More

    ಪ್ರಶಸ್ತಿ ಮುಡಿಗೇರಿಸಿಕೊಂಡ ಎಂವೈಸಿ ತಂಡ

    ವಿರಾಜಪೇಟೆ: ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಲೆಜೆಂಡ್ಸ್ ಕಪ್-2 ಕ್ರಿಕೆಟ್ ಲೀಗ್‌ನಲ್ಲಿ ಎಂ.ವೈ.ಸಿ ತಂಡವು ರೈಸಿಂಗ್ ಸ್ಟಾರ್ಸ್‌ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

    ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಎಂ.ವೈ.ಸಿ ತಂಡ 8 ರನ್‌ಗಳಿಂದ ರೈಸಿಂಗ್ ಸ್ಟಾರ್ಸ್‌ ತಂಡವನ್ನು ಮಣಿಸಿತು. ಟಾಸ್ ಗೆದ್ದ ರೈಸಿಂಗ್ ಸ್ಟಾರ್ಸ್‌ ತಂಡ ಎಂ.ವೈ.ಸಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಎಂ.ವೈ.ಸಿ ತಂಡ ನಿಗದಿತ 6 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರೈಸಿಂಗ್ ಸ್ಟಾರ್ಸ್‌ ತಂಡ ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 31 ರನ್ ಗಳಿಸಲಷ್ಟೆ ಶಕ್ತವಾಯಿತು.

    ಎಂ.ವೈ.ಸಿ ತಂಡದ ಪರ ಆತೀಫ್ ಮನ್ನಾ 12 ಹಾಗೂ ಹೇಮಂತ್ 10 ರನ್ ಗಳಿಸಿದರೆ, ರೈಸಿಂಗ್ ಸ್ಟಾರ್ಸ್‌ ತಂಡದ ಪರ ಲೋಕೇಶ್ 14 ರನ್ ಗಳಿಸಿದರು. ಎಂ.ವೈ.ಸಿ ತಂಡದ ಪರ ಅತೀಫ್ ಮನ್ನಾ 3 ಹಾಗೂ ವಿ.ಡಿ.ರವಿ 1 ಮತ್ತು ರೈಶಿಂಗ್ ಸ್ಟಾರ್ಸ್‌ ತಂಡದ ಪರ ಜಯಂತ್ ರೈ ಮತ್ತು ಆನಂದ್ ತಲಾ 2 ವಿಕೆಟ್ ಗಳಿಸಿದರು.

    ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಯಿತು. 3 ನೇ ಸ್ಥಾನ ಪಡೆದ ಕಲ್ಲುಸ್ಟಾರ್ಟ್‌ ಮತ್ತು 4 ನೇ ಸ್ಥಾನ ಪಡೆದ ಷಾ ಕ್ರಿಕೆಟರ್ಸ್‌ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಯಿತು.
    ಎಂ.ವೈ.ಸಿ ತಂಡದ ಹೇಮಂತ್ ಸರಣಿ ಶ್ರೇಷ್ಠ ಪ್ರಶಸ್ತಿ, ಸುದೇಶ್ ಉತ್ತಮ ಬ್ಯಾಟ್ಸ್‌ಮನ್, ಆತೀಫ್ ಮನ್ನಾ ಉತ್ತಮ ಬೌಲರ್ ಹಾಗೂ ಅಂತಿಮ ಪಂದ್ಯ ಪುರುಷೋತ್ತಮ, ಶಶಿ ಕುಮಾರ್ ಉತ್ತಮ ಕ್ಯಾಚ್, ತ್ರಿ ಸ್ಟಾರ್ ಆರ್.ಎಸ್.ಎಲ್ ತಂಡದ ಕಿರಣ್ ಉತ್ತಮ ವಿಕೇಟ್ ಕೀಪರ್, ಕಲ್ಲು ಸ್ಟಾರ್ಸ್‌ ತಂಡ ಶರ‌್ಫುದ್ದೀನ್ ಉತ್ತಮ ನಾಯಕ ಪ್ರಶಸ್ತಿಯನ್ನು ಪಡೆದುಕೊಂಡರು.

    ಡಾಕ್ಟರೇಟ್ ಪದವಿ ಪಡೆದ ಹೇಮಂತ್ ಹಾಗೂ ಸಮಾಜ ಸೇವಕ ನಾಸರ್ ಅವರನ್ನು ಆಯೋಜಕರು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿದರು. ಸಮಾರೋಪ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಮಾದಂಡ ತಮ್ಮಯ್ಯ, ಹಿರಿಯ ಆಟಗಾರ ಅಲ್ತಾಫ್, ರಾಜೇಶ್, ಕಿರಣ್, ಚಾಮಿ ಗ್ರೂಪ್ಸ್‌ನ ಸುರೇಶ್, ಸಮಾಜ ಸೇವಕ ನಾಸರ್ ಮತ್ತಿತರರು ವಿಜೇತರಿಗೆ ಬಹುಮಾನ ವಿತರಿಸಿದರು.

    ಲೀಗ್ ಮಾದರಿಯ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು, ಎಂ.ವೈ.ಸಿ, ರೈಸಿಂಗ್ ಸ್ಟಾರ್ಸ್‌, ಕಲ್ಲು ಸ್ಟಾರ್ಸ್‌ ಹಾಗೂ ಷಾ ಕ್ರಿಕೆಟರ್ಸ್‌ ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದವು. ಇನ್ನುಳಿದಂತೆ ಟ್ರ್ಯಾಕ್ ಫೋರ್ಸ್‌, ಲೆಜೇಂಡ್ಸ್ ಆಫ್ ಅಭಿಮನ್ಯು, ಬೂಮ್ 11, ಕ್ರೌನ್ಸ್, ಸಿ.ಡಿಸ್ ಗ್ರೂಪ್, ಆರ್.ಇ.ಎಫ್ ತಯ್ಯಬ್, 3 ಸ್ಟಾರ್ಸ್‌ ಆರ್.ಎಸ್.ಎಲ್ ಹಾಗೂ ಸಿಟಿ ಸ್ಟಾರ್ ತಂಡಗಳು ಭಾಗವಹಿಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts