More

    ಪ್ರತಿ ಪಾಸ್ ನೀಡಲು 100 ರೂ. ವಸೂಲಿ

    ಶಿರಸಿ: ಕರೊನಾ ವೈರಸ್ ಭೀತಿ ಕಾರಣ ಜನರು ಆರ್ಥಿಕ ನಷ್ಟದಲ್ಲಿ ಒದ್ದಾಡುತ್ತಿದ್ದರೆ, ಇಲ್ಲೊಂದು ಗ್ರಾಮ ಪಂಚಾಯಿತಿ ಮಾತ್ರ ಜನರಿಂದ ಅವಶ್ಯಕ ವಸ್ತುಗಳಿಗಾಗಿ ತೆರಳಲು ನೀಡುವ ಪಾಸ್​ಗೆ ಹಣ ಪಡೆಯುತ್ತಿದೆ.

    ತಾಲೂಕಿನ ಶಿವಳ್ಳಿ (ಹೆಗಡೆಕಟ್ಟಾ) ಗ್ರಾಮ ಪಂಚಾಯಿತಿ ಇದೇ ಸಮಯವೆಂದು ಸಿಕ್ಕಷ್ಟು ಹಣ ವಸೂಲಿ ಮಾಡುವುದರಲ್ಲಿ ನಿರತವಾಗಿದೆ. ಲಾಕ್​ಡೌನ್ ಅನ್ನೇ ನೆಪವಾಗಿಸಿಕೊಂಡು ಜನರಿಗೆ ಆಸ್ಪತ್ರೆ ಸೇರಿ ಅವಶ್ಯಕ ಕೆಲಸಗಳಿಗಾಗಿ ತೆರಳುವುದಕ್ಕೆ ಅನುಮತಿ ಪತ್ರ ನೀಡಲು ಹಣ ವಸೂಲಿ ಮಾಡುತ್ತಿದೆ. ಪ್ರತಿ ಪಾಸ್​ಗೆ 100 ರೂ. ಪಡೆಯಲಾಗುತ್ತಿದೆ.

    ಈ ಸಂಬಂಧ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೇವಲ ಅವಶ್ಯಕ ಸೇವೆಗಳಿಗಾಗಿ ಮಾತ್ರ ಪಾಸ್ ನೀಡಲು ಗ್ರಾಮ ಪಂಚಾಯಿತಿಗೆ ಅಧಿಕಾರವಿದೆ. ಅದನ್ನೂ ಉಚಿತವಾಗಿ ನೀಡಬೇಕು. ಆದರೆ, ಈ ಗ್ರಾಮ ಪಂಚಾಯಿತಿ ಪ್ರತಿ ಪಾಸ್ ನೀಡಲು 100 ರೂ. ಪಡೆಯುತ್ತಿದೆ. ಕರೊನಾ ಸಂಕಷ್ಟದಲ್ಲಿರುವ ಜನರಿಗೆ ಸಾಧ್ಯವಾದಷ್ಟು ನೆರವು ನೀಡುವ ಬದಲು ಈ ರೀತಿ ಅವರಿಂದಲೇ ಹಣ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದು ಸರ್ಕಾರ ಮತ್ತು ಗ್ರಾಮ ಪಂಚಾಯಿತಿಗಳ ಕರ್ತವ್ಯ. ಅದನ್ನು ಬಿಟ್ಟು ಪಾಸ್ ನೀಡಲು ಯಾರಿಂದಲೂ ಹಣ ಪಡೆಯುವಂತಿಲ್ಲ. ಹಾಗೊಮ್ಮೆ ಅಕ್ರಮವಾಗಿ ಹಣ ಪಡೆದರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. | ಜಿ.ಟಿ.ನಾಯಕ ಡಿವೈಎಸ್ಪಿ

    ಪಾಸ್ ನೀಡಲು ಹಣ ಪಡೆಯುವುದಕ್ಕೆ ಅವಕಾಶವಿಲ್ಲ. ಈ ಬಗ್ಗೆ ದೂರು ನೀಡಿದರೆ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. | ಎಂ.ರೋಷನ್ ಜಿಲ್ಲಾ ಪಂಚಾಯಿತಿ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts