More

    ಪ್ರವಾಸಿಗರ ನಿರೀಕ್ಷೆಗೆ ಸ್ಪಂದಿಸಿ,ಮಾರ್ಗದರ್ಶಿಗಳಿಗೆ ಸಲಹೆ


    ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ಪ್ರವಾಸಿಗರ ನಿರೀಕ್ಷೆ ಅಧಿಕವಿದ್ದು,ಅವರ ನಿರೀಕ್ಷೆಗಳಿಗೆ ತಕ್ಕಂತೆ ಪ್ರವಾಸಿ ಮಾರ್ಗದರ್ಶಿಗಳು ಸೇವೆ ನೀಡಬೇಕೆಂದು ಮೈಸೂರು ಫುಡ್‌ಕ್ರಾಫ್ಟ್ ಇನ್ಸಿಟಿಟ್ಯೂಟ್ ಪ್ರಾಂಶುಪಾಲ ಡಾ.ಎಸ್.ಕಣ್ಣನ್ ಹೇಳಿದರು.
    ಜಿಲ್ಲಾಡಳಿತ,ಪ್ರವಾಸೋದ್ಯಮ ಇಲಾಖೆಯಿಂದ ನಗರದ ಹೋಟೆಲ್ ಮಯೂರ ದುರ್ಗದಲ್ಲಿ,ಪ್ರವಾಸೋದ್ಯಮ ಇಲಾಖೆಯ ಬೆಂ ಗಳೂರು ವಿಭಾಗದ ಪ್ರವಾಸಿ ಮಾರ್ಗದರ್ಶಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಪುನಶ್ಚೇತನ ತರಬೇತಿಗೆ ಚಾಲನೆ ನೀಡಿ ಅವರು ಮಾತ ನಾಡಿದರು.
    ಕೋವಿಡ್ ನಂತರದಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದು,ಪ್ರವಾಸಿಗರ ನಿರೀಕ್ಷೆಗಳಿಗೆ ಮಾರ್ಗದರ್ಶಿಗಳು ಸ್ಪಂದಿಸಬೇಕು.ಇಂಗ್ಲಿ ಷ್,ಹಿಂದಿ ಮತ್ತಿತರ ಭಾಷೆಗಳ ಮೇಲೆ ಸಾಕಷ್ಟು ಹಿಡಿತವನ್ನು ಹೊಂದಿರುವುದು ಅಗತ್ಯವಿದೆ. ಪ್ರವಾಸಿಗರ ಫೀಡ್‌ಬ್ಯಾಕ್‌ಗೆ,ನೀವು ಕೊಡು ವಂಥ ಮಾಹಿತಿಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
    ದಾವಣಗೆರೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಲ್.ಪಿ.ಮಧು ಮಾತನಾಡಿ,ಮಾರ್ಗದರ್ಶಿಗಳು,ಇಲಾಖೆಯ ಪ್ರತಿ ಬಿಂಬದಂತೆ ಕೆಲಸ ಮಾಡಬೇಕು. ನಿತ್ಯವೂ ಹೊಸ ವಿಷಯಗಳನ್ನರಿಯಲು ಆಸಕ್ತಿ ವಹಿಸಬೇಕೆಂದರು. ಚಿತ್ರದುರ್ಗ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಿತೇಂದ್ರನಾಥ್ ಮಾತನಾಡಿ,ಪ್ರವಾಸಿ ತಾಣಗಳ ಕುರಿತು ಯಾವ ರೀತಿ ಮಾಹಿತಿ ನೀಡಬೇಕೆಂಬುದರ ಕುರಿತಂತೆ ಆಯೋಜಿಸಿರುವ ಈ ತರಬೇತಿ ಅ.9ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಮಾರ್ಗದರ್ಶಿಗಳು ತಮ್ಮ ಕುಂದು ಕೊರತೆಗಳ ಬಗ್ಗೆಯೂ ತಿಳಿಸ ಬಹುದಾಗಿದೆ ಎಂದರು.
    ಹಿರಿಯ ಪ್ರವಾಸಿ ಮಾರ್ಗದರ್ಶಿಗಳಾದ ದೀನ್‌ನಾಥ್,ಮೊಹಿದ್ದೀನ್ ಖಾನ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.ಫು ಡ್‌ಕ್ರಾಫ್ಟ್ ಇನ್ಸಿಟಿಟ್ಯೂಟ್ ಉಪನ್ಯಾಸಕ ಯತೀಶ್‌ಬಾಬು,ರಾಜ್ಯಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಕೆ. ಮಂಜುನಾಥ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts