More

    ಪ್ರತಿ ಮಳೆಗೆ ಮುಳುಗುವ ವಡಗಾಂವ(ದೇ) ಮಾರ್ಗದ ಸೇತುವೆ

    ಮಲ್ಲಪ್ಪ ಗೌಡ ಔರಾದ್
    ವಡಗಾಂವ(ದೇ) ಹತ್ತಿರದ ಹಳ್ಳದ ಸೇತುವೆ ದುರ್ಬಲವಾಗಿದ್ದು, ನಿರಂತರ ಮಳೆಯಿಂದಾಗಿ ಸೇತುವೆ ಮೇಲೆ ವಾಹನ ಪ್ರಯಾಣ ಆತಂಕ ಸೃಷ್ಟಿಸಿದೆ. ಪ್ರತಿ ಮಳೆಗೆ ಸೇತುವೆ ಮೇಲೆ ನೀರು ಹರಿಯುವುದರಿಂದ ರಭಸ ಕಡಿಮೆ ಆಗುವವರೆಗೂ ಈ ಮಾರ್ಗದ ಸಂಚಾರ ಬಂದ್ ಆಗುತ್ತದೆ.

    ಕಳೆದ 24 ಗಂಟೆಯಲ್ಲಿ ಸಂತಪುರ, ವಡಗಾಂವ ವಲಯಗಳಲ್ಲಿ ಅತಿ ಹೆಚ್ಚು 120 ಮಿಮೀ ಮಳೆಯಾಗಿದ್ದು, ಸೇತುವೆ ಮೇಲಿಂದ ನೀರು ರಭಸವಾಗಿ ಹರಿದ ಕಾರಣ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

    ಸಾರ್ವಜನಿಕರು, ಶಿಕ್ಷಕರು, ಶಾಲಾ-ಕಾಲೇಜು ವಿದ್ಯಾಥರ್ಿಗಳು ಪ್ರತಿದಿನ ಈ ಸೇತುವೆ ಮುಖಾಂತರವೇ ತಾಲೂಕು ಕೇಂದ್ರ ಔರಾದ್ ಅಥವಾ ಜಿಲ್ಲಾ ಕೇಂದ್ರ ಬೀದರ್ಗೆ ತೆರಳುತ್ತಾರೆ. ಬಸ್, ಲಾರಿ, ಜೀಪು, ಕಾರು, ಟಾ್ರೃಕ್ಟರ್, ದ್ವಿಚಕ್ರ ವಾಹನ ಸೇರಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಇತ್ತೀಚೆಗೆ ಸೇತುವೆ ಮೇಲೆ ಸಿಸಿ ರಸ್ತೆ ನಿಮರ್ಿಸಲಾಗಿದೆ. ಆದರೆ ಎರಡೂ ಬದಿಗೆ ರಕ್ಷಣಾ ಗೋಡೆ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳದಿರುವುದು ಅಪಾಯಕ್ಕೆ ಆಹ್ವಾನ ನೀಡಿದೆ.

    ವಡಗಾಂವ(ದೇ)ದಿಂದ ಈಗಾಗಲೇ ಬೀದರ್ಗೆ ತೆರಳಲು ಉತ್ತಮ ಡಾಂಬರ್ ರಸ್ತೆ ನಿಮರ್ಿಸಲಾಗಿದೆ. ಆದರೆ ಈ ಮಾರ್ಗದ ಸೇತುವೆಯನ್ನು ಮೇಲ್ದಜರ್ೆಗೆ ಏರಿಸದೆ ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಔರಾದ್-ಬೀದರ್ 40 ಕಿಮೀ ಅಂತಾರಾಜ್ಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಸಾರ್ವಜನಿಕರು, ಅಧಿಕಾರಿಗಳು, ಯಾತ್ರಿಗಳು ಪಯರ್ಾಯ ಎಂಬಂತೆ ಬೀದರ್ಗೆ ಹೋಗಲು ಇದೇ ಸೇತುವೆ ಮೂಲಕ ಸಂತಪುರ, ವಡಗಾಂವ(ದೇ), ಕಂದಗುಳ, ಚಾಂಬೋಳ ಮಾರ್ಗ ಅವಲಂಬಿಸಿದ್ದಾರೆ.
    ಕೆರೆ-ಕಟ್ಟೆ ದಡ, ಸೇತುವೆಗಳನ್ನು ಉತ್ತಮವಾಗಿಡಲು ಸಕರ್ಾರ ಕೋಟ್ಯಂತರ ರೂ. ಅನುದಾನ ಸಂಬಂಧಿಸಿದ ಇಲಾಖೆಗೆ ನೀಡುತ್ತದೆ. ಆದರೆ ಸ್ಥಳೀಯ ಮಟ್ಟದಲ್ಲಿ ಸೇತುವೆಗಳ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಿ ಸಂಭವನೀಯ ಅನಾಹುತ ತಪ್ಪಿಸಲು ಮುತುವಜರ್ಿ ವಹಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸಂಬಂಧಿತರಿಗೆ ಕಿಂಚಿತ್ತೂ ಕಾಳಜಿ ಇಲ್ಲವಾಗಿದೆ. ಅವರೂ ಈ ಮಾರ್ಗದಲ್ಲಿ ಓಡಾಡುತ್ತಾರೆ. ಆದರೆ ತಮಗಿದು ಸಂಬಂಧವೇ ಇಲ್ಲದಂತೆ ವತರ್ಿಸುತ್ತಾರೆ ಎಂಬ ದೂರುಗಳಿಗೆ ಬರವಿಲ್ಲ. ಸುಗಮ ಮತ್ತು ಸುರಕ್ಷಿತ ಸಂಚಾರ ದೃಷ್ಟಿಯಿಂದ ಕೂಡಲೇ ಹಳೆಯದಾದ ಸೇತುವೆ ಮೇಲ್ದಜರ್ೆಗೆ ಏರಿಸಲು ಮುಂದಾಗಬೇಕು ಎಂಬುದು ಒಕ್ಕೊರಲ ಒತ್ತಾಯವಾಗಿದೆ.

    ಸೇತುವೆ ಚಿಕ್ಕದಾಗಿದ್ದರಿಂದ ಮಳೆ ನೀರು ಮೇಲಿಂದ ರಭಸವಾಗಿ ಹರಿಯುತ್ತಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಭಾರಿ ವಾಹನಗಳು ಸಹ ಈ ಸೇತುವೆ ಮೇಲೆ ಓಡಾಡುವುದರಿಂದ ದಿನಗಳೆದಂತೆ ಶಿಥಿಲಗೊಳ್ಳುತ್ತಿದೆ. ಕೂಡಲೇ ಸಂಬಂಧಿಸಿದವರು ಸೇತುವೆ ದುರಸ್ತಿ ಇಲ್ಲವೆ ಮೇಲ್ದಜರ್ೆಗೇರಿಸಲು ಕ್ರಮ ಕೈಗೊಳ್ಳಬೇಕು.
    | ರಾಜಕುಮಾರ ಹೇಡೆ, ಗ್ರಾಪಂ ಸದಸ್ಯ ವಡಗಾಂವ(ದೇ)

    ವಡಗಾಂವ(ದೇ) ಹತ್ತಿರದ ಸೇತುವೆ ಮೇಲ್ದಜರ್ೆಗೇರಿಸಲು ಅನುಮೋದನೆ ಸಿಕ್ಕಿದೆ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
    | ವೀರಶೆಟ್ಟಿ ರಾಠೋಡ್, ಎಇಇ, ಪಿಡಬು್ಲೃಡಿ ಸಂತಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts