More

    ಪ್ರಯೋಗಗಳ ಮೇಲೆ ವೈಜ್ಞಾನಿಕ ಪ್ರಪಂಚ ನಿಂತಿದೆ

    ನಿಪ್ಪಾಣಿ: ಪ್ರಯೋಗಗಳ ಮೂಲಕ ಸಾಕ್ಷೀಕರಿಸಿದ ಲಿತಾಂಶದ ಆಧಾರ ಮೇಲೆ ವೈಜ್ಞಾನಿಕ ಪ್ರಪಂಚ ಕಾರ್ಯನಿರ್ವಹಿಸುತ್ತದೆ ಎಂದು ಜಿ.ಐ. ಬಾಗೇವಾಡಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಎಂ.ಬಿ.ಕೋಥಳೆ ಹೇಳಿದರು.

    ಇಲ್ಲಿನ ಕೆಎಲ್‌ಇ ಸಂಸ್ಥೆಯ ಜಿ.ಐ ಬಾಗೇವಾಡಿ ಕಾಲೇಜಿನಲ್ಲಿ ಮಂಗಳವಾರ ಜರುಗಿದ ರಾಜ್ಯಮಟ್ಟದ ಪ್ರಗ್ಯಾನ ವಿಜ್ಞಾನ ಪ್ರದರ್ಶನದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ವೈಜ್ಞಾನಿಕ ಲೋಕದಲ್ಲಿ ಚಲನಶೀಲತೆ ಎನ್ನುವುದು ನಿತ್ಯ ನೂತನ ಸಂಗತಿ. ಸಂಶೋಧನೆಗಳ ಆಧಾರದ ಮೇಲೆ ಮಾನವನ ಜೀವನದಲ್ಲಿ ಗುಣಮಟ್ಟ ತರುವುದೇ ವಿಜ್ಞಾನದ ಧ್ಯೇಯ. ವಸ್ತು ಪ್ರದರ್ಶನಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಯುತ್ತದೆ ಎಂದರು.

    ಶಾಲಾ ವಿಭಾಗದಲ್ಲಿ ಶಿರದವಾಡಿನ ಸರ್ಕಾರಿ ಪ್ರೌಢಶಾಲೆ ಪ್ರಥಮ, ಅಂಕಲಿಯ ಶಾರದಾದೇವಿ ಕೋರೆ ಪ್ರೌಢಶಾಲೆ ದ್ವಿತೀಯ ಹಾಗೂ ನಿಡಸೋಸಿಯ ಎಸ್ಸೆನ್‌ಎನ್‌ಪಿಎಎಸ್‌ಎನ್‌ಎಂಎಸ್ ಪ್ರೌಢಶಾಲೆ ತೃತೀಯ ಸ್ಥಾನ ಗಳಿಸಿತು.

    ಕಾಲೇಜು ವಿಭಾಗದಲ್ಲಿ ಗದಗಿನ ಜೆ.ಟಿ. ಕಾಲೇಜು ಪ್ರಥಮ, ಧಾರವಾಡದ ಜೆಎಸ್‌ಎಸ್ ಕಾಲೇಜು ದ್ವಿತೀಯ ಹಾಗೂ ಬೆಳಗಾವಿಯ ಆರ್.ಎಲ್.ಎಸ್ ಕಾಲೇಜು ತೃತೀಯ ಸ್ಥಾನ ಗಳಿಸಿತು. ನಗದು ಹಣ, ಪ್ರಶಸ್ತಿ ಪತ್ರ ಮತ್ತು ಲಕ ವಿತರಿಸಲಾಯಿತು. ಪ್ರಾಚಾರ್ಯ ಡಾ.ಎಂ.ಎಂ.ಹುರಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಹೇಮಾ ಚಿಕ್ಕಮಠ, ಅಶ್ವಿನಿ ಕಿಲ್ಲೇದಾರ, ತೀರ್ಪುಗಾರರಾದ ಡಾ.ಮಲ್ಲವ್ವ ಶಂಕ್ರಿಕೊಪ್ಪ, ಡಾ.ಅರವಿಂದ ಹಲಗೇಕರ, ಡಾ.ಪಿ.ಡಿ.ಶಿರಗಾವೆ, ಡಾ.ಸಿದ್ದಲಿಂಗ ಮಟ್ಟೆಪ್ಪನವರ, ಡಾ.ನಾಗಪ್ಪ ತೇರದಾಳ, ಗೀತಾ ಕಮತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts