More

    ಪ್ರೋತ್ಸಾಹಧನ ಹೆಚ್ಚಳಕ್ಕೆ ಕ್ರಮ

    ಕಾರವಾರ: ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಹೆಚ್ಚಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ರ್ಚಚಿಸಲಾಗುವುದು ಎಂದು ಶಾಸಕಿ ರೂಪಾಲಿ ನಾಯ್ಕ ಭರವಸೆ ನೀಡಿದರು.

    ರಾಜ್ಯ ಸರ್ಕಾರದಿಂದ ನೀಡಲಾದ ಆಹಾರ ಧಾನ್ಯ ಕಿಟ್​ಗಳನ್ನು ತಾಲೂಕಿನ ವಿವಿಧ ಭಾಗಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಸೋಮವಾರ ವಿತರಿಸಿ ಅವರು ಮಾತನಾಡಿದರು.

    ಕರೊನಾದಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಹಳ್ಳಿ ಹಳ್ಳಿಗೆ ಹೋಗಿ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ನಾಗರಿಕರ ಆರೋಗ್ಯ ರಕ್ಷಣೆಯಲ್ಲಿ ಮೊದಲಿಗರಾಗಿದ್ದಾರೆ. ಇವರ ಮುಂಜಾಗ್ರತೆ ಕಾರ್ಯಗಳಿಂದಲೇ ಜನರು ಇಂದು ಸುರಕ್ಷಿತವಾಗಿದ್ದಾರೆ ಎಂದರು.

    ತಾಲೂಕಿನ ಚೆಂಡಿಯಾ, ಅರಗಾ, ತೋಡುರು, ಅಮದಳ್ಳಿ, ಕಡವಾಡ, ಶಿರವಾಡ, ಹಳೇಕೋಟ, ಕಿನ್ನರ, ಸಿದ್ದರ ವೈಲವಾಡ ಭಾಗದ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್​ನ್ನು ವಿತರಿಸಲಾಯಿತು.

    ತಹಸಿಲ್ದಾರ ಆರ್.ವಿ.ಕಟ್ಟಿ, ಚೆಂಡಿಯಾ ಗ್ರಾಪಂ ಅಧ್ಯಕ್ಷೆ ಗೀತಾ ಗುನಗಿ, ಪ್ರಮುಖರಾದ ಸುಜಾತಾ ಬಾಂದೇಕರ್, ಸುಭಾಷ ಗುನಗಿ, ಸೀತಾರಾಮ ಗಾಂವಕರ, ಪ್ರೇಮಾನಂದ ಗಾಂವಕರ, ಮಧುಕರ ನಾಯ್ಕ, ಕಡವಾಡ ಗ್ರಾಪಂ ಅಧ್ಯಕ್ಷ ಸುಧೀರ ಸಾಳಸ್ಕರ್, ಗಜಾನನ ಕಲ್ಗುಟಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts