More

    ಫೈಬರ್ ದೋಟಿ ಖರೀದಿಗೆ ಬೇಕು ಸಹಾಯಧನ

    ಶೃಂಗೇರಿ: ಎಡೆಬಿಡದೆ ಸುರಿಯುತ್ತಿರುವ ಮಳೆ ಅಡಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಕೊಳೆರೋಗ ತಗುಲಿರುವುದರಿಂದ ತುರ್ತಾಗಿ ಬೋಡೋ ದ್ರಾವಣ ಸಿಂಪಡಿಸಬೇಕಿದ್ದು, ಇದಕ್ಕಾಗಿ ಫೈಬರ್ ದೋಟಿ ಖರೀದಿಗೆ ಸಹಾಯ ಧನ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

    ಜೂನ್ ಮೊದಲ ವಾರದಿಂದ ಬೋಡೋ ದ್ರಾವಣ ಸಿಂಪಡಿಸಲಾಗುತ್ತದೆ. ಈ ಬಾರಿ ಅತಿಯಾಗಿ ಸುರಿದ ಮಳೆಯಿಂದ ಮೊದಲ ಹಂತದಲ್ಲಿ ಸಿಂಪಡಿಸಲು ಸಾಧ್ಯವಾಗಲಿಲ್ಲ. ಇದರಿಂದ ಅಡಕೆ, ಕಾಫಿ ಸಹಿತ ತೋಟಗಾರಿಕೆ ಬೆಳೆಗಳಿಗೆ ಕೊಳೆರೋಗ ಬಾಧಿಸುತ್ತಿದೆ.

    ಮಲೆನಾಡಲ್ಲಿ ಅಡಕೆ ಮರಗಳಿಗೆ ಸಾಮಾನ್ಯವಾಗಿ ಕಾರ್ವಿುಕರನ್ನು ಬಳಸಿ ಬೋಡೋ ಸಿಂಪಡಿಸುತ್ತಾರೆ. ಆದರೆ ಈ ಬಾರಿ ಸ್ಥಿತಿವಂತ ಕೆಲ ಬೆಳೆಗಾರರು ಫೈಬರ್ ದೋಟಿ ಬಳಸಿ ಸಿಂಪಡಿಸುತ್ತಿದ್ದಾರೆ. ಆದರೆ ದೋಟಿ ಕೊಳ್ಳಲು 30-50 ಸಾವಿರ ರೂ. ಬೇಕಿದ್ದು ಸಣ್ಣ ರೈತರಿಗೆ ಸಮಸ್ಯೆಯಾಗಿದೆ.

    ಮಳೆಗಾಲದಲ್ಲಿ ಅಡಕೆ ಮರ ಏರುವುದು ಸುಲಭದ ಮಾತಲ್ಲ. ಮುಂಗಾರು ಆರಂಭದಲ್ಲೇ ಬೋಡೋ ಸಿಂಪಡಣೆ ಮಾಡಬೇಕು. ಆದರೆ ಈ ಸಂದರ್ಭದಲ್ಲಿ ನುರಿತ ಕಾರ್ವಿುಕರು ಸಿಗುವುದು ಕಷ್ಟ. ಫೈಬರ್ ದೋಟಿ ಬಳಸುವುದರಿಂದ ಕಾರ್ವಿುಕರ ಮೇಲಿನ ಅವಲಂಬನೆ ತಪ್ಪಲಿದ್ದು, ಮನೆಯವರೇ ಸಿಂಪಡಿಸಬಹುದು. ಆದರೆ ಫೈಬರ್ ದೋಟಿ ದುಬಾರಿಯಾಗಿರುವುದರಿಂದ ಕಾರ್ವಿುಕರನ್ನೇ ಅವಲಂಬಿಸಬೇಕಿದೆ. ಸಕಾಲಕ್ಕೆ ಔಷಧ ಸಿಂಪಡಣೆ ಸಾಧ್ಯವಾಗದೆ ಫಸಲು ಕೂಡ ಕೈತಪ್ಪುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts