More

    ಫೆ.11ರಿಂದ 13ರವರೆಗೆ ಮೂಡಿಗೆರೆ ಉತ್ಸವ

    ಮೂಡಿಗೆರೆ: ಮೂಡಿಗೆರೆ ಜನತೆಗೆ ಸಾಂಸ್ಕೃತಿಕ ಮನರಂಜನೆ ನೀಡುವ ಉದ್ದೇಶದಿಂದ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಫೆ.11ರಿಂದ 13ರವರೆಗೆ ಮೂಡಿಗೆರೆ ಉತ್ಸವ-2023 ಆಚರಿಸಲು ಶಾಸಕ ಎಂ.ಪಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

    ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು ಮಾತನಾಡಿ, ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆ ಹಾಗೂ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಪಪಂ ಅಧ್ಯಕ್ಷ ಜಿ.ಬಿ.ಧರ್ಮಪಾಲ್ ಗೌರವಾಧ್ಯಕ್ಷತೆಯಲ್ಲಿ ಮೂಡಿಗೆರೆ ಉತ್ಸವ ನಡೆಸಲಾಗುವುದು. ಈ ಕುರಿತು ಎಲ್ಲ ರಾಜಕೀಯ ಪಕ್ಷ ಹಾಗೂ ಸಂಘಟನೆಗಳ ಮುಖಂಡರೊಂದಿಗೆ ಒಂದು ಸಭೆ ನಡೆಸಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

    ಉತ್ಸವದ ಮೂರು ದಿನ ಮೂಡಿಗೆರೆ ಜನತೆಗೆ ಪಟ್ಟಣದ ಬಿಜಿಎಸ್ ಶಾಲೆಯಿಂದ ಸುತ್ತಮುತ್ತಲಿನ ಪ್ರವಾಸಿ ತಾಣ ವೀಕ್ಷಿಸಲು ಹೆಲಿಕಾಪ್ಟರ್ ವ್ಯವಸ್ಥೆ, 4 ದ್ವಾರ ನಿರ್ವಣ, ವಿದ್ಯುತ್ ದೀಪಗಳನ್ನು ಒಳಗೊಂಡಂತೆ ಪಟ್ಟಣ ಅಲಂಕರಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಉತ್ಸವದ ಮೊದಲ ದಿನ ಸಂಜೆ 4 ಗಂಟೆಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, 2ನೇ ದಿನ ಹೊರ ರಾಜ್ಯ ಹಾಗೂ ಜಿಲ್ಲೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, 3ನೇ ದಿನ ಕಾಂತಾರ ಚಿತ್ರದ ಕಲಾವಿದರಿಂದ ಹಾಸ್ಯಮಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ರ್ಚಚಿಸಲಾಯಿತು.

    ಸಭೆಯಲ್ಲಿ ಪಪಂ ಅಧ್ಯಕ್ಷ ಜಿ.ಬಿ.ಧರ್ಮಪಾಲ್, ಸದಸ್ಯರಾದ ಕೆ.ವೆಂಕಟೇಶ್, ಮನೋಜ್, ಸಂದರ್ಶ್, ಪಟೇಲ್ ಮಂಜು, ಚಂದನ್ ಗ್ರೂಪ್ ಮಾಲೀಕ ಮಂಚೇಗೌಡ, ಕಸಾಪ ಅಧ್ಯಕ್ಷ ಶಾಂತಕುಮಾರ್, ಬೆಳೆಗಾರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಉದಯಶಂಕರ್, ವಿವೇಕ್ ಪುಣ್ಯಮೂರ್ತಿ, ಸಂಜು, ಪ್ರಸನ್ನ ಗೌಡಹಳ್ಳಿ, ನಯನ್ ತಳವಾರ, ಪ್ರಸನ್ನಕುಮಾರ್, ಪ್ರದೀಪ್, ಜೈಪಾಲ್, ಬ್ರಿಜೇಶ್, ಪರೀಕ್ಷಿತ್, ಶ್ರೀಕಾಂತ್, ಗಣೇಶ್ ಮಗ್ಗಲಮಕ್ಕಿ, ಕೆ.ಪಿ.ಭಾರತಿ, ಹೆಸಗಲ್ ಗಿರೀಶ್, ಗಾಯಕ ಬಕ್ಕಿ ಮಂಜುನಾಥ್ ಮತ್ತಿತರರಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts