More

    ಫಲಾನುಭವಿ ಪಟ್ಟಿ ನೀಡಿದರೆ ಮನೆ ನಿರ್ವಣಕ್ಕೆ ಯತ್ನ

    ನರಗುಂದ: ಧಾರಾಕಾರ ಮಳೆ ಸುರಿದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿರುವ ತಾಲೂಕಿನ ಬೂದಿಹಾಳ ಗ್ರಾಮಕ್ಕೆ ಗಣಿ, ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.

    ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಬಹುತೇಕ ಮನೆಗಳು ಜಲಾವೃತಗೊಂಡಿವೆ. ಗ್ವಾಸರ ಹಳ್ಳ ಉಕ್ಕಿ ಹರಿದ ಪರಿಣಾಮ ಅಪಾರ ಪ್ರಮಾಣದ ತರಕಾರಿ ಮತ್ತು ವಿವಿಧ ತೋಟಗಾರಿಕೆ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಮನೆಯಲ್ಲಿದ್ದ ಆಹಾರ ಸಾಮಗ್ರಿ, ಬಟ್ಟೆ-ಬರೆಗಳು ನೀರಿನಲ್ಲಿ ಒದ್ದೆಯಾಗಿವೆ. ಇಲ್ಲಿನ ಬಹುತೇಕ ಮನೆಗಳು ಬಿರುಕು ಬಿಟ್ಟಿದ್ದರಿಂದ ಮೇಲ್ಛಾವಣಿಗಳು ಸೋರುತ್ತಿವೆ. ಬೂದಿಹಾಳದಲ್ಲಿ ಇನ್ನೂ 60 ಕುಟುಂಬಗಳಿಗೆ ಮನೆಗಳನ್ನು ನಿರ್ವಿುಸಬೇಕು. ಗ್ರಾಮದ ಯಾರೊಬ್ಬರಿಗೂ ವೈಯಕ್ತಿಕ ಶೌಚಗೃಹ ನಿರ್ವಿುಸಿ ಕೊಟ್ಟಿಲ್ಲ. ಮಲಪ್ರಭಾ ಪ್ರವಾಹದಲ್ಲಾದ ಸಮಸ್ಯೆಗಳು ಮಾಸುವ ಮುನ್ನವೇ ಇದೀಗ ವಿಪರೀತ ಮಳೆಯಾಗಿ ನಮ್ಮ ಬದುಕು ಬೀದಿಗೆ ಬಿದ್ದಿದೆ. ಆದ್ದರಿಂದ ನಮ್ಮ ಗ್ರಾಮದ ಸುತ್ತಲು ತಡೆಗೋಡೆ ನಿರ್ವಿುಸಿಕೊಡಬೇಕು. ಗ್ರಾಮದ ಬಳಿಯಿರುವ ಗ್ವಾಸರ ಹಳ್ಳವನ್ನು ವಿಸ್ತರಿಸುವ ಮೂಲಕ ನಮಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.

    ಸಚಿವ ಸಿ.ಸಿ. ಪಾಟೀಲ ಮಾತನಾಡಿ, ‘ವಿಪರೀತ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಗ್ರಾಮದ ಎಲ್ಲ ಕುಟುಂಬಗಳಿಗೂ ಎಸ್​ಡಿಆರ್​ಎಫ್ ನಿಯಮದ ಪ್ರಕಾರ ತಕ್ಷಣವೇ ತಾತ್ಕಾಲಿಕ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು. ಗ್ರಾಮದ ಸುತ್ತಲೂ ಎರಡ್ಮೂರು ಹಂತಗಳಲ್ಲಿ ತಡೆಗೋಡೆ ನಿರ್ವಿುಸಲಾಗುವುದು. ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಯನ್ನು ಎನ್​ಆರ್​ಇಜಿ ಯೋಜನೆಯಲ್ಲಿ ಕೈಗೊಳ್ಳುವಂತೆ ತಾಪಂ ಇಒ ಅವರಿಗೆ ಸೂಚಿಸಿದರು. 60 ಫಲಾನುಭವಿಗಳಿಗೆ ಬೇಕಾಗಿರುವ ಹೊಸ ಮನೆಗಳ ನಿರ್ವಣಕ್ಕೆ ಗ್ರಾಪಂ ವತಿಯಿಂದ ಪಟ್ಟಿ ನೀಡಿದರೆ ಅವರಿಗೆ ಮನೆ ನಿರ್ವಿುಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಪಂ ಅನುದಾನದಲ್ಲಿ ಎರಡು ಸಾಮೂಹಿಕ ಶೌಚಗೃಹ ನಿರ್ವಿುಸಿಕೊಡುತ್ತೇವೆ. ಇನ್ನುಳಿದ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

    ಈ ವೇಳೆ ತಹಸೀಲ್ದಾರ್ ಎ.ಎಚ್. ಮಹೇಂದ್ರ, ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲ, ನೇತಾಜಿಗೌಡ ಕೆಂಪನಗೌಡ್ರ, ಕೃಷ್ಣಪ್ಪ ಚವ್ಹಾಣ, ಬಾಬು ಹಿರೇಹೋಳಿ, ಹನುಮಂತಗೌಡ ಪಾಟೀಲ, ಪರಪ್ಪ ಯಲಿಗಾರ, ರಾಮಚಂದ್ರಪ್ಪ ಮಾದರ, ಅಶೋಕ ಹಾದಿಮನಿ, ಪುಂಡಲೀಕಪ್ಪ ಹಾದಿಮನಿ, ರಾಮಣ್ಣ ಲಿಂಗಧಾಳ, ದುಂಡಪ್ಪ ಹೊಂಗಲ, ಕೊಣ್ಣೂರ ಗ್ರಾಪಂ ಪಿಡಿಒ ಸಂಕನಗೌಡ್ರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts