More

    ಪ್ರವಾಹ ಎದುರಿಸಲು ತಾಲೂಕಾಡಳಿತ ಸಿದ್ಧ

    ಸವದತ್ತಿ: ಸಂಭವನೀಯ ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ತಾಲೂಕಾಡಳಿತ ಸಕಲ ಸಿದ್ಧತೆ ನಡೆಸುತ್ತಿದೆ. ಚಿಕ್ಕ ಮಕ್ಕಳ ಹೆಚ್ಚುವರಿ ತಜ್ಞರ ಸೇವೆ ಬಯಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಾಗಾಗಿ, ಹೆಚ್ಚಿನ ವೈದ್ಯರು ಸೇವೆಗೆ ಲಭ್ಯವಾಗಲಿದ್ದಾರೆ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

    ಸ್ಥಳೀಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಪ್ರವಾಹ ಮತ್ತು ಅತಿವೃಷ್ಟಿ ಕುರಿತು ಏರ್ಪಡಿಸಿದ್ಧ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, 3ನೇ ಅಲೆ ಭೀತಿ ಇರುವುದರಿಂದ ಜನರು ನಿಯಮ ಪಾಲಿಸಬೇಕು. ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು, ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜ ಕೊರತೆಯಾಗದಂತೆ ನಿಗಾವಹಿಸಿ ಎಂದು ತಾಪಂ ಎಡಿ ಕೆ.ಎನ್. ಮಹಾರೆಡ್ಡಿ ಅವರಿಗೆ ಸೂಚಿಸಿದರು.

    ಅಭಿಯಂತ ವಿ.ಕೆ. ಮುದಿಗೌಡರ ಮಾತನಾಡಿ, ಮಲಪ್ರಭಾ ಜಲಾಶಯದಲ್ಲಿ 10.26 ಟಿಎಂಸಿ ನೀರು ಸಂಗ್ರಹವಿದೆ ಎಂದರು.ಕಳೆದ ಬಾರಿ ಪ್ರವಾಹ ಮಿತಿ ಮೀರಿತ್ತು. ಆದಾಗ್ಯೂ ಸಿದ್ಧತೆಯಲ್ಲಿ ಕೊರತೆಯಾಗಲಿಲ್ಲ. ಪ್ರಸಕ್ತ ವರ್ಷ ಸಮಯವಿದ್ದು ಅಗ್ನಿಶಾಮಕ ದಳ ಸಿದ್ಧವಿರಬೇಕು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ನವೀನ ಪವಾಡಿ ಅವರಿಗೆ ಶಾಸಕ ಮಾಮನಿ ತಿಳಿಸಿದರು. ಮುನವಳ್ಳಿ ಗ್ರಾಮದ ಹತ್ತಿರ, ನವಿಲುತೀರ್ಥ ಇಳಿಜಾರಿನಲ್ಲಿ ಸೀತಾರಾಮ ಕ್ರಾಸ್ ಬಳಿ ಕೆರೆ ನಿರ್ಮಿಸುವಂತೆ ನರೇಗಾ ನಿರ್ದೇಶಕ ಸಂಗನಗೌಡ ಹಂದ್ರಾಳರಿಗೆ ಸೂಚಿಸಿದರು. ಹಂಚಿನಾಳ ಗ್ರಾಮದ ಅಂಗನವಾಡಿ ಪರಿಸ್ಥಿತಿ ಕುರಿತು ಚರ್ಚಿಸಿ ಜು.30 ರೊಳಗೆ ಸಂಪೂರ್ಣ ದುರಸ್ತಿಗೊಳಿಸಿ ಉಳಿದಿರುವ 11 ಅಂಗನವಾಡಿ ಕೇಂದ್ರಗಳನ್ನು ನರೇಗಾದಡಿ ಸುಸಜ್ಜಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

    ಪಟ್ಟಣದ ಲಂಡೇನಹಳ್ಳ ಹಾಗೂ ಇಕ್ಕಟ್ಟಿನ ಸ್ಥಳಗಳಲ್ಲಿರುವ ತ್ಯಾಜ್ಯ ವಿಲೇವಾರಿ ಮಾಡಲು ಸವದತ್ತಿ-ಮುನವಳ್ಳಿ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು. ಗ್ರಾಮ ಸ್ವಚ್ಛತೆ ಮತ್ತು ಪ್ರವಾಹದ ಮುನ್ನೆಚ್ಚರಿಕೆ ವಹಿಸುವಂತೆ ಡಿಒಗಳಿಗೆ ತಿಳಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್. ಕಾಂಬೋಗಿ ಮಾತನಾಡಿ, ಇಲಾಖೆಯ ನಿರ್ದೇಶನದಂತೆ ಪರ್ಯಾಯ ಶಿಕ್ಷಣ ಯೋಜನೆ ರೂಪಿಸಿದ್ದು, ದೀಕ್ಷಾ ಪೋರ್ಟಲ್ ಮತ್ತು ಮಕ್ಕಳ ವಾಹಿನಿ ಮೂಲಕ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ಸುಮಾರು 2,200 ಪಾಠ ಹೊಂದಿದ ಅತಿ ಸರಳ ಯೋಜನೆಯಾಗಿದೆ. ಮೊಬೈಲ್,
    ಟಿವಿ ಇಲ್ಲದಿರುವ ಮಕ್ಕಳಿಗೆ ಬೇರೆ ರೀತಿ ತರಬೇತಿ ನೀಡಲು ಇಲಾಖೆ ಸಜ್ಜಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ ಇಒ ಯಶವಂತಕುಮಾರ, ತಹಸೀಲ್ದಾರ್ ಪ್ರಶಾಂತ ಪಾಟೀಲ, ವೈದ್ಯಾಧಿಕಾರಿ ಮಲ್ಲನಗೌಡರ, ಉಪತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಎಇಇ ಎಸ್.ಕೆ.ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts