More

    ಪ್ರೋತ್ಸಾಹ ಧನ ನೀಡಲು ಆಗ್ರಹ

    ಕಲಘಟಗಿ: ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ, ಮಾಸಿಕ ಗೌರವಧನ ಸೇರಿಸಿ ಪ್ರತಿ ತಿಂಗಳು 12 ಸಾವಿರ ರೂ. ನೀಡಬೇಕು ಎಂದು ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಶಾಸಕ ಸಿ.ಎಂ. ನಿಂಬಣ್ಣವರ, ತಹಸೀಲ್ದಾರ್ ಅಶೋಕ ಶಿಗ್ಗಾವಿ ಅವರಿಗೆ ಪ್ರತ್ಯೇಕವಾಗಿ ಮಂಗಳವಾರ ಸಲ್ಲಿಸಿದರು. ಆಶಾ ಕಾರ್ಯಕರ್ತೆಯರಾದ ಶೋಭಾ ಹಿರೇಮಠ, ಸುಶೀಲಾ ಮುಗಳಿ, ಶೋಭಾ ಯಾದವ, ಮೋನಿಕಾ ಅಂಗಡಿ, ಯಲ್ಲಮ್ಮ ಬೂಸಲೆ, ಶಾರದಾ ತಾವರಗೇರಿ, ಗೌರವ್ವ ಮೇಟಿ, ಅಕ್ಕಮಹಾದೇವಿ ಬಡಿಗೇರ, ದೀಪಾ ಹುಂದ್ರೆ, ಪ್ರೇಮಾ ಲಮಾಣಿ, ಮಂಜುಳಾ ಮೊರಬ, ಗೀತಾ ಕಮ್ಮಾರ, ಇತರರಿದ್ದರು.

    ಕುಂದಗೋಳದಲ್ಲಿ ಆಶಾ ಕಾರ್ಯಕರ್ತೆಯರು ತಹಸೀಲ್ದಾರ್ ಬಸವರಾಜ ಮೆಳವಂಕಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಮಂಜುಳಾ ಗಾಡಗೋಳಿ, ಗಿರಿಜಾ ಹೊಸಮನಿ, ಗೀತಾ ಮಲ್ಲನಗೌಡ್ರ, ಮುತ್ತವ್ವ ತಿರಕನಗೌಡ್ರ, ದಾವಲಬಿ ಗೈಬುನವರ, ಶಕುಂತಲಾ ಹಸಬಿ, ರೇಖಾ ಖಾಳೆಯವರ, ರಾಜೇಶ್ವರಿ ಕೋರಿ, ರತ್ನಾ ಕುಂಬಾರ, ಲಲಿತಾ ಸಾಳುಂಕೆ, ಇತರರಿದ್ದರು.

    ಧಾರವಾಡದಲ್ಲಿ ಎಐಯುಟಿಯುಸಿ ಕೇಂದ್ರ ಕಾರ್ವಿುಕ ಸಂಘಟನೆಯ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಶಾಂತಾ ಚೌವ್ಹಾಣ, ಪ್ರೇಮಾ ಕಬ್ಬೂರ, ಸ್ವಪ್ನಾ ಸುಳ್ಳದ, ಅರುಣಾ ಕಂಪ್ಲಿ, ಪ್ರೇಮಾ ದೀವಿಟಗಿ, ಅರ್ಚನಾ ಕಾರಡೆ, ಮಂಜುಳಾ ಕೋಮಸುಂದರ್, ಮಂಜುಳಾ ಸಾವಂತ್, ಶೋಭಾ ಬಜಂತ್ರಿ, ಸಂಗೀತಾ ಬೆಂಡಿಗೇರಿ, ಇಂದಿರಾ ಪಾಟೀಲ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts