More

    ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸಿ

    ಬೀದರ್: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ 13ರಿಂದ ಮೂರು ದಿನ ಜಿಲ್ಲೆಯ ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಹೇಳಿದರು.

    ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2 ಲಕ್ಷ ರಾಷ್ಟ್ರ ಧ್ವಜ ಹಾರಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಸಾರ್ವಜನಿಕರು ಸಾಥ್ ನೀಡುವ ಜತೆಗೆ ಎಲ್ಲರೂ ತಿರಂಗಾ ಧ್ವಜ ಹಾರಿಸಬೇಕು ಎಂದು ಕರೆ ನೀಡಿದರು.

    ಜಿಲ್ಲಾ ಮಟ್ಟದ ಈ ಸೈಕಲ್ ಜಾಥಾದಲ್ಲಿ ಒಂದು ಸಾವಿರ ಜನರು ಸೇರುವ ಗುರಿ ಇತ್ತು. ಆದರೆ ನಿರೀಕ್ಷೆಗೂ ಮೀರಿ 4000ಕ್ಕೂ ಹೆಚ್ಚಿನ ವಿವಿಧ ಶಾಲಾ-ಕಾಲೇಜಿನ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದು ಸಂತಸ ತಂದಿದೆ ಎಂದರು.

    ಶುಕ್ರವಾರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದು ಕಿಲೋಮೀಟರ್ ಉದ್ದದ ತಿರಂಗಾ ಧ್ವಜದ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿದೆ. 10ರಂದು ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ವಿದ್ಯಾಥರ್ಿಗಳಿಂದ ಪ್ರಭಾತ್ೇರಿ, 11ರಂದು ಜಿಲ್ಲಾ ಮಟ್ಟದಲ್ಲಿ ಕಾಲ್ನಡಿಗೆ ನಡೆಯಲಿದೆ. ಅಂದೇ ಭಾರತೀಯ ವಾಯುಪಡೆ ವಿಮಾನಗಳು ಆಕಾಶದಲ್ಲಿ ತಿರಂಗಾ ಬಣ್ಣದೊಂದಿಗೆ ಹಾರಾಟ ನಡೆಸಲಿವೆ. 15ರಂದು ನೆಹರು ಕ್ರೀಡಾಂಗಣದಲ್ಲಿ 100 ಅಡಿ ಉದ್ದದ ಧ್ವಜ ಸ್ತಂಭ ನಿಮರ್ಿಸಿ ಅದರ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಲಾಗುತ್ತದೆ ಮತ್ತು ಸೆ.17ರಂದು ಕಲ್ಯಾಣ ಕನರ್ಾಟಕ ದಿನಾಚರಣೆ ವೇಳೆ ಬಸವಕಲ್ಯಾಣ ಕೋಟೆ ಮೇಲೆ ಧ್ವಜ ಹಾರಿಸಲಾಗುವುದು ಎಂದು ತಿಳಿಸಿದರು.

    ಜಿಪಂ ಸಿಇಒ ಶಿಲ್ಪಾ ಎಂ. ಮಾತನಾಡಿ, ಗ್ರಾಮ ಪಂಚಾಯಿತಿ ಸ್ವಂತ ಖಚರ್ಿನಿಂದ 83,250 ರಾಷ್ಟ್ರ ಧ್ವಜ ಖರೀದಿಸಿ, ಸ್ವಸಹಾಯ ಗುಂಪುಗಳ ಮೂಲಕ ಸಕರ್ಾರಿ ಕಚೇರಿ ಹಾಗೂ ಪ್ರತಿ ಮನೆಗೆ ಹಂಚಬೇಕು ಎಂದರು.

    ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಎಸ್ಪಿ ಡೆಕ್ಕಾ ಕಿಶೋರಬಾಬು, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತ ಮಹ್ಮದ್ ನಯೀಮ್ ಮೋಮಿನ್, ಡಿವೈಎಸ್ಪಿ ಕೆ.ಎಂ. ಸತೀಶ್, ನಗರಸಭೆ ಪೌರಾಯುಕ್ತ ಪ್ರಬುದ್ಧ ಕಾಂಬ್ಳೆ, ಬಿಡಿಎ ಆಯುಕ್ತ ಅಭಯಕುಮಾರ, ಪ್ರಮುಖರಾದ ವಿರೂಪಾಕ್ಷ ಗಾದಗಿ, ಶಶಿಧರ ಹೊಸಳ್ಳಿ, ವಿವಿಧ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು, ವಿದ್ಯಾಥರ್ಿಗಳು ಭಾಗವಹಿಸಿದ್ದರು.

    ಏಕಕಾಲಕ್ಕೆ ಐದು ಕಡೆಯಿಂದ ಜಾಥಾ: ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಜಿಲ್ಲಾಡಳಿತದಿಂದ ಗುರುವಾರ ನಗರದ ಐದು ಕಡೆ ಸೈಕಲ್ ಜಾಥಾ ಜರುಗಿತು. ಜಾಥಾದ ಒಂದು ತಂಡ ಪೊಲೀಸ್ ಗ್ರೌಂಡ್ನಿಂದ ಚೌಬಾರ, ನಯಾಕಮಾನ್, ಅಂಬೇಡ್ಕರ್ ವೃತ್ತ, ಕಾರ್ಯಪ್ಪ ಸರ್ಕಲ್, ರೋಟರಿ ವೃತ್ತದ ಮೂಲಕ ನೆಹರು ಕ್ರೀಡಾಂಗಣ ತಲುಪಿತು. ಮತ್ತೊಂದು ತಂಡ ಸಿದ್ಧಾರೂಢ ಮಠದಿಂದ ಮೈಲೂರು ಕ್ರಾಸ್, ಬೊಮ್ಮಗೊಂಡೇಶ್ವರ ವೃತ್ತ, ಭಗತಸಿಂಗ್ ವೃತ್ತ, ಡಿಸಿ ಕಚೇರಿ ಮೂಲಕ ಕ್ರೀಡಾಂಗಣಕ್ಕೆ ಬಂದಿತು. ಹಾಗೆಯೇ ಇನ್ನೊಂದು ತಂಡ ಕೋಟೆ ಮುಖ್ಯ ದ್ವಾರದಿಂದ, ಪ್ರತಾಪನಗರದ ಸಕರ್ಾರಿ ನೌಕರರ ಭವನ ಹಾಗೂ ಕೆಇಬಿ ಕಲ್ಯಾಣ ಮಂಟಪದಿಂದ ಕ್ರೀಡಾಂಗಣವರೆಗೆ ಜಾಥಾ ನಡೆಯಿತು. ಎಲ್ಲ ಐದು ಜಾಥಾಗಳು ಕ್ರೀಡಾಂಗಣಕ್ಕೆ ಆಗಮಿಸಿ ಸಮಾವೇಶಗೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts