More

    ಪ್ರಧಾನಮಂತ್ರಿ ವಸತಿ ಯೋಜನೆಯಡಿ 2048 ಮನೆ ನಿರ್ಮಾಣ

    ಭದ್ರಾವತಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರ ವ್ಯಾಪ್ತಿಯ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಲು 2048 ಜಿ+ತ್ರಿ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ. ಚುನಾವಣೆ ನೀತಿ ಸಂಹಿತೆ ಆರಂಭವಾಗುವ ಮುನ್ನ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
    ನಗರದ ವೀರಶೈವ ಸಮುದಾಯ ಭವನದಲ್ಲಿ ವಸತಿ ನಿರ್ಮಾಣ ಕಾಮಗಾರಿ ಕುರಿತು ಮಂಗಳವಾರ ಆಯೋಜಿಸಿದದ ಅರ್ಹ -Àಲಾನುಭವಿಗಳ ಸಭೆಯಲ್ಲಿ ಮಾತನಾಡಿದರು.
    4,000 ಮನೆಗಳ ಪೈಕಿ ಅರ್ಜಿ ಸಲ್ಲಿಸಿ, ಬ್ಯಾಂಕ್‍ನಲ್ಲಿ 10 ಸಾವಿರ ರೂ. ಠೇವಣಿ ಇಟ್ಟಿರುವ 2048 ಅರ್ಹ -ÀಲಾನುಭವಿಗÀಳಿಗೆ ಮೊದಲ ಹಂತದಲ್ಲಿ ನೀಡಲಾಗುವುದು. ಅನುಮೋದನೆ ಪಡೆದಿರುವ ಟೆಂಡರ್‍ದಾರರು ಶೀಘ್ರವೇ ಕಾಮಗಾರಿ ಆರಂಭಿಸಲಿದ್ದಾರೆ. ಅರ್ಜಿ ಸಲ್ಲಿಸಿ ಬ್ಯಾಂಕಿನಲ್ಲಿ ಠೇವಣಿ ಇಡದ -Àಲಾನುಭವಿಗಳು ಆದಷ್ಟು ಬೇಗ ಠೇವಣಿ ಇಟ್ಟು ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
    ವಸತಿ ಸಂಕೀರ್ಣ ಕಾಮಗಾರಿ ಬಗ್ಗೆ ಕೆಲವರು ಅಪಪ್ರಚಾರ ಮಾಡಿದ್ದರು. ಅವರಿಗೆಲ್ಲ ಕಾಮಗಾರಿ ಅನುಮೋದನೆ ಪತ್ರದೊಂದಿಗೆ ದಿಟ್ಟ ಉತ್ತರ ನೀಡಲಾಗುತ್ತಿದೆ. ಮನೆ ನಿರ್ಮಾಣಕ್ಕಾಗಿ 175 ಕೋಟಿ ರೂ. ಬಿಡುಗಡೆಯಾಗಿದ್ದು ನಗರದ ನಂಜಾಪುರ, ಬುಳ್ಳಾಪುರ, ತಿಮ್ಲಾಪುರ ಭಾಗದ 32 ಎಕರೆ ಜಾಗದಲ್ಲಿ ಕಾಮಗಾರಿ ಆರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ 2 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ ಎಂದರು.
    ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಜಾತಿ, ಪಕ್ಷ ನೋಡಿ ಕೆಲಸ ಮಾಡುವ ವಾತಾವರಣ ರಾಜ್ಯ ಹಾಗೂ ತಾಲೂಕುಗಳಲ್ಲಿ ಸೃಷ್ಟಿಯಾಗಿದೆ. ಆದರೆ ನಮ್ಮ ಕ್ಷೇತ್ರದ ಶಾಸಕರು ಕೇವಲ ಬಡವರ ಹಿತದೃಷ್ಟಿಯಿಂದ ಕೆಲಸ ಮಾಡುತ್ತ 4 ಸಾವಿರ ಫಲಾನುಭವಿಗಳಿಗೆ ಮನೆ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಅರ್ಜಿ ಸಲ್ಲಿಸಿ ಠೇವಣಿ ಇಟ್ಟು ವಸತಿ ಸೌಲಭ್ಯ ಪಡೆಯಲು ಈಗಲೂ ಅವಕಾಶವಿದೆ. ಮುಂದಿನ 10 ತಿಂಗಳಲ್ಲಿ ಎಲ್ಲರೂ ಮನೆ ಮಾಲೀಕರಾಗಬಹುದು ಎಂದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್, ಉಪಾಧ್ಯಕ್ಷೆ ಸರ್ವಮಂಗಳಾ ಬೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್, ನಗರಸಭೆ ಸದಸ್ಯ ಚನ್ನಪ್ಪ, ಕಾಂತರಾಜ್, ಮಣಿ ಇತರರಿದ್ದರು.

    ಎಂಪಿಎಂ ತೆರೆಯುವುದು ಸತ್ಯ: ಕಾಂಗ್ರೆಸ್ ಪಕ್ಷವಾಗಲಿ, ಶಾಸಕರಾಗಲಿ ಎಂದಿಗೂ ಸುಳ್ಳು ಹೇಳುವುದಿಲ್ಲ. ಮುಂದೆ ನಮ್ಮ ಸರ್ಕಾರವೇ ಅ„ಕಾರಕ್ಕೆ ಬರಲಿದ್ದು, ವಿಐಎಸ್‍ಎಲ್ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವುದರಿಂದ ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಲಾಗುವುದಿಲ್ಲ. ಆದರೆ ಇಲ್ಲಿನ ಎಂಪಿಎಂ ಕಾರ್ಖಾನೆಯನ್ನು ಪುನಾರಂಭ ಮಾಡುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ನಗರಸಭೆ ಸದಸ್ಯ ಬಿ.ಕೆ.ಮೋಹನ್ ಹೇಳಿದರು. ಮಾತಿನಂತೆ ನಡೆದುಕೊಳ್ಳದಿದ್ದರೆ ಶಾಸಕರು ಸೇರಿ ಇಡೀ ಕುಟುಂಬ ರಾಜಕಾರಣದಿಂದ ದೂರ ಉಳಿಯುತ್ತೇವೆ. ಕಾರ್ಖಾನೆ ಎದುರು ವಿಐಎಸ್‍ಎಲ್ ಉಳಿಸಿಕೊಡುವ ಮಾತುಗಳನ್ನಾಡುವ ಕೆಲ ಪಕ್ಷಗಳ ನಾಯಕರು ಅ„ವೇಶನದಲ್ಲಿ ಕಾರ್ಖಾನೆ ಬಗ್ಗೆ ಪ್ರಶ್ನಿಸಲೇ ಇಲ್ಲ. ಆದರೆ ಕಾಂಗ್ರೆಸ್‍ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಹಲವರು ಅ„ವೇಶನದಲ್ಲಿ ಮಾತನಾಡಿ ಕಣ್‍ತೆರೆಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts