More

    ಪ್ರತಿ ಹಳ್ಳಿಗಳಲ್ಲೂ ಬಿಎಸ್‌ಪಿ ಸಂಘಟಿಸಿ: ಪಕ್ಷದ ರಾಜ್ಯಪ್ರಧಾನ ಕಾರ್ಯದರ್ಶಿ ಬಿ.ಅನ್ನದಾನಪ್ಪ ಕರೆ

    ಮಾಗಡಿ : ಮಾಗಡಿ ವಿಧಾನಸಭಾಕ್ಷೇತ್ರದ ಪ್ರತಿ ಹಳ್ಳಿಗಳಲ್ಲೂ ಬಹುಜನ ಸಮಾಜ ಪಕ್ಷವನ್ನು ಸಂಘಟಿಸಿ ಎಲ್ಲ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕಿಳಿಸುತ್ತೇವೆ ಎಂದು ಪಕ್ಷದ ರಾಜ್ಯಪ್ರಧಾನ ಕಾರ್ಯದರ್ಶಿ ಬಿ.ಅನ್ನದಾನಪ್ಪ ಹೇಳಿದರು.
    ಪಟ್ಟಣದ ತಿರುಮಲೆಯಲ್ಲಿ ಭಾನುವಾರ ಪಕ್ಷದ ತಾಲೂಕು ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಂತರ ಮಾತನಾಡಿ, ಸ್ವಾತಂತ್ರ್ಯ ಬಂದಗಿಂದಲ್ಲೂ ಅಳ್ವಿಕೆ ಮಾಡಿದ ಕಾಂಗ್ರೆಸ್, ಬಿಜೆಪಿ ಜನರಿಗೆ ಅನ್ಯಾಯ, ಮೋಸ ಮಾಡಿವೆ. ಸಾಮಾಜಿಕ ನ್ಯಾಯಕಲ್ಪಿಸಲು ಯಾರು ಮುಂದಾಗದೆ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಮೇಲೆ ತೆರಿಗೆ ವಿಧಿಸುತ್ತಿದ್ದಾರೆ ಎಂದು ಆರೋಪಿಸಿದರು.

    ತಾಲೂಕಿನ ದಲಿತರಿಗೆ 1951ರಲ್ಲಿ ಸಾಗುವಳಿ ಚೀಟಿ ನೀಡಿದ್ದು ಇಲ್ಲಿಯವೆಗೂ ಸಮರ್ಪಕ ದಾಖಲೆ
    ಮಾಡಿಕೊಟ್ಟಿಲ್ಲ. ಇದರಿಂದ ಅರಣ್ಯ ಇಲಾಖೆ ದಲಿತರಿಗೆ ಕಿರುಕುಳ ನೀಡಿ ಒಕ್ಕಲೆಬ್ಬಿಸುತ್ತಿದೆ. ಈ ಬಗ್ಗೆ ಶಾಸಕರಿಗೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷಿಸುತ್ತಿದ್ದಾರೆ. ಶೀಘ್ರವೆ ಸಮರ್ಪಕ ದಾಖಲೆ ಮಾಡಿ ಕೊಡುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

    ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್ ಮಾತನಾಡಿ, ದೇಶದ ಉಕ್ಕಿನ ಮಹಿಳೆ ಮಾಯಾವತಿ ಅವರು
    ಪಕ್ಷವನ್ನು ಮುನ್ನಡೆಸುತ್ತಿದ್ದು, ಅವರಿಗೆ ಬೂತ್ ಮಟ್ಟದಿಂದ ಬೆಂಬಲ ಸೂಚಿಸೋಣ, ನಮ್ಮ
    ಹಕ್ಕುಗಳನ್ನು ಪಡೆಯಲು ಪಕ್ಷ ದೇಶದಾದ್ಯಂತ ಹೋರಾಟ ನಡೆಸುತ್ತಿದೆ. ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ಸಮಾಜದಲ್ಲಿ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡುವುದು ಪಕ್ಷದ ಉದ್ದೇಶವಾಗಿದೆ ಎಂದರು.
    ಜಿಲ್ಲಾ ಸಂಯೋಜಕ ಅಶ್ವತ್ಥ, ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹೀಂಬಾಬು, ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಾಚಲ, ಕಾರ್ಯದರ್ಶಿ ನಾಗರಾಜು, ವಿಧಾನಸಭಾ ಅಧ್ಯಕ್ಷ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಬೆಳಗುಂಬ ಧನಂಜಯ, ತಾಲೂಕು ಸಂಯೋಜಕ ನರಸಿಂಹಮೂರ್ತಿ, ಪಟ್ಟಣ ಅಧ್ಯಕ್ಷ ಲಕ್ಷ್ಮೀನಾರಾಯಣ್ ಇದ್ದರು.

    ಪದಾಧಿಕಾರಿಗಳ ನೇಮಕ : ಪಕ್ಷದ ಸಂಯೋಜಕರಾಗಿ ಜುಟ್ನಹಳ್ಳಿ ಮುನಿಸ್ವಾಮಿ, ಅಂಕನಹಳ್ಳಿ ನರಸಿಂಹಮೂರ್ತಿ, ಅಧ್ಯಕ್ಷರಾಗಿ ಬಿಡದಿ ರಾಮಣ್ಣ, ಉಪಾಧ್ಯಕ್ಷರಾಗಿ ಮಾಡಬಾಳ್ ಲೋಕೇಶ್, ರವಿಕುಮಾರು, ಬಿ.ನಾರಾಯಣ, ಪ್ರಧಾನ ಕಾರ್ಯದರ್ಶಿಯಾಗಿ ಬೆಳಗುಂಬ ಧನಂಜಯ, ಸಂಘಟನಾ ಕಾರ್ಯದರ್ಶಿಯಾಗಿ ತಿರುಮಲೆ ನರಸಿಂಹಯ್ಯ, ರಮೇಶ್, ರಾಮಕೃಷ್ಣ, ಮಹದೇವಯ್ಯ, ಕಾರ್ಯದರ್ಶಿಯಾಗಿ ಮಂಜುನಾಥ್, ಕುಮಾರು, ಹನುಮಂತರಾಜು, ನಾಗರಾಜು, ನಾಗೇಂದ್ರನಾಯ್ಕ ನೇಮಕಆಗಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts