More

    ಪ್ರವಚನ ಆಲಿಸುವುದರಿಂದ ಜೀವನ ಪಾವನ

    ಹಿರೇಬಾಗೇವಾಡಿ: ಮಹಾತ್ಮರ ಪ್ರವಚನಗಳನ್ನು ಆಲಿಸುವುದರಿಂದ ಜೀವನ ಪಾವನವಾಗುತ್ತದೆ ಎಂದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

    ಶ್ರಾವಣ ಮಾಸಾಂತ್ಯದ ನಿಮಿತ್ತ ಸೋಮವಾರ ಹಿರೇಬಾಗೇವಾಡಿಯಲ್ಲಿ ಶ್ರೀಗಳ ನೇತೃತ್ವದಲ್ಲಿ ಆಯೋಜಿಸಲಾದ ಜನಜಾಗೃತಿ ಪಾದಯಾತ್ರೆಯ ನಂತರ ಇಲ್ಲಿಯ ಪಡಿ ಬಸವೇಶ್ವರ ದೇವಸ್ಥಾನದಲ್ಲಿ ಮಾತನಾಡಿದರು.

    ಶ್ರಾವಣ ಮಾಸದಲ್ಲಿ ಮಹಾತ್ಮರ ಸುವಿಚಾರಗಳನ್ನು ಕೇಳುವುದರಿಂದ ಮನಸ್ಸುಗಳು ಶುದ್ಧವಾಗಿರುತ್ತವೆ. ಒಳ್ಳೆಯ ಆಚಾರ, ವಿಚಾರಗಳು ಶುದ್ಧವಾದ ಜೀವನ ನಡೆಸಲು ಉಪಯುಕ್ತವಾಗಿವೆ ಎಂದರು. ಕಾರ್ಯಕ್ರಮದಲ್ಲಿ ಶ್ರೀಗಳು ಶರಣರಿಗೆ ರುದ್ರಾಕ್ಷಿ ಧಾರಣೆ ಮಾಡಿದರು.

    ಬೆಳಿಗ್ಗೆ 7 ಗಂಟೆಗೆ ಇಲ್ಲಿಯ ಅಶ್ವಾರೂಢ ಬಸವೇಶ್ವರರ ಪುತ್ಥಳಿಗೆ ಹಾರ ಹಾಕಿ ಗೌರವ ಸಲ್ಲಿಸಿದ ಶ್ರೀಗಳು ಪಾದಯಾತ್ರೆಯ ಮೂಲಕ ಕೆರೆ ಓಣಿಯ ನಿಜಗುಣಿ ಶಿವಯೋಗಿಮಠ ಮತ್ತು ಪ್ರಭು ದೇವರ ಗುಡಿಗೆ ಭೇಟಿ ನೀಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಪಡಿಬಸವೇಶ್ವರ ದೇವಸ್ಥಾನ ತಲುಪಿದರು. ಮಾರ್ಗದುದ್ದಕ್ಕೂ ಸುಮಂಗಲೆಯರು ಶ್ರೀಗಳನ್ನು ಕಾಲಿಗೆ ನೀರು ಹಾಕಿ ಪುಷ್ಪಾರ್ಚನೆ ಮಾಡುವುದರೊಂದಿಗೆ ಸ್ವಾಗತಿಸಿದರು.

    ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಓಂ ಗುರೂಜಿ, ಚನ್ನವೀರ ಸ್ವಾಮಿಗಳು, ಶಂಕರ ಗುಡಸಿ, ಬಸವರಾಜ ರೊಟ್ಟಿ, ಬಿ.ಜಿ. ವಾಲಿಇಟಗಿ, ಸುರೇಶ ಇಟಗಿ, ಆನಂದ ಕೊಂಡಗುರಿ, ಪ್ರಕಾಶ ಜಪ್ತಿ, ಯಲ್ಲನಗೌಡ ಪಾಟೀಲ, ಶಿವಪುತ್ರ ಹಳಮನಿ, ಪಡಿಗೌಡ ಪಾಟೀಲ, ಡಾ ಎಂ.ಬಿ. ಪಾಟೀಲ, ಸತೀಶ ಚೌಗಲಾ, ಅಶೋಕ ಮಳಗಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts