More

    ಪ್ರತಿ ಮನೆಯಲ್ಲೂ ಸ್ಕೌಟ್-ಗೈಡ್ ಇರಲಿ

    ಬೈಲಹೊಂಗಲ: ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಬಸವಣ್ಣನವರ ಸಮಾನತೆಯ ತತ್ತ್ವ ಅಡಗಿದೆ. ಉತ್ತಮ ಸಮಾಜಕ್ಕಾಗಿ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸ್ಕೌಟ್ ಇರಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

    ಪಟ್ಟಣದ ಕೆಆರ್‌ಸಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಕೆಆರ್‌ಸಿಇಎಸ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಸೋಮವಾರ ಆಯೋಜಿಸಿದ್ದ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕಬ್ಸ್, ಬುಲ್ ಬುಲ್ ಘಟಕ ಉದ್ಘಾಟಿಸಿ ಮಾತನಾಡಿದರು.
    ಕೆಆರ್‌ಸಿಎಸ್ ಆಂಗ್ಲ ಮಾಧ್ಯಮ ಶಾಲೆಯ 800ಕ್ಕೂ ಹೆಚ್ಚು ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.

    ಸ್ಕೌಟ್ಸ್ ಮತ್ತು ಗೈಡ್ಸ್ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿ, ಶಾಲೆಯು ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಪರಿವರ್ತನೆ ಹೊಂದಿ ಮಾದರಿಯಾಗಿದೆ ಎಂದರು.

    ಸಂಸ್ಥೆಯ ಚೇರ್ಮನ್ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಮಕ್ಕಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣದೊಂದಿಗೆ ವಿವಿಧ ರೀತಿಯ ಜೀವನ ಕೌಶಲ ನೀಡುತ್ತಿದ್ದಾರೆ. ಅದಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳಸಲು ಪ್ರೇರಣೆ ನೀಡಲಾಗುವುದು ಎಂದರು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಭವಿಷ್ಯ ರೂಪಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

    ಬಿಇಒ ಎ.ಎನ್. ಪ್ಯಾಟಿ, ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಆರ್.ಪಿ. ಬಡಸ, ನಿರ್ದೇಶಕರಾದ ಸಂಜುಗೌಡ ಪಾಟೀಲ, ದೀಪಕ ಸಂಗೊಳ್ಳಿ, ವಿ.ಎಸ್.ಬೆಲ್ಲದ, ಶಿರೀಶ ತುಡವೇಕರ, ಎನ್.ಎಸ್.ಪಾಟೀಲ, ಸಿ.ವೈ.ತುಬಾಕಿ, ಅಜ್ಜಪ್ಪ ಅಂಗಡಿ, ಪಿ.ಸಿ. ಮಾಸ್ತಿಹೋಳಿ, ಬಿ.ಎನ್.ಕಸಾಳೆ ಇದ್ದರು. ಪ್ರಾಚಾರ್ಯ ಎಂ.ಸಿ.ಬಿರಾದಾರ ಸ್ವಾಗತಿಸಿದರು. ಕಾರ್ಯದರ್ಶಿ ಎ.ಬಿ.ಅಂಗಡಿ. ಪ್ರಾಸ್ತಾವಿಕ ಮಾತನಾಡಿದರು. ಯುಕ್ತಿ ದೇಶನೂರ, ಮಾನಸಾ ಮೂಗಬಸವ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts