More

    ಪ್ರೀತಿ,ವಾತ್ಸಲ್ಯದಿಂದ ಸಂಸಾರದ ಹಾದಿ ಸುಗಮ

    ಚಿತ್ರದುರ್ಗ: ಆಧುನಿಕತೆ ಭರಾಟೆಯಲ್ಲಿ ಶ್ರೀಮಂತಿಕೆಯ ಬದುಕು ಸಾಗಿಸಬೇಕೆಂಬ ಹಪಾಹಪಿ ಎಲ್ಲರಲ್ಲೂ ಹೆಚ್ಚಾಗಿದೆ ಎಂದು ಶ್ರೀಬಸವಪ್ರಭು ಸ್ವಾ ಮೀಜಿ ಆತಂಕ ವ್ಯಕ್ತಪಡಿಸಿದರು. ನಗರದ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಗುರುವಾರ ನಡೆದ 33ನೇ ವರ್ಷದ 10ನೇ ತಿಂಗಳ ಸಾ ಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಆರ್ಶೀವಚನ ನೀಡಿದ ಅವರು,ಸಿರಿವಂತಿಕೆ ಜೀವನದ ಆಸೆ ಸಂಬಂಧಗಳಿಗೆ ಪೆಟ್ಟು ನೀಡುತ್ತದೆ ಎಂ ದು ಎಚ್ಚರಿಸಿದರು.
    ಹೆಂಡತಿ ಸೇವಕಿ ಎಂಬ ಮನೋಭಾವ ಪತಿಯಲ್ಲಿ ಇರಬಾರದು.ಪ್ರತಿಷ್ಠೆ ಸಂಸಾರವನ್ನು ಹಾಳುಗೆಡುವುತ್ತದೆ. ದ್ವೇಷದ ಜಾಗದಲ್ಲಿ ಪ್ರೀತಿ ಅರಳಬೇಕು. ಕುಟುಂಬದಲ್ಲಿ ಪ್ರೀತಿ,ವಾತ್ಸಲ್ಯವಿದ್ದರೆ ಸಂಸಾರದ ಹಾದಿ ಸುಗಮವಾಗಿ ಸಾಗಲಿದೆ ಎಂದರು.
    ಶ್ರೀ ಬಸವಪ್ರಸಾದ ಸ್ವಾಮೀಜಿ ಮಾತನಾಡಿ,ಐತಿಹಾಸಿಕ ನಗರ ದುರ್ಗದ ಶ್ರೀಮಠಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಇದೆ. ಇದೊಂದು ತಾಯಿ ಹೃದಯದ ನೆಲೆ. ನೂರಾರು ಸಾಧಕರ ನೆಲೆವೀಡು.ಇಲ್ಲಿಯ ಸಾಮೂಹಿಕ ಕಲ್ಯಾಣ ಮಹೋತ್ಸವ ವಿಶ್ವ ದಾಖಲೆಯಾಗಿದೆ. ಶ್ರೀ ಮಠಕ್ಕೆ ಎದುರಾಗಿರುವ ಸಂಕಷ್ಟ ಬೇಗ ನಿವಾರಣೆಯಾಗಲಿ ಎಂದರು.
    ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ ಮಾತನಾಡಿ,ಗೃಹಸ್ಥಾಶ್ರಮ ಪವಿತ್ರವಾದುದು. ಯುವಪೀಳಿಗೆ ದುಶ್ಚಟಗಳಿಗೆ ದಾಸರಾಗದೆ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡ ಬೇಕೆಂದರು. ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ,ಶ್ರೀಬಸವ ಮಲ್ಲಿಕಾರ್ಜುನ ಸ್ವಾಮೀಜಿ,ಶ್ರೀ ಬಸವಮುರುಘೇಂದ್ರ ಸ್ವಾಮೀಜಿ,ಶ್ರೀಗೋವಿಂದ ಸ್ವಾಮೀಜಿ,ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು. ಎರಡು ಜೋಡಿಗಳ ವಿವಾಹ ನೆರವೇರಿತು. ತೋಟಪ್ಪ ಉತ್ತಂಗಿ ಸಂಗಡಿಗರು ಪ್ರಾರ್ಥಿಸಿದರು.ಟಿ.ಪಿ.ಜ್ಞಾನಮೂರ್ತಿ ಸ್ವಾಗತಿಸಿದರು. ಪ್ರಕಾಶ ದೇವರು ನಿರೂ ಪಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts