More

    ಬಂದ್​ಗೆ ಗದಗ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

    ಗದಗ: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಗದಗ ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ವಾಹನ ಸಂಚಾರ ತಡೆ ನಡೆಸಿದರು. ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

    ಬಂದ್ ಹಿನ್ನೆಲೆಯಲ್ಲಿ ಜನಜೀವನಕ್ಕೆ ಯಾವುದೇ ತೊಂದರೆ ಉಂಟಾಗಲಿಲ್ಲ. ಜಿಲ್ಲಾದ್ಯಂತ ಬಸ್​ಗಳ ಸಂಚಾರಕ್ಕೆ ಅಡ್ಡಿಯಾಗಲಿಲ್ಲ. ಲಕ್ಷೆ್ಮೕಶ್ವರ ಹೊರತು ಪಡಿಸಿ ಜಿಲ್ಲಾದ್ಯಂತ ಅಂಗಡಿ, ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಲಕ್ಷೆ್ಮೕಶ್ವರದಲ್ಲಿ ಸಂಜೆ ವೇಳೆಗೆ ವಹಿವಾಟು ಆರಂಭವಾಯಿತು. ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

    ಗದಗ ನಗರದ ಮುಳಗುಂದ ನಾಕಾದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ವಾಹನ ಸಂಚಾರ ತಡೆ ನಡೆಸಿದರು. ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಬಾಯಿ ಬಾಯಿ ಬಡಿದುಕೊಂಡರು. ಪ್ರತಿಭಟನೆ ನಿಮಿತ್ತ ಹಲವು ಚಕ್ಕಡಿಗಳನ್ನು ತಂದಿದ್ದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಮಾತನಾಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಹೊರಡಿಸಿರುವ ಸುಗ್ರೀವಾಜ್ಞೆ ಕೈ ಬಿಡ ಬೇಕೆಂದು ಒತ್ತಾಯಿಸಿದರು. ಹಾಲಪ್ಪ ವರವಿ, ರಮೇಶ ರಾಠೋಡ, ಬಾಷಾಸಾಬ ಮಲ್ಲಸಮುದ್ರ, ಅಯ್ಯಪ್ಪ ಅಂಗಡಿ, ಶರೀಫ್ ಬೆನಕಲ್, ಈಶ್ವರ ಲಕ್ಷೆ್ಮೕಶ್ವರ, ನಾಗರಾಜ ಕ್ಷತ್ರೀಯ, ಗುರುಮೂರ್ತಿ ಹಿರೇಮಠ, ಮೋಹನ ವರವಿ, ವಿಠ್ಠಲ ಬೆಂತೂರ, ಮೇಘರಾಜ ಮೂಲಿಮನಿ, ನವೀನ ಭಂಡಾರಿ, ಕನಕಪ್ಪ ಬಳಗಾನೂರ, ಹನುಮಂತಗೌಡ ಪಾಟೀಲ ಇತರರು ಇದ್ದರು.

    ಕರವೇ ಪ್ರತಿಭಟನೆ: ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ದಾವಲಸಾಬ ಮುಳಗುಂದ, ವೆಂಕಟೇಶ ಬೇಲೂರ, ಶ್ರೀನಿವಾಸ ಭಂಡಾರಿ, ಸಹ ಕಾರ್ಯದರ್ಶಿ, ಸಹದೇವ ಕೋಟಿ, ಇಲಿಯಾಸ್ ಮೀರಾನಾಯಕ, ಸಿದ್ದಪ್ಪ ಮುದ್ಲಾಪೂರ, ಇದ್ದರು.

    ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್​ವಾದ)ಯ ಬಾಲರಾಜ ಅರಬರ, ಕೆಂಚಪ್ಪ ಮ್ಯಾಗೇರಿ, ಮುತ್ತಪ್ಪ ಭಜಂತ್ರಿ, ನಾಗರಾಜ ಗೋಕಾವಿ, ಡಾ. ಮುತ್ತು ಸುರಕೋಡ ಇತರರಿದ್ದರು. ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಸದಸ್ಯರು ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪಿ.ಸುಬ್ರಹ್ಮಣ್ಯಂ ರಡ್ಡಿ, ಶಿವಾನಂದಯ್ಯ ಹಿರೇಮಠ, ಶಿವಕುಮಾರ ರಾಮನಕೊಪ್ಪ, ಯು.ಆರ್.ಭೂಸನೂರಮಠ, ಪ್ರಭಾಕರ ಹೆಬಸೂರ, ಎಂ.ಎಸ್. ಪರ್ವತಗೌಡ್ರ, ಶರಣು ಚವಡಿ, ಜಿ.ವಿ. ಬೊಮ್ಮಪ್ಪನವರ, ನೌಷಾದ್ ಅಲಿ ಸಲವಾತಿ, ಮಲ್ಲಿಕಾರ್ಜುನ ಸಂಕನಗೌಡ್ರ ಇತರರಿದ್ದರು.

    ಲಕ್ಷೆ್ಮೕಶ್ವರದಲ್ಲಿ ಪ್ರತಿಭಟನೆ ಮೆರವಣಿಗೆ

    ಲಕ್ಷ್ಮೇಶ್ವರ: ವಿವಿಧ ಸಂಘಟನೆಗಳು ಬಂದ್​ಗೆ ಬೆಂಬಲ ವ್ಯಕ್ತಪಡಿಸಿ ಉಪತಹಸೀಲ್ದಾರ್ ಕಚೇರಿಯಿಂದ ಹೊಸ ಬಸ್ ನಿಲ್ದಾಣವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ಕೈಗೊಂಡವು.

    ಪಕ್ಷಾತೀತ ರೈತಪರ ಹೋರಾಟ ವೇದಿಕೆ, ಕಾಂಗ್ರೆಸ್ ಪಕ್ಷ, ಕರವೇ ಸಂಘಟನೆಗಳು, ಜಯ ಕರ್ನಾಟಕ, ಟಿಪ್ಪುಸುಲ್ತಾನ್ ಅಭಿಮಾನಿ ಬಳಗ, ಸಂಗೊಳ್ಳಿ ರಾಯಣ್ಣ ಯುವಶಕ್ತಿ ವೇದಿಕೆ, ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ವೇದಿಕೆ, ಹಡಪದ ಅಪ್ಪಣ್ಣ ಸಮಾಜ, ಎಪಿಎಂಸಿ ವರ್ತಕರು ಮತ್ತು ಹಮಾಲರ ಸಂಘ, ಅಂಬೇಡ್ಕರ್ ಸೇನೆ, ವ್ಯಾಪಾರಸ್ಥರ ಸಂಘದವರು ಬೆಂಬಲ ವ್ಯಕ್ತಪಡಿಸಿದರು. ಪಾಳಾ-ಬದಾಮಿ ರಾಜ್ಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ವಿುಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಸರ್ಕಾರ ಯಾರ ಮೆಚ್ಚಿಸಲು ಹೊರಟಿದೆ ಎಂದು ಪ್ರಶ್ನಿಸಿದರು. ತಾಲೂಕಾಡಳಿತ, ಜಿಲ್ಲಾಡಳಿದವರು ರೈತರ, ಕೂಲಿಕಾರ್ವಿುಕರ ಸ್ಥಳೀಯ ಸಮಸ್ಯೆಗಳತ್ತ ಚಿತ್ತ ಹರಿಸಬೇಕು ಎಂದರು.

    ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪದ್ಮರಾಜ ಪಾಟೀಲ, ಕಾಂಗ್ರೆಸ್ ಪಕ್ಷದ ರಾಮಣ್ಣ ಲಮಾಣಿ(ಶಿಗ್ಲಿ), ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಸರ್ಕಾರಕ್ಕೆ ಕಿಂಚಿತ್ತಾದರೂ ರೈತರ ಬಗ್ಗೆ ಕಾಳಜಿ ಇದ್ದರೆ ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ವಿವಿಧ ಸಂಘಟನೆಗಳ ಕಾರ್ಯಕರ್ತರಾದ ಇಸ್ಮಾಯಿಲ್ ಆಡೂರ, ವಿಜಯಕುಮಾರ ಆಲೂರ, ಸುರೇಶ ಹಟ್ಟಿ ಮಾತನಾಡಿದರು. ರೈತರಾದ ಸೋಮಣ್ಣ ಮುಳಗುಂದ, ಶಿವಾನಂದ ಲಿಂಗಶೆಟ್ಟಿ, ಜಾಕೀರ ಹುಸೇನ ಹವಾಲ್ದಾರ, ಚಾಂದಸಾಬ ಸೂರಣಗಿ, ಟಾಕಪ್ಪ ಸಾತಪುತೆ, ಪರಶುರಾಮ ಸಾತಪುತೆ, ಪ್ರವೀಣ ಆಚಾರಿ, ಮಾಂತೇಶ ಗೋಡಿ, ಮುತ್ತು ಕರ್ಜೆಕಣ್ಣವರ, ನವೀನ ಮೆಣಸಿನಕಾಯಿ, ಬಸವರಾಜ ಕರೆತ್ತಿನ, ಸಂತೋಷ ಬಸಾಪುರ, ನಾಗರಾಜ ಕುಂದಗೋಳ, ಶೇಖರಗೌಡ ಪಾಟೀಲ, ಮಹೇಶ ಕಲಘಟಗಿ ಸೇರಿ ಹಲವರಿದ್ದರು.

    ತಹಸೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಮನವಿ ಸ್ವೀಕರಿಸಿದರು. ಸಿಪಿಐ ವಿಕಾಸ್ ಪಿ.ಎಲ್, ಪಿಎಸ್​ಐ ಶಿವಯೋಗಿ ಲೋಹಾರ ಸೂಕ್ತ ನಿಗಾವಹಿಸಿದ್ದರು.

    ವಿದ್ಯುತ್ ಖಾಸಗೀಕರಣ ಕೈಬಿಡಿ

    ಮುಂಡರಗಿ: ವಿವಿಧ ರೈತ ಸಂಘಟನೆಗಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆಶಪ್ಪ ಪೂಜಾರಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿದೆ. ಹೀಗೆ ಮಾಡಿದರೆ ರೈತರು ಕೃಷಿ ಮಾಡುವುದನ್ನೇ ಕೈಬಿಡಬೇಕಾಗುತ್ತದೆ ಎಂದು ದೂರಿದರು. ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ರಾಮಚಂದ್ರ ಕಲಾಲ, ಕೊಟ್ರೇಶ ಅಂಗಡಿ, ಹೇಮಂತಗೌಡ ಪಾಟೀಲ, ಧೃವಕುಮಾರ ಹೊಸಮನಿ, ಡಿ.ಡಿ. ಮೋರನಾಳ, ವಿ.ಎಸ್. ಗಟ್ಟಿ, ಎಸ್.ಡಿ. ಮಕಾಂದಾರ, ಡಾ. ಬಿ.ಎಸ್. ಮೇಟಿ, ರಾಮಣ್ಣ ಇಲ್ಲೂರ, ಬೀರಪ್ಪ ಮಲಾರ್ಜಿ, ನಬಿಸಾಬ್ ಕೆಲೂರ, ಶ್ರೀಕಾಂತಗೌಡ ಪಾಟೀಲ, ಎಚ್.ವಿರೂಪಾಕ್ಷಗೌಡ, ಸುರೇಶ ಹಲವಾಗಲಿ, ಪ್ರಕಾಶ ಸಜ್ಜನರ, ಶಂಕರಗೌಡ ಜಯನಗೌಡ್ರ, ರಾಜಾಬಕ್ಷಿ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ಶಂಭುಲಿಂಗಪ್ಪ ಬೇವೂರ ಪಾಲ್ಗೊಂಡಿದ್ದರು.

    ನಮ್ಮ ಕರವೇ: ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಆಶಪ್ಪ ಪೂಜಾರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಚಂದ್ರು ಪೂಜಾರ, ಅಪೋ›ಜ್ ತಳಗಡೆ, ಅಬುಬಕರ್ ಚೌಥಾಯಿ, ನಿಂಗರಾಜ ಮೇಗಳಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts