More

    ಪ್ರಯೋಗಶೀಲತೆಯಿಂದ ಗ್ರಾಹಕರ ಗಳಿಸಲು ಸಾಧ್ಯ

    ಹಾವೇರಿ: ಛಾಯಾಗ್ರಾಹಕರು ತೆಗೆದ ಒಂದೊಂದು ಚಿತ್ರವು ದಾಖಲೆಯಾಗಿ ಉಳಿಯುವ ಜೊತೆಗೆ ಮತ್ತೊಬ್ಬರ ಜೀವನದಲ್ಲಿ ಮಹತ್ವದ ತೀರ್ಪು ನೀಡುತ್ತದೆ. ಛಾಯಾಗ್ರಾಹಕರು ಗೌರವ, ಅಭಿಮಾನ, ಪ್ರಯೋಗಶೀಲತೆಯಿಂದ ಗ್ರಾಹಕರನ್ನು ಗಳಿಸಿಕೊಳ್ಳಲು ಸಾಧ್ಯ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

    ನಗರದಲ್ಲಿ ಭಾನುವಾರ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರರ ಸಂಘದಿಂದ ಏರ್ಪಡಿಸಿದ್ದ 181ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ಸಂಘದ 18ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ತಮ್ಮ ವೃತ್ತಿಯಲ್ಲಿ ಗೌರವ ಇರುವವರು ಉತ್ತಮವಾಗಿ ಜೀವನ ಮಾಡಲು ಸಾಧ್ಯ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದ ಹಾಗೆ ಹೊಸತನವನ್ನು ಅಳವಡಿಸಿಕೊಳ್ಳಬೇಕು ಎಂದರು.

    ಹಿರಿಯ ಛಾಯಾಗ್ರಾಹಕ ದಾವಣಗೆರೆಯ ಎಚ್.ಬಿ. ಮಂಜುನಾಥ ಮಾತನಾಡಿ, ಶಿಕ್ಷಣದಲ್ಲಿ ರಿಯಾಯಿತಿ ನೀಡಬೇಕು. ಸರ್ಕಾರವು ಉತ್ತಮ ಛಾಯಾಗ್ರಾಹಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು. ಛಾಯಾಗ್ರಾಹಕ ಅಕಾಡೆಮಿ ರಚನೆಯಾಗಬೇಕು ಎಂದು ಒತ್ತಾಯಿಸಿದರು.

    ತಾಲೂಕಿನ ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಶಂಭುಗೌಡ ಅಂದಾನಿಗೌಡ್ರ, ರಾಜೇಂದ್ರ ರಿತ್ತಿ, ಮಲ್ಲಿಕಾರ್ಜುನ ಕುಂಬಾರಿ, ನಾಗೇಶ ರ್ಬಾ, ಸಂಜಯ ರಿತ್ತಿ, ಸಿದ್ದಣ್ಣ ಹಳ್ಳಿಕೇರಿ, ರಾಜು ರ್ಬಾ, ಕುಬೇರಗೌಡ ಕರಿಗೌಡ್ರ, ರಾಜು ಆನ್ವೆರಿ, ಪ್ರಕಾಶ ನಂದಿ, ಅಶೋಕ ಬ್ಯಾಡಗಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts