More

    ಪ್ರತಿ ವಾರ ಹಣ ಬಳಕೆ ಲೆಕ್ಕ ಕೊಡಿ

    ಬೀದರ್: ಕರೊನಾ ಸಂಬಂಧ ಸರ್ಕಾರ ಒದಗಿಸಿದ ಎನ್​ಡಿಆರ್​ಎಫ್​ ಹಣ ಬಳಕೆಯ ಬಗ್ಗೆ ಗ್ರಾಮ ಲೆಕ್ಕಿಗರು, ಪಿಡಿಒ ದೃಢೀಕರಣ ಇರುವಂತೆ ಎಲ್ಲ ತಹಸೀಲ್ದಾರರಿಂದ ಪ್ರತಿ ವಾರವೂ ಮಾಹಿತಿ ಪಡೆದುಕೊಳ್ಳಬೇಕು ಎಂದು ಡಿಸಿ ರಾಮಚಂದ್ರನ್ ಅವರು ಸಹಾಯಕ ಆಯುಕ್ತರಿಗೆ ಸೂಚಿಸಿದರು.
    ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವೈದ್ಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರ್ಕಾರ ಕರೊನಾ ನಿರ್ವಹಣೆಗೆ ಎನ್ಎಚ್ಎಂ ಮೂಲಕ ಒದಗಿಸಿದ ಹಣದ ಖರ್ಚು ವೆಚ್ಚದ ಬಗ್ಗೆಯೂ ವೈದ್ಯಾಧಿಕಾರಿಗಳು ಸರಿಯಾಗಿ ಮಾಹಿತಿ ಒದಗಿಸಬೇಕು. ಯಾವ ಕಪ್ಪು ಚುಕ್ಕೆ ಇಲ್ಲದ ರೀತಿ ಕೆಲಸ ನಿರ್ವಹಿಸಿದಾಗಲೇ ನಮ್ಮ ಶ್ರಮಕ್ಕೆ ಬೆಲೆ ಬರುತ್ತದೆ ಎಂದು ತಿಳಿಸಿದರು.
    ಆಸ್ಪತ್ರೆಗಳಲ್ಲಿ ಜೈವಿಕ ತ್ಯಾಜ್ಯ ನಿರ್ಹಹಣೆಯನ್ನು ನಿಯಮಾನುಸಾರವೇ ನಡೆಯಬೇಕು. ಈ ವಿಷಯದಲ್ಲಿ ಯಾರಾದರೂ ನಿರ್ಲಕ್ಷ್ಯ ವಹಿಸಿದಲ್ಲಿ ಮುಲಾಜಿಲ್ಲದೆ ಅಮಾನತು ಮಾಡುವುದಾಗಿ ಎಚ್ಚರಿಸಿದರು. ಜಿಲ್ಲೆಯಲ್ಲಿನ ಕರೊನಾ ಸೋಂಕಿತ ಪ್ರಕರಣ, ಚಿಕಿತ್ಸೆ, ಸ್ಯಾಂಪಲ್ ಟೆಸ್ಟ್, ವಿಶೇಷ ವಾರ್ಡ್​, ಬಿಡುಗಡೆಯಾದ ಅನುದಾನ ಬಳಕೆ ಸೇರಿ ನಾನಾ ಮಾಹಿತಿ ಡಿಸಿ ಪಡೆದರು.
    ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್ಪಿ ಡಿ.ಎಲ್.ನಾಗೇಶ, ಅಪರ ಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಡಿಎಚ್ಓ ಡಾ.ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರತಿಕಾಂತ ಸ್ವಾಮಿ, ಜಿಲ್ಲಾ ಕಣ್ಗಾವಲು ಘಟಕದ ಅಧಿಕಾರಿ ಡಾ.ಕೃಷ್ಣಾ ರೆಡ್ಡಿ, ಡಾ.ಇಂದುಮತಿ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts