More

    ಬಡತನದ ಬಾಳಿಗೆ ಲಿವರ್ ಫೇಲ್ ಬರೆ!

    ಬೆಳಗಾವಿ: ಆರೋಗ್ಯವೇ ಭಾಗ್ಯ ಎಂಬುದು ನಿಜಕ್ಕೂ ತೂಕದ ಮಾತು. ಆರೋಗ್ಯ ಕೈಕೊಟ್ಟರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಅದರಲ್ಲೂ ಬಡತನದಲ್ಲಿ ಆರೋಗ್ಯ ಕೆಟ್ಟರೆ ಬದುಕು ನರಕಸದೃಶ್ಯವಾಗುತ್ತದೆ. ಅಂಥದ್ದೇ ದಾರುಣ ಬದುಕು ಜೀವಿಸುತ್ತಿರುವುದು ಚಿಕ್ಕೋಡಿ ತಾಲೂಕಿನ ಕರೋಶಿಯ ಬಾಜಿರಾವ್ ಸುಳಕುಡೆ.

    ಮನೆಯಲ್ಲಿ ಕಡುಬಡತನ, ಜಮೀನಿಲ್ಲ. ತಾಯಿ, ಪತ್ನಿ, ಇಬ್ಬರು ಚಿಕ್ಕ ಮಕ್ಕಳೊಂದಿಗೆ ಬದುಕುತ್ತಿರುವ 32 ವರ್ಷದ ಬಾಜಿರಾವ್‌ಗೆ ದುಡಿದು ತಿನ್ನಲೂ ಆಗದಂಥ ಪರಿಸ್ಥಿತಿ ಇದೆ. ‘ಲಿವರ್ ಸಿರೋಸಿಸ್’ ಕಾಯಿಲೆಯಿಂದ ಬಳಲುತ್ತಿರುವ ಬಾಜಿರಾವ್ ದುಡಿಯುವ ಶಕ್ತಿ ಕಳೆದುಕೊಂಡು ಹತಾಶೆಗೀಡಾಗಿದ್ದಾರೆ. ಲಿವರ್ ಕಸಿ ಮಾಡುವ ಅವಶ್ಯಕತೆ ಇದ್ದು, ಅದಕ್ಕಾಗಿ 22 ಲಕ್ಷ ರೂ.ಖರ್ಚಾಗಲಿದೆ. ಆದರೆ, ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಅವರಿಗೆ ಇಷ್ಟೊಂದು ಹಣ ಹೊಂದಿಸುವುದು ಅಸಾಧ್ಯ.

    ಬಾಜಿರಾವ್ ಅವರು ಗ್ರಾಮದಲ್ಲಿ ಪಾನ್‌ಶಾಪ್ ನಡೆಸುತ್ತಿದ್ದು, ಆಸ್ಪತ್ರೆಯ ಖರ್ಚು ವೆಚ್ಚ ಭರಿಸಲಾಗದೆ ಹೌಹಾರಿದ್ದಾರೆ. ಎರಡು ವರ್ಷಗಳಿಂದ ಕಾಯಿಲೆಯ ಅಡ್ಡ ಪರಿಣಾಮಕ್ಕೆ ಕಂಗಾಲಾಗಿರುವ ಬಾಜಿರಾವ್‌ಗೆ ಸಹೋದರ ಕಾಶಿನಾಥ ಅವರು ಚಿಕ್ಕೋಡಿ, ನಿಪ್ಪಾಣಿ ಮತ್ತು ಬೆಳಗಾವಿಯ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಎಂಟು ಲಕ್ಷ ರೂ.ವರೆಗೆ ಖರ್ಚಾಗಿದೆ. ಸದ್ಯ ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಿವರ್ ವಿಲವಾಗಿದ್ದು, ಕಸಿ ಮಾಡಬೇಕಿದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ. ಅದಕ್ಕೆ ಸುಮಾರು 22 ಲಕ್ಷ ರೂ.ವೆಚ್ಚವಾಗಲಿದೆ. ಸುಳಕುಡೆ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ದಾನಿ ವ್ಯಕ್ತಿಗಳು ಸಹಾಯ ಮಾಡಿದರೆ ಬಾಜಿರಾವ್ ಹೊಸ ಬಾಳು ಕಟ್ಟಬಹುದು.

    ನೆರವು ನೀಡುವವರು ೆಡರಲ್ ಬ್ಯಾಂಕ್ ಖಾತೆ ಸಂಖ್ಯೆ: 19390100033095 ಐ.ಎ್.ಸಿ ಕೋಡ್: ಎ್.ಡಿ.ಆರ್.ಎಲ್. 0001939 ಹಣಕಾಸು ಸಹಾಯ ಮಾಡಬಹುದು. ಅವರ ಸಂಪರ್ಕ ಸಂಖ್ಯೆ 9632731806.

    ಸಹೋದರ ಬಾಜಿರಾವ್ ಎರಡು ವರ್ಷಗಳಿಂದ ಲಿವರ್ ಕಾಯಿಲೆಯಿಂದ ಬಳಲುತ್ತಿದ್ದು, ಬಡತನದಿಂದಾಗಿ ಲಿವರ್ ಕಸಿ ಚಿಕಿತ್ಸಾ ವೆಚ್ಚ ಭರಿಸುವುದು ನಮಗೆ ಅಸಾಧ್ಯವಾಗಿದೆ. ಜನರು ಉದಾರತೆ ತೋರಿದರೆ ಇನ್ನೂ ಯುವಕನಾಗಿರುವ ಸಹೋದರ ಬದುಕುಳಿಯುತ್ತಾನೆ.
    | ಕಾಶಿನಾಥ ಸುಳಕುಡೆ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts