More

    ಬಜೆಟ್​ನಲ್ಲಿ ಶೈಕ್ಷಣಿಕ ಸಾಲ ಮನ್ನಾ ಮಾಡಿ

    ಶಿವಮೊಗ್ಗ: ಅತಿಥಿ ಉಪನ್ಯಾಸಕರ ಕಾಯಂ, ಕಾಲ್ಪನಿಕ ವೇತನ ಜಾರಿ ಹಾಗೂ ಪದವೀಧರ ನಿರುದೋಗಿಗಳ ಶೈಕ್ಷಣಿಕ ಸಾಲ ಮನ್ನಾ ಘೊಷಣೆಯನ್ನು ಪ್ರಸಕ್ತ ಬಾರಿಯ ಬಜೆಟ್​ನಲ್ಲಿ ಮಾಡುವಂತೆ ಎಂಎಲ್​ಸಿ ಆಯನೂರು ಮಂಜುನಾಥ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

    ಬಜೆಟ್​ನಲ್ಲಿ ಶೈಕ್ಷಣಿಕ ಸಾಲ ಮನ್ನಾ ಆಗಲಿದೆ ಎಂಬ ನಿರೀಕ್ಷೆ ಇದೆ. ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿ ಹಾಗೂ ಆತನ ಕುಟುಂಬ ಆಸ್ತಿಗಳನ್ನು ಬ್ಯಾಂಕ್​ಗಳಲ್ಲಿ ಅಡವಿಟ್ಟಿದ್ದು ಉದ್ಯೋಗ ಸಿಗದೆ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

    ಹಾಗಾಗಿ ಶೈಕ್ಷಣಿಕ ಸಾಲ ಮನ್ನಾಗೊಳಿಸಬೇಕು. ಅದು ಸಾಧ್ಯವಾಗದಿದ್ದರೆ ಕನಿಷ್ಠ ಬಡ್ಡಿಯನ್ನಾದರೂ ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಜೆಟ್​ನಲ್ಲಿ ಘೊಷಣೆ ಮಾಡುವ ನಿರೀಕ್ಷೆ ಇದೆ ಎಂದರು.

    ನೌಕರರ ಕಾಯಂಗೊಳಿಸಲು ಒತ್ತಾಯ: ಅನೇಕ ವರ್ಷಗಳಿಂದ ಅತಿಥಿ ಉಪನ್ಯಾಸಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದ 413 ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿ ನಡೆದಿಲ್ಲ. ಕೇವಲ 13 ಸಾವಿರ ವೇತನ ನೀಡುವ ಮೂಲಕ ಅಪ್ರತ್ಯಕ್ಷವಾಗಿ ಶೋಷಣೆ ಮಾಡಲಾಗುತ್ತಿದೆ. ಅತಿಥಿ ಉಪನ್ಯಾಸಕರನ್ನು ಹೊರಗಿಟ್ಟರೆ ಯಾವುದೇ ಕಾಲೇಜು ಕೂಡ ನಡೆಯುವುದಿಲ್ಲ. ಆ ನಿಟ್ಟಿನಲ್ಲಿ 10-12 ವರ್ಷಗಳಿಂದ ಸೇವೆ ಸಲ್ಲಿಸಿದವರನ್ನು ಅರ್ಹತೆ ಆಧಾರದ ಮೇಲೆ ಕಾಯಂಗೊಳಿಸಬೇಕು. ಆ ಸಮಸ್ಯೆಯನ್ನು ಬಿಜೆಪಿ ಸರ್ಕಾರ ಬಗೆಹರಿಸಬೇಕಿದೆ ಎಂದರು.

    ಈ ನಡುವೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ಸಲ್ಲಿಸಿರುವ ಕಾಲ್ಪನಿಕ ವೇತನ ವರದಿ ಅನುಷ್ಠಾನಗೊಳಿಸಬೇಕಿದೆ. ಈ ಸಂಬಂಧ ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಹಾಗೂ ಸಿಎಂಗೆ ಮನವಿ ಮಾಡಲಾಗಿದೆ ಎಂದರು.

    ಅಸಂಘಟಿತ ಕಾರ್ವಿುಕರ ಪರ ಚರ್ಚೆ: ಅಸಂಘಟಿತ ಕಾರ್ವಿುಕ ವಲಯದಲ್ಲಿ 45 ವಿವಿಧ ಬಗೆಯ ಕಾರ್ವಿುಕರಿದ್ದಾರೆ. ಆದರೆ ಕಟ್ಟಡ ಕಾರ್ವಿುಕರನ್ನು ಹೊರಗಿಟ್ಟು ಉಳಿದ ವರ್ಗದವರನ್ನು ಸರ್ಕಾರ ಗುರುತಿಸಿ ಸನ್ಮಾನಿಸುತ್ತಿದೆ. ಆ ಕಾರ್ವಿುಕರನ್ನೂ ಸರ್ಕಾರ ಗುರುತಿಸಿ ಸನ್ಮಾನಿಸಬೇಕು. ಕಾರ್ವಿುಕರ ಇಲಾಖೆ ಬಹಳ ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡುವ ಕೆಲಸ ಆಗಬೇಕಿದೆ. ಇದನ್ನು ಸದನದಲ್ಲಿ ಪ್ರಸ್ತಾಪಿಸಲಿದ್ದೇನೆ ಎಂದು ಹೇಳಿದರು.

    ಈ ಬಾರಿ ಸಿಎಂ ಯಡಿಯೂರಪ್ಪ ಸದನಕ್ಕೆ 30 ದಿನ ಮೀಸಲಿಟ್ಟಿದ್ದು ಸದನದ ಸದಸ್ಯರು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಕೂಡ ಮುಂದಕ್ಕೆ ಹಾಕಲಾಗಿದೆ. ಮಾ.3 ಮತ್ತು 4ರಂದು ಸಂವಿಧಾನ ದಿನವೆಂದು ಆಚರಿಸಲಿದ್ದು ಈ ಕುರಿತು ಚರ್ಚೆ ಆಗಲಿದೆ. ಶಾಸಕ ಮತ್ತು ಸಂಸದರಿಗೆ ಸಂವಿಧಾನದ ಅರಿವು ಬರಬೇಕಿದೆ ಎಂದರು.

    ಹೋರಾಟದಲ್ಲಿ ನಾನು ಏಕಾಂಗಿ: ಸಿಮ್ಸ್(ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ)ನಲ್ಲಿ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡು ಶೋಷಣೆ ಮುಂದುವರಿಸಲಾಗಿದೆ. ಖಾಲಿ ಹುದ್ದೆಗಳನ್ನು ಹೊರಗುತ್ತಿಗೆಯಿಂದ ನೇಮಿಸಿಕೊಳ್ಳದೆ ಸರ್ಕಾರದಿಂದಲೇ ನೇಮಕವಾಗಬೇಕು. ಈ ಹೋರಾಟದಲ್ಲಿ ನಾನು ಏಕಾಂಗಿ ಆಗಿದ್ದೇನೆ. ಜವಾಬ್ದಾರಿ ತೆಗೆದುಕೊಳ್ಳುವ ಸಂಘಟನೆಗಳು ಮುಂದೆ ಬಂದು ಸಿಮ್ಸ್ ಹೊರಗುತ್ತಿಗೆ ನೌಕರರ ಹೋರಾಟದಲ್ಲಿ ಧುಮಕಬೇಕಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts