More

    ಬಡವರಿಗೆ ನೆರವಾಗಲು ರಕ್ತದಾನ ಶಿಬಿರ

    ನರಗುಂದ: ಆರ್ಥಿಕ ಕಾರಣದಿಂದ ಸರ್ಕಾರವು ಲಾಕ್​ಡೌನ್ ಸಡಿಲಿಸಿರುವುದು ಅತ್ಯಂತ ದೊಡ್ಡ ತಪ್ಪು. ಆದರೆ, ಕರೊನಾ ನಿಯಂತ್ರಣಕ್ಕೆ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವು ಸಾರ್ವಜನಿಕರ ಸೇವೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

    ಕೋವಿಡ್-19 ಪ್ರಯುಕ್ತ ಪಟ್ಟಣದ ಮಲಪ್ರಭಾ ಕೋ, ಆಯಿಲ್ ಮಿಲ್​ನಲ್ಲಿ ನರಗುಂದ ಮತ್ತು ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಘಟಕದಿಂದ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅನೇಕ ಬಡ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ರಕ್ತ ಸಿಗುತ್ತಿಲ್ಲ. ಹೀಗಾಗಿ ವಿಶೇಷ ಮುತುವರ್ಜಿ ವಹಿಸಿರುವ ಕಾಂಗ್ರೆಸ್ ಪಕ್ಷವು ರಾಜ್ಯ ಹಾಗೂ ಜಿಲ್ಲೆಯ ಎಲ್ಲ ಬ್ಲಾಕ್ ಘಟಕಗಳ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡು ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.

    ಮಾಜಿ ಸಚಿವ ಬಿ.ಆರ್. ಯಾವಗಲ್ಲ ಮಾತನಾಡಿ, ನರಗುಂದ ಮತ್ತು ಹೊಳೆಆಲೂರ ಘಟಕಗಳ 50ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡುತ್ತಿದ್ದು, ಅದನ್ನು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರವಾನಿಸಲಾಗುವುದು ಎಂದರು.

    ತಹಸೀಲ್ದಾರ್ ಎ.ಎಚ್. ಮಹೇಂದ್ರ, ಸಿಪಿಐ ಡಿ.ಬಿ. ಪಾಟೀಲ, ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಪ್ರವೀಣ ಯಾವಗಲ್ಲ, ರಾಜು ಕಲಾಲ, ಪ್ರಕಾಶಗೌಡ ತಿರಕನಗೌಡ್ರ, ಟಿ.ಬಿ. ಶಿರಿಯಪ್ಪಗೌಡ್ರ, ಅಪ್ಪಣಗೌಡ ನಾಯ್ಕರ, ವಿ.ಎನ್. ಕೊಳ್ಳಿಯವರ, ಸಿ.ಎಚ್. ಕೋರಿ, ವಿಷ್ಣುಸಾಠೆ, ಸದ್ದಾಂ ಚಂದೂನವರ, ಪ್ರಕಾಶ ಹಡಗಲಿ, ವಿಜಯ ಚಲವಾದಿ, ಉದಯಗೌಡ ವೀರನಗೌಡ್ರ, ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts