More

    ಪ.ಜಾತಿಯವರು ಸಿಎಂ ಆಗದಿರುವುದು ದುರದೃಷ್ಟಕರ : ಶಾಸಕ ಕೆ.ಎಸ್.ಲಿಂಗೇಶ್ ಬೇಸರ

    ಹಾಸನ : ರಾಜ್ಯದಲ್ಲಿ ಕೇವಲ ಶೇ.4ರಷ್ಟು ಇರುವ ಜನಾಂಗದವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಶೇ.25ರಷ್ಟು ಇರುವ ಪರಿಶಿಷ್ಟ ಜಾತಿಯವರು ಇದುವರೆಗೆ ಮುಖ್ಯಮಂತ್ರಿಯಾಗಿಲ್ಲದಿರುವುದು ದುರದೃಷ್ಟಕರ ಎಂದು ಶಾಸಕ ಕೆ.ಎಸ್.ಲಿಂಗೇಶ್ ಬೇಸರ ವ್ಯಕ್ತ ಪಡಿಸಿದರು.

    ಬೇಲೂರು ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


    ರಾಜ್ಯ ಮತ್ತು ದೇಶವನ್ನು ಅತಿ ಹೆಚ್ಚಾಗಿ ಅಳಿದ ಪಕ್ಷ ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಗರಿಬ್ ಬೀ ಹಠಾವೋ ಎಂದು ನಾಟಕವಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಹುನ್ನಾರ ನಡೆಸಿ ಸೋಲಿಸಿದ ಪಕ್ಷ ಇಂದು ಅವರ ಪೋಟೋ ಇಟ್ಟಿಕೊಂಡು ಅವರ ಹೆಸರಿನಲ್ಲಿ ಮತಕೇಳುತ್ತಿದೆ ಎಂದು ವ್ಯಗ್ಯವಾಡಿದರು.


    ಎಲ್ಲಾ ಜಾತಿ, ಧರ್ಮಗಳು ಸಮಾಜದ ಒಳಿತನ್ನೇ ಬಯಸುತ್ತವೆ ಆದರೆ ಧರ್ಮವನ್ನು ಅನುಸರಿಸುವ ನಾವು ನಮ್ಮದೇ ಶ್ರೇಷ್ಠ, ನಮ್ಮದೇ ಶ್ರಷ್ಠ ಎನ್ನುವ ಮನೋಭಾವನೆಯನ್ನು ಬಿಟ್ಟು ಬಾಳಬೇಕು. ನಾವುಗಳು ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದರೆ ಸಾಲದು, ಅವರ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಸಹ ಮೇಲಕ್ಕೆತ್ತುವ ಕೆಲಸವನ್ನು ಅಂಬೇಡ್ಕರ್ ಅವರು ಮಾಡಿದ್ದು, ಅತ್ಯುತ್ತಮವಾದ ಸಂವಿಧಾನವನ್ನು ನಮಗೆ ನೀಡಿದ್ದಾರೆ ಇದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಎಂದರು.


    ಎಚ್.ಡಿ.ದೇವೇಗೌಡರು ಜಾರಿಗೆ ತಂದ ಮಿಸಲಾತಿಯಿಂದ ಸಾಕಷ್ಟು ಜನ ಉಯೋಗ ಪಡೆದುಕೊಂಡಿದ್ದಾರೆ ಆದರೆ ಯಾರು ಸಹ ಅವರ ಹೆಸರು ಹೇಳದಿರುವುದು ವಿಪರ್ಯಾಸದ ಸಂಗತಿ. ಮದಘಟ್ಟದಲ್ಲಿ ನಿರ್ಮಾಣವಾಗುತ್ತಿರುವ ಗಾಂಧಾರ ಬುದ್ಧ ವಿಹಾರ ಸೇರಿದಂತೆ, ಅಂಬೇಡ್ಕರ್ ಸಮುದಾಯ ಭವನ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಸಾಕಷ್ಟು ಅನುದಾನ ನೀಡಿದ್ದು, ಇದುವರೆವಿಗೂ ಕ್ಷೇತ್ರದಲ್ಲಿ ಯಾವ ಶಾಸಕರೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮಾಡದ ಉತ್ತಮ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದರು.

    ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕನಾಥ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಜಿ.ಶಿವಮರಿಯಪ್ಪ, ಪ್ರಧಾನಕಾರ್ಯದರ್ಶಿ ಸಣ್ಣಸ್ವಾಮಿ, ಪುರಸಭಾ ಅಧ್ಯಕ್ಷ ಸಿ.ಎನ್.ದಾನಿ, ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್, ಎ.ಎಸ್.ಐ.ವಿರೂಪಾಕ್ಷ, ಉಪನ್ಯಾಸಕ ಲಕ್ಷ್ಮೀನಾರಾಯಣ್, ಶಿಕ್ಷಕ ಸಂಪತ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts