More

    ಪ್ರಾದೇಶಿಕ ಅಭಿವೃದ್ಧಿ ಗುರಿ ಬಿಜೆಪಿ ಹೊಂದಿದೆ

    ಬಾಗಲಕೋಟೆ; ಪ್ರಗತಿಯ ಜತೆಜತೆಗೆ ಪ್ರಾದೇಶಿಕ ಅಭಿವೃದ್ಧಿಯ ಗುರಿ ಬಿಜೆಪಿ ಹೋದಿರುವುದರಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಸರಕಾರದ ಸೌಲಭ್ಯಗಳು ಜನರಿಗೆ ದೊರೆತಿರುವೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

    ಅವರು ಲೋಕಸಭಾ ಚುನಾವಣಾ ಪ್ರಚಾರ ನಿಮಿತ್ಯ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಿಂದ ಮುಚಖಂಡಿಯಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಕಳೆದ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಕೇಂದ್ರ ನೀಡುವ ಅನುದಾನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ, 2004 ರಿಂದ 2014ರ ವರೆಗಿನ ಕಾಂಗ್ರೆಸ್ಸ ಅವಧಿಗೆ ಹೋಲಿಸಿದರೆ 2014 ರಿಂದ 2024 ವರೆಗಿನ ಅವಧಿಯಲ್ಲಿ ಕರ್ನಾಟಕ ವಿಕೇಂದ್ರೀಕರಣದಲ್ಲಿ ಶೇ.273ರಷ್ಟು ಏರಿಕೆಯಾಗಿದೆ. ತೆರಿಗೆ ವಿಕೇಂದ್ರೀಕರಣ ಹೊರತುಪಡಿಸಿ ರಾಜ್ಯಕ್ಕೆ ನೀಡಲಾದ ಅನುದಾನ ಹಂಚಿಕೆಯಲ್ಲಿ 244% ಹೆಚ್ಚಿಗೆಯಾಗಿದೆ, ಅಂದರೆ ಕರ್ನಾಟಕಕ್ಕೆ ಕಾಂಗ್ರೆಸ್‌ಗಿಂತ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ಖಾತರಿಪಡಿಸಿದೆ, ಜನರಿಗೆ ಕಾಂಗ್ರೆಸ್ಸ ಬರಿ ಸುಳ್ಳುಗಳನ್ನು ಹೇಳುತ್ತಾ ಬಂದಿದೆ, ರಾಜ್ಯ ಹಾಗೂ ಜಿಲ್ಲೆಯ ಜನರಿಗೆ ಮೋದಿ ಮಾಡಿರುವ ಕೆಲಸಗಳ ಬಗ್ಗೆ ಜ್ಞಾನವಿದೆ, ಮುಚಖಂಡಿ ಗ್ರಾಮಕ್ಕೆ ಬಿಜೆಪಿ ಸರಕಾರದಲ್ಲಿ ಸಾಕಷ್ಟು ಕೆಲಸಗಳು ಆಗಿವೆ, ಬುಡಾ ಮತ್ತು ನರೆಗಾದಿಂದ ಐತಿಹಾಸಿಕ ಮುಚಖಂಡಿ ಕೆರೆ ಹೂಳುತ್ತೆವುದು, ನವೀಕರಣ ಮತ್ತು ಸುಂದರ ಉದ್ಯಾನವನ ನಿರ್ಮಾಣ ಮಾಡಲು ೧೦ ಕೋಟಿ ರೂ ಅಂದಿನ ಬಿಜೆಪಿ ಸರಕಾರ ಬಿಡುಗಡೆ ಮಾಡಿದ್ದು ಈಗಲೂ ಕೆಲಸ ನಡೆದಿರುವವುದೆ ಸಾಕ್ಷಿಯಾಗಿದೆ, ಇದು ದೇಶದ ಚುನಾವಣೆಯಾಗಿದ್ದರಿಂದ ದೇಶದ ಹಿತಕ್ಕಾಗಿ ಮತದಾನ ಮಾಡಿ, ದೇಶದ ಹಿತ ಬಿಜೆಪಿ ಕೈಯಲ್ಲಿದೆ ಎಲ್ಲರೂ ಬಿಜೆಗೆ ಮತ ನೀಡಿ ಎಂದು ವಿನಂತಿಸಿದರು.

    ಸಭೆಯಲ್ಲಿ ಮುಚಖಂಡಿ ಮುಖಂಡರಾದ ಗುರುಬಸವ ಸೂಳಿಬಾವಿ, ಪ್ರಭುಸ್ವಾಮಿ ಸರಗಣಾಚಾರಿ, ಸಂಗಣ್ಣ ಹಡಗಲಿ, ಮಹೇಶ ಅಂಗಡಿ, ಕುಮಾರ ಯಳ್ಳಿಗುತ್ತಿ, ಸುರೇಶ ಕೋಣ್ಣುರ, ಈರಪ್ಪ ಬಲಮಿ, ಪರಶುರಾಮ ಛೆಬ್ಬಿ, ಯಲ್ಲಪ್ಪ ಸೀಮಿಕೇರಿ, ದರಿಯಪ್ಪ ಮುರನಾಳ, ಈರಪ್ಪ ಬಿಳಗಿ, ರುದ್ರÀಪ್ಪ ಕಮ್ಮಾರ ಸೇರಿದಂತೆ ಅನೇಕರು ಇದ್ದರು.
    ಮುಚಖಂಡಿ, ಮುಚಖಂಡಿ ಎಲ್.ಟಿ.1 ಮತ್ತು 2 ರಲ್ಲಿ ಹಾಗೂ ಕದಾಂಪುರ ಆರ್.ಸಿ, ಶಿರಗುಂಪಿ ಪು.ಕೇ, ಶಿಗಿಕೇರಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts