More

    ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

    ಹಾವೇರಿ: ಅಂತರ್ ಜಿಲ್ಲೆಗಳ ಬಸ್ ಸಂಚಾರ ಆರಂಭಗೊಂಡ ಮೂರನೇ ದಿನ ಗುರುವಾರ ಪ್ರಯಾಣಿಕರ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಾಗಿದೆ.

    ಮೊದಲೆರಡು ದಿನದಂತೆ ಮೂರನೇ ದಿನವೂ 70 ಸ್ಥಳೀಯ ಬಸ್ ಹಾಗೂ ಅಂತರ್ ಜಿಲ್ಲೆಗಳಿಗೆ 141 ಬಸ್ ಬಿಡಲಾಗಿತ್ತು. ಗುರುವಾರ ಬಹುತೇಕ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಏರಿಕೆ ಕಂಡಿದೆ. ಗುರುವಾರ ಬೆಂಗಳೂರಿಗೆ 16 ಬಸ್​ಗಳು ಬೆಳಗ್ಗೆ ಹೋಗಿವೆ. ಇನ್ನುಳಿದಂತೆ ಹುಬ್ಬಳ್ಳಿ, ದಾವಣಗೆರೆಗೂ ಹೆಚ್ಚಿನ ಜನ ಸಂಚರಿಸಿದ್ದಾರೆ. ಗದಗ, ಉತ್ತರಕನ್ನಡ, ದಕ್ಷಿಣಕನ್ನಡ, ಕಲಬುರಗಿ ಜಿಲ್ಲೆಗಳತ್ತ ಕಡಿಮೆ ಜನ ಪ್ರಯಾಣಿಸಿದ್ದಾರೆ.

    ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಲಕ್ಷಣ ಕಂಡುಬಂದಿದ್ದು, ಪ್ರಯಾಣಿಕರ ಬೇಡಿಕೆಗನುಸಾರ ಬಸ್​ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು. ಮಂಗಳವಾರ ಬಸ್​ಗಳ ಓಡಾಟಕ್ಕೆ ಪ್ರತಿ ಕಿಮೀಗೆ 15 ರೂ.ಗಳಷ್ಟು ಕಲೆಕ್ಷನ್ ಆಗಿದ್ದರೆ, ಬುಧವಾರ 19 ರೂ. ರೂ.ಗೂ ಅಧಿಕವಾಗಿದೆ. ಗುರುವಾರ ಇನ್ನಷ್ಟು ಹೆಚ್ಚಳವಾಗಿದೆ. 30 ಪ್ರಯಾಣಿಕರಂತೆ ಪ್ರಯಾಣಿಸಿದರೂ ಪ್ರತಿ ಕಿಮೀಗೆ 26 ರೂ.ಗಳಷ್ಟು ಆದಾಯ ಬಂದರೆ ಬಸ್​ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ವಾಕರಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಜೆ. ಜಗದೀಶ ವಿಜಯವಾಣಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts