More

    ಪ್ರಿಯಾಂಕ್ ಖರ್ಗೆ ಬಲಗೈ ಬಂಟ ರಾಜು ಕಪನೂರ್ ಅರೆಸ್ಟ್

    ಕಲಬುರಗಿ: ಶಾಸಕ ಪ್ರಿಯಾಂಕ್​ ಖರ್ಗೆ ಬಲಗೈ ಬಂಟ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರನನ್ನು ಯಡ್ರಾಮಿ ಪೊಲೀಸರು ಕಂಟ್ರಿಮೇಡ್​ ಪಿಸ್ತೂಲ್​ ಖರೀದಿ ಆರೋಪದ ಮೇಲೆ ಶನಿವಾರ ಬಂಧನ ಮಾಡಿದರು. ಯಡ್ರಾಮಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಗುರಲಿಂಗಪ್ಪ ಎಂಬಾತನಿಂದ ರಾಜು ಕಪನೂರ ಸೆಪ್ಟೆಂಬರ್​ನಲ್ಲಿ ಎರಡು ಕಂಟ್ರಿಮೇಡ್​ ಪಿಸ್ತೂಲ್​ ಮತ್ತು 30 ಗುಂಡು ಖರೀದಿ ಮಾಡಿದ್ದ ಎನ್ನಲಾಗಿದೆ. ಈ ಕುರಿತು ಗುರುಲಿಂಗಪ್ಪ ಪೊಲೀಸರ ಮುಂದೆ ನೀಡಿದ್ದ ವಿಡಿಯೋ ಹೇಳಿಕೆಯಲ್ಲಿ ಕಪನೂರ್​ ಹೆಸರು ಉಲ್ಲೇಖಿಸಿದ್ದ. ಇದರಿಂದ ಪೊಲೀಸರು ಕಪನೂರ್​ಗೆ ಎರಡು ಬಾರಿ ನೋಟಿಸ್​ ನೀಡಿದ್ದರು. ಆದರೆ ನೋಟಿಸ್​ ಕ್ಯಾರೇ ಎನ್ನದ ರಾಜು ಕಪನೂರ್​ನನ್ನು ಪೊಲೀಸರು ಬಂಧಿಸಿದ್ದಾರೆ.

    ನನ್ನನ್ನು ಕೊಲೆ ಮಾಡಲು ರಾಜು ಕಪನೂರ ಗನ್​ ಖರೀದಿ ಮಾಡಿದ್ದ ಎಂದು ಶುಕ್ರವಾರ ಬಿಜೆಪಿ ಮುಖಂಡ, ಉದ್ಯಮಿ ಮಣಿಕಂಠ ರಾಠೋಡ್​ ಸುದ್ದಿಗೋಷ್ಠಿಯಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದ. ಇದೀಗ ವಿಡಿಯೋ ರಿಲೀಸ್​ ಆದ ಬಳಿಕ ಕಪನೂರ ಅರೆಸ್ಟ್​ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts