More

    ಪ್ರಶಸ್ತಿಯಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಳ

    ಕಾರವಾರ/ಶಿರಸಿ: ಉತ್ತರ ಕನ್ನಡ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ದಿನ ಆಚರಣೆ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಜರುಗಿತು.

    ಕಾರವಾರದ ಹಿಂದು ಹೈಸ್ಕೂಲ್ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ. ಉನ್ನತ ಸ್ಥಾನಕ್ಕೇರಿದಂತೆ, ಪ್ರಶಸ್ತಿಗಳನ್ನು ಪಡೆದಂತೆ ನಮ್ಮ ಪ್ರತಿ ಹೆಜ್ಜೆಯನ್ನೂ, ವರ್ತನೆಯನ್ನೂ ಜನ ಗಮನಿಸುತ್ತಾರೆ ಎಂದರು.

    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಅಧ್ಯಕ್ಷತೆ ವಹಿಸಿದ್ದರು. ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಡಿಡಿಪಿಐ ಹರೀಶ ಗಾಂವಕರ್, ತಹಸೀಲ್ದಾರ್ ಆರ್.ವಿ.ಕಟ್ಟಿ, ತಾಪಂ ಇಒ ಆನಂದಕುಮಾರ ಬಿಇಒ ಶಾಂತೇಶ ನಾಯಕ ವೇದಿಕೆಯ ಮೇಲಿದ್ದರು.

    ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ 15 ಶಿಕ್ಷಕರನ್ನು ಹಾಗೂ ನಿವೃತ್ತಿ ಹೊಂದಿದ 23 ಶಿಕ್ಷಕರನ್ನು ಸನ್ಮಾನಿಸಲಾಯಿತು.

    ಶಿರಸಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷರು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಿದರು. ನಾಗರತ್ನ ಭಟ್ಟ, ಅಂಜನಾ ಭಟ್ಟ, ವೆಂಕಟ್ರಮಣ ಹೆಗಡೆ, ಅನ್ನಪೂರ್ಣ ನಾಯಕ, ಎಂ.ಎಸ್.ಮಾದರ, ಬೊಮ್ಮ ಗಾಂವಕರ್, ಪ್ರಸಾದ ಹೆಗಡೆ, ಪುರುಷೋತ್ತಮ ನಾಯ್ಕ, ರಾಮಚಂದ್ರ ನಾಯ್ಕ, ದ್ಯಾಮಪ್ಪ ಲಮಾಣಿ, ವೈಲೆಟ್ ಕರ್ನಲ್, ಯಶವಂತ ದೇಸಾಯಿ, ಗಣೇಶ ಬಂಟ, ಪುಟ್ಟಪ್ಪ ವಾಲ್ಮೀಕಿ, ನಾರಾಯಣ ಭಟ್ಟ, ದಿನೇಶ ಹೆಗಡೆ, ಜಗದೀಶ ಹುಲ್ಲೂರು, ಪಾಂಡುರಂಗ ಟಕ್ಕೋಜಿ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಯಿತು. ಅಲ್ಲದೆ, 25ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.

    ಡಿಡಿಪಿಐ ದಿವಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜ ದೊಡ್ಮನಿ, ಪ್ರಭಾವತಿ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ, ಡಯಟ್ ಪ್ರಾಚಾರ್ಯ ಬಿ.ವಿ.ನಾಯಕ, ಶ್ರೀಕೃಷ್ಣ ಕಾಮಕರ, ನಾರಾಯಣ ನಾಯ್ಕ, ಗಿರೀಶ ನಾಯ್ಕ, ನಾರಾಯಣ ದಾಯಿಮನೆ, ಅಶೋಕ ಭಜಂತ್ರಿ, ನಾರಾಯಣ ನಾಯ್ಕ, ಪ್ರಶಾಂತ ಹೆಗಡೆ ಹಾಗೂ ಇತರರು ಇದ್ದರು. ಶಿಕ್ಷಕ ನಾರಾಯಣ ಭಾಗವತ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts