ ಸೇವಕರಿಂದ ಸಮಸ್ಯೆಗಳನ್ನು ಆಲಿಸಿ ಅವುಗಳ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ನಗರಸಭಾ ಆಯುಕ್ತರಿಗೆ ಸೂಚಿಸಿದರು.

    ನಾಳೆಯಿಂದ ಮೆಕ್ಕೆಜೋಳ ಬೀಜ ಲಭ್ಯ: ಹಳಿಯಾಳ-ಮುಂಡಗೋಡ ರೈತರಿಗೆ ಅತಿ ಅವಶ್ಯವಾಗಿ ಬೇಕಾಗಿರುವ 9126 ಟಿಕೆಸಿ ಮೆಕ್ಕೆಜೋಳ ಬೀಜ ಶನಿವಾರದಿಂದ ಹಳಿಯಾಳ ಮತ್ತು ಮುಂಡಗೋಡದಲ್ಲಿ ಲಭ್ಯವಾಗಲಿವೆ ಎಂದು ಆರ್.ವಿ. ದೇಶಪಾಂಡೆ ತಿಳಿಸಿದರು.

    ಪೌರಾಯುಕ್ತ ಡಾ. ಸೈಯದ್ ಜಾಹೇದ್ ಅಲಿ, ತಹಸೀಲ್ದಾರ್ ಶೈಲೇಶ ಪರಮಾನಂದ, ಡಿವೈಎಸ್​ಪಿ ಮೋಹನ ಪಿ. ಪ್ರಸಾದ, ಹಳಿಯಾಳ ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

    ಈ ವೇಳೆ ಆರ್.ವಿ. ದೇಶಪಾಂಡೆ ಅವರು, ಬ್ಯೂಟಿ ಪಾರ್ಲರ್, ಧೋಬಿ, ಫೋಟೋಗ್ರಾಫರ್, ಹೋಂಗಾರ್ಡ್ಸ್ ಸೇವೆಯಲ್ಲಿರುವ 65 ಜನರಿಗೆ ನಗರಸಭೆಯ ಆವರಣದಲ್ಲಿ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಿದರು. ಅಲ್ಲದೆ, ವಿವಿಧ ವಾರ್ಡ್​ಗಳಲ್ಲಿ ಹಂಚಲು 5 ಸಾವಿರ ಮಾಸ್ಕ್​ಗಳನ್ನು ನಗರಸಭೆ ಆಯುಕ್ತರಿಗೆ ನೀಡಿದರು.

    ಆಟೋ ಚಾಲಕರಿಂದ ಮನವಿ ಸಲ್ಲಿಕೆ

    ದಾಂಡೇಲಿ ನಗರದಲ್ಲಿ 350 ಕ್ಕೂ ಹೆಚ್ಚು ಆಟೋಗಳಿವೆ. ಆದರೆ ಹಲವು ಚಾಲಕರು ಸರ್ಕಾರ ಘೊಷಿಸಿದ ಸಹಾಯಧನ ರೂ. 5000 ದಿಂದ ವಂಚಿತರಾಗಲಿರುವ ಭಯದಲ್ಲಿ ಇದ್ದಾರೆ. ಹಾಗಾಗಿ ನಮ್ಮ ನೆರವಿಗೆ ಆಗಮಿಸಿ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಬಾಬಾಜಾನ್ ಜಮಾದಾರ, ಪದಾಧಿಕಾರಿಗಳಾದ ರಾಜೇ ಸಾಬ್ ಕೇಸನೂರ ಅಲ್ಲಾಬಕ್ಷ ತಡಕೋಡ ಶಾಸಕ ಆರ್.ವಿ ದೇಶಪಾಂಡೆಯವರಿಗೆ ಮನವಿ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts