More

    ಪ.ಪಂ. ಕಾರ್ಯಾಲಯದೆದುರು ಪ್ರತಿಭಟನೆ



    ಶಿರಹಟ್ಟಿ: ಕಳೆದ 2-3 ವರ್ಷಗಳಿಂದ ನಮ್ಮ ಮನೆ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬ ಮತ್ತು ಪಟ್ಟಣದಲ್ಲಿನ ಹೈಮಾಸ್ಟ್ ದೀಪಗಳ ನಿರ್ವಹಣೆಗೆ ಮುಂದಾಗದಿರುವ ಪಪಂನ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕರವೇ ಸಂಘಟನೆ ಕಾರ್ಯಕರ್ತರು ಪಪಂ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಮಲ್ಲೇಶ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

    ಈ ವೇಳೆ ತಾಲೂಕು ಘಟಕದ ಅಧ್ಯಕ್ಷ ರಫೀಕ್ ಕೆರಿಮನಿ ಮಾತನಾಡಿ, ಗುಡಿಸಲು ನಿವಾಸಿಗಳಿಗೆ ಆಶ್ರಯ ಕಲ್ಪಿಸುವುದಕ್ಕಾಗಿ ಜಾರಿಗೆ ತಂದ ನಮ್ಮ ಮನೆ ಯೋಜನೆಯಡಿ ಕಳೆದ 2-3 ವರ್ಷಗಳಿಂದ ಫಲಾನುಭವಿಗಳ ಆಯ್ಕೆ ನನೆಗುದಿಗೆ ಬಿದ್ದಿದ್ದರಿಂದ ಬಡ ಜನತೆಗೆ ಆಶ್ರಯ ಸಿಗದಾಗಿದೆ. ಇದರಿಂದ ಪಪಂ ಅಧಿಕಾರಿಗಳ ಕಾರ್ಯವೈಖರಿಗೆ ರೋಸಿ ಹೋದ ಬಡ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಶಿರಹಟ್ಟಿ ಪಟ್ಟಣದಲ್ಲಿ ವಾಸಿಸುವ ಬಹುತೇಕ ಕೂಲಿ ಕಾರ್ವಿುಕರು ನಿವೇಶನ ರಹಿತರಾಗಿದ್ದು, ಸರ್ಕಾರ ಅವರ ಶ್ರೇಯೋಭಿವೃದ್ಧಿಗಾಗಿ ಜಾರಿಗೆ ತಂದ ಯೋಜನೆ ಅಧಿಕಾರಿಗಳ ಉದಾಸೀನ ಧೋರಣೆಯಿಂದ ಗಾಳಿಗೆ ತೂರಿದಂತಾಗಿದೆ ಎಂದು ದೂರಿದರು.

    ಅಲ್ಲದೆ, ತಹಸೀಲ್ದಾರ್ ಕಚೇರಿ ಪಕ್ಕದಲ್ಲಿನ ಇಂದಿರಾ ಕ್ಯಾಂಟಿನ್ ಸಿದ್ಧ್ದೊಂಡು ಎರಡು ವರ್ಷ ಕಳೆದರೂ ಇನ್ನೂ ಆರಂಭಿಸುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ತಹಸೀಲ್ದಾರರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಪಟ್ಟಣದ ಮುಖ್ಯ ಸಂಚಾರ ರಸ್ತೆಯಲ್ಲಿ ಅಳವಡಿಸಿದ ಹೈಮಾಸ್ಟ್ ದೀಪಗಳು ಜನತೆಗೆ ಬೆಳಕು ನೀಡದೇ ವರ್ಷ ಗತಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ಸುದ್ದಿ ಪ್ರಕಟಗೊಂಡರೂ ಇನ್ನೂ ಕಾರ್ಯ ರೂಪಕ್ಕೆ ಬಾರದಿರುವುದು ಖಂಡನೀಯ ಎಂದರು.

    ಆದ್ದರಿಂದ 21 ದಿನದೊಳಗೆ ಸೂಕ್ತ ಕ್ರಮಕ್ಕೆ ಮುಂದಾಗಿ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಜಿಲ್ಲಾಧಿಕಾರಿಗಳು ಕಚೇರಿ ಮುಂದೆ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಕರವೇ ನಗರ ಘಟಕ ಅಧ್ಯಕ್ಷ ಮನ್ಸೂರಅಹ್ಮದ್ ಮಕಾನದಾರ, ದೇವಪ್ಪ ಬಟ್ಟೂರ, ಗೌಸುಸಾಬ್ ಕಲಾವಂತ, ಈರಣ್ಣ ಬಾಗೇವಾಡಿ, ಖಾದರಸಾಬ್ ಟಪಾಲ, ಇಲಿಯಾಸ್ ಮೀರಾನವರ, ಸುನೀಲ ಪವಾರ, ಬಸವರಾಜ ಛಬ್ಬಿ, ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ನಾವ್ಹಿ, ಶಾಹೀರಾ ಬಾನು ಒಂಟಿ, ಶೋಭಾ ಬಳಿಗೇರ, ಯೋಗಿತಾ ದೇಸಾಯಿಪಟ್ಟಿ, ರೇಖಾ ಮುಧೋಳಕರ, ವಿಜಯಕ್ಕ ತಳವಾರ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts